ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಹಾಜರಾತಿಗೆ ಮೊಬೈಲ್ ಆ್ಯಪ್ ಬಳಕೆ

ಮೈಸೂರಿನಲ್ಲೇ ಮೊದಲು ಎಂಬಂತೆ ಸರ್ಕಾರಿಶಾಲೆಯೊಂದರಲ್ಲಿ ವಿದ್ಯಾರ್ಥಿಗಳ ಹಾಜರಾತಿ ಗಣನೆಗೆ ಮೊಬೈಲ್ ಆ್ಯಪ್ ಬಳಕೆ ಮಾಡಲಾಗುತ್ತಿದೆ.
ವಿದ್ಯಾರ್ಥಿಗಳೊಂದಿಗೆ ರಾಜವಂಶಸ್ಥ ಯದವೀರ್ ಕೃಷ್ಣದತ್ತ ಒಡೆಯರ್
ವಿದ್ಯಾರ್ಥಿಗಳೊಂದಿಗೆ ರಾಜವಂಶಸ್ಥ ಯದವೀರ್ ಕೃಷ್ಣದತ್ತ ಒಡೆಯರ್

ಮೈಸೂರು: ಮೈಸೂರಿನಲ್ಲೇ ಮೊದಲು ಎಂಬಂತೆ ಸರ್ಕಾರಿಶಾಲೆಯೊಂದರಲ್ಲಿ ವಿದ್ಯಾರ್ಥಿಗಳ ಹಾಜರಾತಿ ಗಣನೆಗೆ ಮೊಬೈಲ್ ಆ್ಯಪ್ ಬಳಕೆ ಮಾಡಲಾಗುತ್ತಿದೆ.

ಮೈಸೂರಿನ ಹಳೇ ಕೆಸರೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಹಾಜರಾತಿಗೆ ಮೊಬೈಲ್ ಆ್ಯಪ್ ಬಳಕೆ ಮಾಡಲಾಗುತ್ತಿದ್ದು, ಬ್ರಿಟನ್ ಮೂಲದ ಜೀನಿಯಸ್ ಲೀಡ್ ಎಂಬ ಸಂಸ್ಥೆ ನಿರ್ಮಾಣ ಮಾಡಿರುವ  ಆ್ಯಪ್ ನಲ್ಲಿ ವಿದ್ಯಾರ್ಥಿಗಳ ಹಾಜರಾತಿ ಹಾಕಲಾಗುತ್ತಿದೆ. ಶನಿವಾರ ನಗರದ ಸೆಂಟ್ ಫಿಲೋಮಿನಾ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ನರಸಿಂಹರಾಜ ಒಡೆಯರ್ ಅವರು ಆ್ಯಪ್ ಬಿಡುಗಡೆ  ಮಾಡಿದರು. ಅಂತೆಯೇ ಇದೇ ಆ್ಯಪ್ ಅನ್ನು ಸೆಂಟ್ ಫಿಲೋಮಿನಾ ಕಾಲೇಜು ಆಡಳಿತ ಮಂಡಳಿ ಕೂಡ ಅಳವಡಿಕೊಂಡಿದೆ.

ಇನ್ನು ಆ್ಯಪ್ ಬಳಕೆ ಕುರಿತು ಮಾತನಾಡಿರುವ ಶಾಲೆಯ ಮುಖ್ಯ ಶಿಕ್ಷಕ ಸಿ ಸೋಮಶೇಖರ್ ಅವರು ಹಾಜರಾತಿಗೆ ಬಳಸಲಾಗುತ್ತಿರುವ ಸ್ಮಾರ್ಟ್ ಅಟೆಂಡೆನ್ಸ್ ಆ್ಯಪ್ ಬಳಕೆಗೆ ಸುಲಭವಾಗಿದೆ. ಮೊದಲೇ ಆ್ಯ್ರಪ್ ವಿದ್ಯಾರ್ಥಿಗಳ  ಹೆಸರುಗಳನ್ನು ನಮೂದಿಸಿರುವುದರಿಂದ ಅವರ ಹೆಸರಿನ ಮುಂದೆ ಸ್ವೈಪ್ ಮಾಡಿದರೆ ಹಾಜರಾತಿ ದಾಖಲಾಗುತ್ತದೆ. ಒಂದು ಬಾರಿ ಎಲ್ಲ ವಿದ್ಯಾರ್ಥಿಗಳ ಸ್ವೈಪಿಂಗ್ ಮುಕ್ತಾಯವಾದರೆ ಆ್ಯಪ್ ನಲ್ಲಿ ತಕ್ಷಣವೇ ಹಾಜರಾದ ವಿದ್ಯಾರ್ಥಿಗಳ  ಒಟ್ಟು ಸಂಖ್ಯೆ ಹಾಗೂ ಗೈರಾದ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ ಪ್ರದರ್ಶನವಾಗುತ್ತದೆ. ಇದರಿಂದ ಶಿಕ್ಷಕರ ಕೆಲಸ ಕಡಿಮೆಯಾಗುತ್ತದೆ ಎಂದು ಹೇಳಿದರು.

ಇನ್ನು ಆ್ಯಪ್ ತಯಾರಿಸಿರುವ ಜಿಎಲ್ ಸಂಸ್ಥೆಯ ಸಿಇಒ ದೀಪಕ್ ರಾಯ್ ಅವರು ಮಾತನಾಡಿ , ನನ್ನ ಚಿಕ್ಕ ವಯಸ್ಸಿನಲ್ಲಿ ನಾನು ಇದೇ ಶಾಲೆಯ ಸಮೀಪದಲ್ಲೇ ನೆಲೆಸಿದ್ದೆ. ಈ ಶಾಲೆಗಾಗಿ ಆ್ಯಪ್ ತಯಾರಿಸಿಕೊಟ್ಟಿರುವುದು ನನಗೆ  ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಹೀಗಾಗಿ ಈ ಆ್ಯಪ್ ಅನ್ನು ಶಾಲೆಗಾಗಿ ಉಚಿತವಾಗಿ ನೀಡಿದ್ದೇನೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com