ಶಿಕ್ಷಣವಿಲ್ಲದೇ ಸಾಮಾಜಿಕ ನ್ಯಾಯ ಸಾಧ್ಯವಿಲ್ಲ: ಕೈಲಾಶ್ ಸತ್ಯಾರ್ಥಿ

ನಾನು ಸಮಾಜದಿಂದ ಬಹಿಷ್ಕೃತಗೊಂಡಿದ್ದೆ ಹಾಗಾಗಿ ನಾನು ಇಡೀ ಸಮಾಜದ ಜಾತಿ ವ್ಯನಸ್ಥೆ ಬದಲಾಯಿಸಲು ನಿರ್ಧರಿಸಿದೆ ಎಂದು ನೊಬೆಲ್ ...
ಕೈಲಾಶ್ ಸತ್ಯಾರ್ಥಿ
ಕೈಲಾಶ್ ಸತ್ಯಾರ್ಥಿ
ಬೆಂಗಳೂರು: ನಾನು ಸಮಾಜದಿಂದ ಬಹಿಷ್ಕೃತಗೊಂಡಿದ್ದೆ ಹಾಗಾಗಿ ನಾನು ಇಡೀ ಸಮಾಜದ ಜಾತಿ ವ್ಯನಸ್ಥೆ ಬದಲಾಯಿಸಲು ನಿರ್ಧರಿಸಿದೆ ಎಂದು ನೊಬೆಲ್ ಪುರಸ್ಕೃತ ಸಾಮಾಜಿಕ ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಹೇಳಿದ್ದಾರೆ.
ಕರ್ನಾಟಕ ಸರ್ಕಾರದ ವತಿಯಿಂದ ಜಿಕೆವಿಕೆ ಆವರಣದಲ್ಲಿ ಆಯೋಜಿಸಲಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಅಂತರರಾಷ್ಟ್ರೀಯ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊದಲ ನಮ್ಮನ್ನು ನಾವು ಸ್ವತಃ ಶುದ್ಧೀಕರಿಸಬೇಕು, ಗಂಗಾ ನದಿಯಲ್ಲಿ ಸ್ನಾನ ಮಾಡಿ, 101 ಪೂಜಾರಿಗಳ ಪಾದ ತೊಳೆದು  ಆ ನೀರು ಕಡಿಯಬೇಕೆಂದು ನನಗೆ ಆದೇಶವಾಗಿತ್ತು.  ಮನೆಯಲ್ಲಿ ಪ್ರತ್ಯೇಕ ಕೊಠಡಿ ನೀಡಲಾಗಿತ್ತು ಎಂದು ಸತ್ಯಾರ್ಥಿ ತಮ್ಮ ಬಾಲ್ಯದಲ್ಲಿ ನಡೆದ ಘಟನೆಗಳ ಬಗ್ಗೆ ತಿಳಿಸಿದ್ದಾರೆ.
ಬ್ರಾಹ್ಮಣರ ಕುಟುಂಬದಲ್ಲಿ ಹುಟ್ಟಿದ್ದರೂ ತಮ್ಮದೇ ಸ್ವಂತ ಕುಟುಂಬದಿಂದ ಅವರನ್ನು ಹೊರಗಿಡಲಾಗಿತ್ತು. ಗ್ರಾಮದಲ್ಲಿ  ಮೇಲ್ಜಾತಿ ಜನರಿಗೆ ದಲಿತರು ಅಡುಗೆ ಮಾಡಿ ಕೊಡುವಂತೆ ಅವಕಾಶ ಕಲ್ಪಿಸಲಾಗಿತ್ತು. 
ತಮ್ಮ ಹೆಸರಿನಲ್ಲಿ ಶರ್ಮಾ ಎಂಬ ಸರ್ ನೇಮ್  ಬದಲು ಸತ್ಯಾರ್ಥಿ (ಸತ್ಯ ಹುಡುಕುವವನು) ಎಂದು ಬದಲಾಯಿಸಿಕೊಂಡೆ ಎಂದು ಹೇಳಿದ ಅವರು, ದಲಿತ ವ್ಯಕ್ತಿಯನ್ನು ದೇವಾಸ್ಥಾನದೊಳಗೆ ಕರೆದೊಯ್ದಿದ್ದಕ್ಕೆ, ಪೂಜಾರಿ ಮತ್ತು ಅಲ್ಲಿಗೆ ಬಂದ ಗುಂಪೊಂದು ನನ್ನ ಮೇಲೆ ಹಲ್ಲೆ ಮಾಡಿ, ನಾನು ರಕ್ತದ ಮಡುವಿನಲ್ಲಿ ಬಿದ್ದಿದ್ದೆ ಎಂದು ಸತ್ಯಾರ್ಥಿ ಹೇಳಿದರು. 
ಅಂಬೇಡ್ಕರ್ ಅವರನ್ನು ನೆನಪಿಸಿಕೊಂಡರೇ ಮಾತ್ರ ಸಾಲದು, ಶಿಕ್ಷಣವಿಲ್ಲದೇ  ಸಾಮಾಜಿಕ ನ್ಯಾಯ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಭಾರತದಲ್ಲಿ 16.8 ಕೋಟಿ ಮಕ್ಕಳು ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ, ಶೈಕ್ಷಣಿಕ ಹಕ್ಕು ಪ್ರತಿಪಾದಿಸಿದವರಲ್ಲಿ ಅಂಬೇಡ್ಕರ್ ಮೊದಲಿಗರು ಎಂದು ಹೇಳಿದ್ದಾರೆ. ಸಾವಿರಾರು ಮಕ್ಕಳು ಶಿಕ್ಷಣ ಪಡೆಯುವ ಕನಸು ಕಾಣುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com