ಮೈಸೂರು: ಇನ್ಫೋಸಿಸ್ ಉದ್ಯೋಗಿ ಶವ ಪತ್ತೆ, ಆತ್ಮಹತ್ಯೆ ಶಂಕೆ

ಇನ್ಫೋಸಿಸ್ ನಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷದ ಮಹಿಳಾ ಸಾಫ್ಟ್ ವೇರ್ ಉದ್ಯೋಗಿ ಶವ ಪತ್ತೆಯಾಗಿದೆ...
ಮೀನಾಕ್ಷಿ
ಮೀನಾಕ್ಷಿ
ಮೈಸೂರು: ಇನ್ಫೋಸಿಸ್  ನಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷದ ಮಹಿಳಾ ಸಾಫ್ಟ್ ವೇರ್ ಉದ್ಯೋಗಿ ಶವ ಪತ್ತೆಯಾಗಿದೆ.
ಮೈಸೂರಿನ ಹೆಬ್ಬಾಳದ 3ನೇ ಹಂತದ ಬಾಡಿಗೆ ಮನೆಯಲ್ಲಿ ಗುರುವಾರ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಮೀನಾಕ್ಷಿ ಎಂದು ಗುರುತಿಸಲಾಗಿದೆ. ಕಲಬುರಗಿಯ ಸೇಡಂ ಮೂಲದ ಮೀನಾಕ್ಷಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಸೋಮವಾರದಿಂದ ಮೀನಾಕ್ಷಿ ಕಚೇರಿಗೂ ಹೋಗಿರಲಿಲ್ಲ, ಸಹೋದ್ಯೋಗಿಗಳ ಕರೆಯನ್ನು ಸ್ವೀಕರಿಸಿರಲಿಲ್ಲ,  ಬುಧವಾರ ಸಂಜೆ ಮೀನಾಕ್ಷಿ ವಾಸವಿದ್ದ ಮನೆಯಿಂದ ವಾಸನೆ ಬರುತ್ತಿದ್ದರಿಂದ ಮನೆ ಮಾಲೀಕರು ಕಿಟಕಿ ಮೂಲಕ ನೋಡಿದ್ದಾರೆ. ಈ ವೇಳೆ ಅವರು ಹೆಬ್ಬಾಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಜೊತೆಗೆ ಕಲಬುರಗಿಯಲ್ಲಿದ್ದ ಮೀನಾಕ್ಷಿ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ನಂತರ ಪೊಲೀಸರು ಬಾಗಿಲು ಮುರಿದು ನೋಡಿದ್ದಾರೆ. ಈ ವೇಳೆ ಫ್ಯಾನ್ ಗೆ ನೇಣು ಹಾಕಿಕೊಂಡಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಹೆಬ್ಬಾಳ ಪೊಲೀಸ್ ಇನ್ಸ್ ಪೆಕ್ಟರ್ ತಿಮ್ಮಗೌಡ ಮೀನಾಕ್ಷಿ ಸಾವಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಹೇಳಿದ್ದಾರೆ. ಕಳೆದ ಶನಿವಾರ ಮೀನಾಕ್ಷಿ ತನ್ನ ತಾಯಿಗೆ ಕರೆ ಮಾಡಿದ್ದರು. ಆ ವೇಳೆ ತುಂಬಾ ನೋವಿನಲ್ಲಿದ್ದಳು, ಆದರೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.
ಕಳೆದ ಕೆಲವು ತಿಂಗಳ ಹಿಂದೆ ಮೀನಾಕ್ಷಿ ಇನ್ಫೋಸಿಸ್ ಗೆ ಸೇರಿದ್ದು, ತರಬೇತಿ ಪೂರ್ಣಗೊಳಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com