ಬೆಂಗಳೂರು: ತುಂಬಿ ತುಳುಕುತ್ತಿರುವ ಖಾಸಗಿ ವಾಹನಗಳು

ಮೆಟ್ರೋ ಸೇವೆಗಳ ತ್ವರಿತ ವಿಸ್ತರಣೆ, ಉಪನಗರ ರೈಲು ಜಾಲಗಳು ಮತ್ತು ಹೆಚ್ಚಿನ ಸರ್ಕಾರಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಮೆಟ್ರೋ ಸೇವೆಗಳ ತ್ವರಿತ ವಿಸ್ತರಣೆ, ಉಪನಗರ ರೈಲು ಜಾಲಗಳು ಮತ್ತು ಹೆಚ್ಚಿನ ಸರ್ಕಾರಿ ಬಸ್ಸುಗಳು  ಸೇರ್ಪಡೆಯಾಗುತ್ತಿದ್ದರೂ ಕೂಡ ಕಳೆದ ಕೆಲ ವರ್ಷಗಳಿಂದ ನಗರಗಳಲ್ಲಿ ದಾಖಲಾತಿಯಾಗುವ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. 
ಕಳೆದ 10 ವರ್ಷಗಳಲ್ಲಿ 38.23 ಲಕ್ಷ ಹೊಸ ವಾಹನಗಳು ನಗರದಲ್ಲಿ ದಾಖಲಾಗಿವೆ ಎಂದು ಸಾರಿಗೆ ಇಲಾಖೆಯ ದಾಖಲೆಗಳು ಹೇಳುತ್ತವೆ. 2016-17ರಲ್ಲಿ ಒಟ್ಟು 7.2 ಲಕ್ಷ ಹೊಸ ವಾಹನಗಳು ದಾಖಲಾಗಿವೆ. ಅದು ಕಳೆದ 10 ವರ್ಷಗಳಲ್ಲಿ ಅತಿ ಹೆಚ್ಚಿನ ಪ್ರಮಾಣವಾಗಿದೆ. ಕಳೆದ ವರ್ಷ ನೋಟುಗಳ ಅಮಾನ್ಯತೆ ನಂತರವೂ ವಾಹನಗಳ ಖರೀದಿ ಮಾತ್ರ ಬೆಂಗಳೂರು ನಗರದಲ್ಲಿ ಕಡಿಮೆಯಾಗಿಲ್ಲ. ಸರಾಸರಿ 1,973 ವಾಹನಗಳು 2016-17ರಲ್ಲಿ ಪ್ರತಿದಿನ ಎಂಬಂತೆ ದಾಖಲಾಗುತ್ತಿದ್ದವು.
2015-16ರಲ್ಲಿ 5.53 ಲಕ್ಷ ಹೊಸ ವಾಹನಗಳು ದಾಖಲಾತಿಯಾಗುತ್ತಿದ್ದರೆ. 2013-14ರಲ್ಲಿ ಅದರ ಪ್ರಮಾಣ 4.58 ಲಕ್ಷಗಳು. ಹೆಚ್ಚುವರಿ 1.15 ಲಕ್ಷ ವಾಹನಗಳು 2016-17ರಲ್ಲಿ ಸೇರ್ಪಡೆಗೊಂಡಿವೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ದೇವನಹಳ್ಳಿ ಕಚೇರಿಯನ್ನು ಬೆಂಗಳೂರು ನಗರ ವಿಭಾಗಕ್ಕೆ ವರ್ಗಾಯಿಸಲಾಗಿದೆ. 2016-17ರಲ್ಲಿ ಬೆಂಗಳೂರು ನಗರದಲ್ಲಿ 6.05 ಲಕ್ಷ ಹೊಸ ವಾಹನಗಳು ದಾಖಲಾತಿ ಮಾಡಿಕೊಂಡಿವೆ.
ಜನಸಂಖ್ಯೆ ಹೆಚ್ಚಳ, ಅಸಮರ್ಪಕ ಸಾರ್ವಜನಿಕ ಸಾರಿಗೆ, ಸುಲಭ ಸಾಲ ಮತ್ತು ಇಎಂಐ ಯೋಜನೆಗಳು ಜನರು ಹೆಚ್ಚು ಹೆಚ್ಚಾಗಿ ವಾಹನ ಖರೀದಿಸಲು ಸಹಾಯವಾಗಿದೆ ಎನ್ನುತ್ತಾರೆ ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು. ನಗರದಲ್ಲಿ ಒಟ್ಟು 69.31 ಲಕ್ಷ ವಾಹನಗಳಿದ್ದು ಅವುಗಳಲ್ಲಿ 48 ಲಕ್ಷ ದ್ವಿಚಕ್ರ ವಾಹನಗಳು ಮತ್ತು 13.40 ಲಕ್ಷ ಕಾರುಗಳು ಇವೆ ಎಂದು ಈ ವರ್ಷ ಮೇ ತಿಂಗಳಲ್ಲಿ ಅಂಕಿಅಂಶ ಸಿಕ್ಕಿದೆ. ನಗರದಲ್ಲಿ ಹೆಚ್ಚುತ್ತಿರುವ ಖಾಸಗಿ ವಾಹನಗಳ ಸಂಖ್ಯೆಯಿಂದ ನಗರದಲ್ಲಿ ಪೀಕ್ ಅವರ್ ಗಳಲ್ಲಿ ದಟ್ಟಣೆ ಹೆಚ್ಚಾಗುತ್ತಿದೆ. ವಾಯು ಮಾಲಿನ್ಯ, ಅಪಘಾತಗಳು ಮತ್ತು ಒತ್ತಡಗಳು ಕೂಡ ಜಾಸ್ತಿಯಾಗುತ್ತಿವೆ.
ಇದು ಖಾಸಗಿ ವಾಹನದ ಬಳಕೆಯನ್ನು ತಗ್ಗಿಸಿ ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸುವ ಅಗತ್ಯತೆಯನ್ನು ಸಾರುತ್ತದೆ. ಪಾರ್ಕಿಂಗ್ ಯೋಜನೆಯನ್ನು ಬಿಬಿಎಂಪಿ ಇನ್ನು ಕೂಡ ರೂಪಿಸಿಲ್ಲ. ಬಿಎಂಟಿಸಿ ಬಸ್ಸುಗಳಿಗೆ ಆದ್ಯತಾ ಗೆರೆಯನ್ನು ನಿಗದಿಪಡಿಸಿ ಪಾರ್ಕಿಂಗ್ ಶುಲ್ಕವನ್ನು ಸಂಚಾರಿ ಪೊಲೀಸರು ಇನ್ನು ಕೂಡ ತರಲು ತಯಾರಿಲ್ಲ. ಬಿಎಂಟಿಸಿ ಬಸ್ಸುಗಳಿಗೆ ನಿಗದಿತ ರಸ್ತೆಗಳು ಮತ್ತು ಅತ್ಯಧಿಕ ಪಾರ್ಕಿಂಗ್ ಶುಲ್ಕವನ್ನು ಹೇರುವುದರಿಂದ ಬಹುಪಾಲು ಮಂದಿ ಸಾರ್ವಜನಿಕ ಸಾರಿಗೆಯನ್ನು ಬಳಸಲು ಆರಂಭಿಸುತ್ತಾರೆ ಎನ್ನುತ್ತಾರೆ ಅಧಿಕಾರಿಯೊಬ್ಬರು.
ವಾಹನಗಳ ಸಂಖ್ಯೆ ಹೆಚ್ಚಾದಂತೆ ದಟ್ಟಣೆ, ಮಾಲಿನ್ಯ (ಧ್ವನಿ ಮತ್ತು ಗಾಳಿ) ಮತ್ತು ಪಾರ್ಕಿಂಗ್ ಸಮಸ್ಯೆಗಳು ಇನ್ನೂ ಜಾಸ್ತಿಯಾಗುತ್ತದೆ. ಬಿಎಂಟಿಸಿ ದರಗಳನ್ನು ಕಡಿತ ಮಾಡಿ ಸಾರ್ವಜನಿಕ ಸಾರಿಗೆ ಬಸ್ಸುಗಳನ್ನು ಹೆಚ್ಚಿಸಿ ಖಾಸಗಿ ವಾಹನಗಳನ್ನು ಜನರು ಕಡಿಮೆ ಬಳಸುವಂತೆ ಬಿಬಿಎಂಪಿ ಮತ್ತು ಸಾರಿಗೆ ಮತ್ತು ಸಂಚಾರ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಎನ್ನುತ್ತಾರೆ ಅಧಿಕಾರಿಗಳು.
ಸಾರಿಗೆ ಅಭಿವೃದ್ಧಿ ಮತ್ತು ನೀತಿ ಸಂಸ್ಥೆಯ ಅದ್ವೈತ್ ಜಾನಿ ಮಾತನಾಡಿ, ಪ್ರತಿವರ್ಷ  ಹೊಸ ದಾಖಲಾತಿ ಮಾಡಿಕೊಳ್ಳುವ ವಾಹನಗಳಿಗೆ ಪ್ರತಿವರ್ಷ ಸರ್ಕಾರ ಹೆಚ್ಚುವರಿ ತೆರಿಗೆ ವಿಧಿಸಬೇಕು. ಇಂಧನ ಮತ್ತು ಕಂಜೆಷನ್ ಬೆಲೆಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಬೇಕು. ಭಾರತದಲ್ಲಿ ಆದಾಯ ಕಡಿಮೆಯಾಗಬಹುದು ಮತ್ತು ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಭಾರತದಲ್ಲಿ ಅನೇಕ ನಗರಗಳು ಇಂತಹ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com