ಪದ್ಮ, ಭಾರತ ರತ್ನ ಪ್ರಶಸ್ತಿಗಳನ್ನು ಕಿತ್ತು ಹಾಕಿ: ಜೈರಾಮ್ ರಮೇಶ್

ಗೊಂದಲ ಸೃಷ್ಟಿ ಮಾಡುವುದರಿಂದ ಮತ್ತು ಪ್ರಶಸ್ತಿಗೆ ಯಾರನ್ನು ಆಯ್ಕೆ ಮಾಡಬೇಕು,ಯಾರನ್ನು...
ಮಾಜಿ ಸಚಿವ ಹಾಗೂ ಸಂಸದ ಜೈರಾಮ್ ರಮೇಶ್
ಮಾಜಿ ಸಚಿವ ಹಾಗೂ ಸಂಸದ ಜೈರಾಮ್ ರಮೇಶ್
Updated on: 
ಬೆಂಗಳೂರು: ಗೊಂದಲ ಸೃಷ್ಟಿ ಮಾಡುವುದರಿಂದ ಮತ್ತು ಪ್ರಶಸ್ತಿಗೆ ಯಾರನ್ನು ಆಯ್ಕೆ ಮಾಡಬೇಕು,ಯಾರನ್ನು ಮಾಡಬಾರದು ಎಂಬ ಚರ್ಚೆಗಳು ನಡೆಯುವುದರಿಂದ ಕೇಂದ್ರ ಸರ್ಕಾರ ನೀಡುವ ಪದ್ಮ ಭೂಷಣ, ಪದ್ಮ ವಿಭೂಷಣ ಹಾಗೂ ಭಾರತ ರತ್ನ ಪ್ರಶಸ್ತಿಗಳನ್ನು ತೆಗೆದುಹಾಕಬೇಕೆಂದು ಮಾಜಿ ಸಚಿವ ಹಾಗೂ ಸಂಸದ ಜೈರಾಮ್ ರಮೇಶ್ ಒತ್ತಾಯಿಸಿದ್ದಾರೆ.
ಅವರು ಬೆಂಗಳೂರಿನಲ್ಲಿ ನಿನ್ನೆ ಸಮ್ಮೇಳನವೊಂದರ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡಿ,  ಈ ಪ್ರಶಸ್ತಿಗಳು ಸಮಸ್ಯೆಗಳನ್ನು ಬಗೆಹರಿಸುವುದಕ್ಕಿಂತ ಹೆಚ್ಚಾಗಿ ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ಹಾಗಾಗಿ ಈ ಪ್ರಶಸ್ತಿಗಳನ್ನು ನೀಡದಿರುವುದೇ ಒಳ್ಳೆಯದೆಂದು ನನ್ನ ಭಾವನೆ. ನಾವು ಶ್ರದ್ಧೆ, ಪ್ರಾಮಾಣಿಕತೆಯಿಂದ ಮಾಡುವ ಕೆಲಸವೇ ನಮಗೆ ಒಂದು ದೊಡ್ಡ ಬಹುಮಾನ ಎಂದು ಅಭಿಪ್ರಾಯಪಟ್ಟರು.
ಸಂಗೀತಗಾರರು, ಕ್ರೀಡಾಪಟುಗಳು, ಸಕ್ರಿಯ ಕಾರ್ಯಕರ್ತರನ್ನು  ಗೌರವಿಸಬೇಕು.  ಆದರೆ ರಾಜಕೀಯ ವ್ಯಕ್ತಿಗಳಿಗೆ ಸಾರ್ವಜನಿಕ ಸೇವೆಯೇ ದೊಡ್ಡ ಬಹುಮಾನ ಎಂದು ಹೇಳಿದರು. 
ಸದ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಮಾತನಾಡಿದ ಅವರು, ಆರ್ಎಸ್ಎಸ್ ಮತ್ತು ಬಿಜೆಪಿಗಳೆರಡೂ ರಾಜಕೀಯ ಲಾಭಕ್ಕಾಗಿ ಮಹಾತ್ಮಾ ಗಾಂಧಿಯವರನ್ನು ಹೈಜಾಕ್ ಮಾಡಿದಂತೆ ಡಾ.ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಹೈಜಾಕ್ ಮಾಡಲು ಪ್ರಯತ್ನಿಸುತ್ತಿದೆ. ಆರ್ಎಸ್ಎಸ್ ಮತ್ತು ಮೋದಿಯವರದ್ದು ಸಂಪೂರ್ಣ ಬೂಟಾಟಿಕೆ. ಅವರು ಎಲ್ಲಾ ಸಂಸದೀಯ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಜೈರಾಮ್ ರಮೇಶ್ ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com