ಇದೀಗ ಕೋಲಾರದ ಸಮೀಪ ತ್ಯಾಜ್ಯ ನಿರ್ವಹಣೆ ಮಾಡಲು ಉದ್ದೇಶಿಸಿರುವ ಸ್ಥಳ ಕೆಜಿಎಫ್ ನಿಂದ 5 ಕಿಲೋ ಮೀಟರ್ ದೂರದಲ್ಲಿದೆ. 500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುವ ಈ ಪಾರ್ಕ್ ನಲ್ಲಿ ವಿದ್ಯುತ್, ಬಯೋಗ್ಯಾಸ್ ಮತ್ತು ಕಾಂಪೋಸ್ಟ್ ಗಳನ್ನು ತಯಾರಿಸಲಾಗುತ್ತದೆ. ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ನ ನಿರ್ದೇಶನದಂತೆ ದುರ್ವಾಸನೆಯನ್ನು ತಡೆದು ಪರಿಸರ ಸ್ನೇಹಿ ತ್ಯಾಜ್ಯ ಘಟಕವನ್ನು ಸ್ಥಾಪಿಸಬೇಕಾಗಿದೆ. ಹಸಿರು ವಲಯಗಳನ್ನು ಕೂಡ ಉಳಿಸಬೇಕಾಗಿದೆ. ರಾಜ್ಯ ಸರ್ಕಾರ ಇದನ್ನು ಬಜೆಟ್ ನಲ್ಲಿ ಘೋಷಿಸಬೇಕು. ನಾವು ತಜ್ಞರ ಅಭಿಪ್ರಾಯಗಳನ್ನು ಪಡೆದು ಪರಿಸರ ಪರಿಣಾಮದ ಸಾಧ್ಯತೆಗಳನ್ನು ಅಧ್ಯಯನ ಮಾಡಬೇಕು.ಇದು ಆರಂಭಿಕ ಹಂತವಷ್ಟೆ ಎನ್ನುತ್ತಾರೆ ಅವರು.