ನಾನು ನನ್ನ ಕರ್ತವ್ಯ ನಿರ್ವಹಿಸಿದ್ದೇನೆ, ಕ್ಷಮೆಯಾಚಿಸುವುದಿಲ್ಲ: ಡಿಐಜಿ ರೂಪಾ

ನಾನು ನನ್ನ ಕರ್ತವ್ಯವನ್ನು ನಿರ್ವಹಿಸಿದ್ದು, ನನ್ನ ವಿರುದ್ಧ ಯಾವುದೇ ಮಾನನಷ್ಟ ಮೊಕದ್ದಮೆಗಳಿಲ್ಲ. ಹೀಗಿರುವಾಗ ನಾನೇಕೆ ಕ್ಷಮೆಯಾಚಿಸಬೇಕೆಂದು ಡಿಐಜಿ ಡಿ. ರೂಪಾ ಅವರು ಗುರುವಾರ ಹೇಳಿದ್ದಾರೆ...
ಡಿಐಜಿ ಡಿ. ರೂಪಾ
ಡಿಐಜಿ ಡಿ. ರೂಪಾ
Updated on
ಬೆಂಗಳೂರು: ನಾನು ನನ್ನ ಕರ್ತವ್ಯವನ್ನು ನಿರ್ವಹಿಸಿದ್ದು, ನನ್ನ ವಿರುದ್ಧ ಯಾವುದೇ ಮಾನನಷ್ಟ ಮೊಕದ್ದಮೆಗಳಿಲ್ಲ. ಹೀಗಿರುವಾಗ ನಾನೇಕೆ ಕ್ಷಮೆಯಾಚಿಸಬೇಕೆಂದು ಡಿಐಜಿ ಡಿ. ರೂಪಾ ಅವರು ಗುರುವಾರ ಹೇಳಿದ್ದಾರೆ. 
ತಾವು ಹೊರಿಸಿರುವ ಆರೋಪ ಸಾಬೀತುಪಡಿಸಬೇಕು. ಇಲ್ಲವೇ ಬೇಷರತ್ ಕ್ಷಮೆಯಾಚಿಸದೆ ಹೋದರೆ ರೂ.50 ಕೋಟಿ ಮೊತ್ತದ ಮಾನಹಾನಿ ಮೊಕದ್ದಮೆ ದಾಖಲಿಸುವುದಾಗಿ ಡಿಐಜಿ ರೂಪಾ ಅವರಿಗೆ ಸತ್ಯನಾರಾಯಣ್ ರಾವ್ ಅವರು ಎಚ್ಚರಿಕೆ ನೀಡಿ ಜುಲೈ.17 ರಂದು ಕಾನೂನು ನೋಟಿಸ್ ನೀಡಿದ್ದರು. 
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ರೂಪಾ ಅವರು, ನನ್ನ ವಿರುದ್ಧ ಯಾವುದೇ ಮಾನನಷ್ಟ ಮೊಕದ್ದಮೆ ದಾಖಲಾಗಿಲ್ಲ ಎಂದ ಮೇಲೆ ನಾನೇಕೆ ಕ್ಷಮೆಯಾಚಿಸಬೇಕೆಂದು ಪ್ರಶ್ನೆ ಹಾಕಿದ್ದಾರೆ. 
ರಾವ್ ಅವರ ನೀಡಿರುವ ನೋಟಿಸ್'ನ್ನು ನೋಡಿದ್ದೇನೆ. ನಾನು ನನ್ನ ಕರ್ತವ್ಯವನ್ನಷ್ಟೇ ನಿರ್ವಹಿಸಿದ್ದೇನೆ. ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದಲ್ಲಿಯೂ ಪ್ರಕರಣ ದಾಖಲಾಗಿದೆ. ಅದರ ಕಡೆಗೂ ಅವರು ಗಮನ ಕೊಡಬೇಕಿದೆ. ಚುನಾವಣಾ ಆಯೋಗ ಭ್ರಷ್ಟಾಚಾರ ಪ್ರಕರಣ ಸಂಬಂಧ ಆಸ್ಟ್ರೇಲಿಯಾ ಪ್ರಕಾಶ್ ಅವರು ದೆಹಲಿ ಪೊಲೀಸರ ಬಳಿ ತಪ್ಪೊಪ್ಪಿಗೆ ಹೇಳಿಕೆಯನ್ನು ನೀಡಿದ್ದಾರೆ. ಆಸ್ಟ್ರೇಲಿಯಾ ಪ್ರಕಾಶಅ ಅವರಿಗೆ ಜೈಲಿನ ಅಧಿಕಾರಿಗಳ ಬಗ್ಗೆ ಚೆನ್ನಾಗಿ ತಿಳಿದಿದೆ. ನಾನು ಮಾಡಿದ್ದ ಭ್ರಷ್ಟಾಚಾರ ಆರೋಪಕ್ಕೆ ಇದು ಬೆಳಕು ಚೆಲ್ಲಿದೆ. ತನಿಖೆ ಸಂದರ್ಭದಲ್ಲಿ ಎಸಿಬಿ ಇದನ್ನೂ ಕೂಡ ಪರಿಗಣಿಸಬೇಕು ಎಂದು ತಿಳಿಸಿದ್ದಾರೆ. 
ಎಐಎಡಿಎಂಕೆ ಎರಡೆಲೆ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಈ ಹಿಂದೆ ವಿ.ಸಿ ಪ್ರಕಾಶ್ ಎಂಬ ವ್ಯಕ್ತಿಯ ಹೆಸರು ಕೇಳಿ ಬಂದಿತ್ತು. ವಿಚಾರಣೆ ಪ್ರಕಾಶ್ ತಪ್ಪೊಪ್ಪಿಕೊಂಡಿದ್ದ. ಮಲ್ಲಿಕಾರ್ಜುನ್ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಟಿಟಿವಿ ದನಕರನ್ ಅವರಿಗೆ ಬಹಳ ಹತ್ತಿರದವರು ಎಂಬುದು ನನಗೆ ತಿಳಿದಿತ್ತು. ಮಲ್ಲಿಕಾರ್ಜುನ್ ಜೊತೆಗೆ ಉತ್ತಮ ವ್ಯವಹಾರ ಮಾಡುವ ಉದ್ದೇಶದಿಂದ ಬೆಂಗಳೂರಿನಲ್ಲಿಯೇ ಅವರನ್ನು ಭೇಟಿ ಮಾಡಿದ್ದೆ. ನಂತರ ನಗರಕ್ಕೆ ಆಗಮಿಸಿದಾಗಲೆಲ್ಲಾ ಮಲ್ಲಿಕಾರ್ಜುನ್ ಅವರು ನನ್ನನ್ನು ಭೇಟಿ ಮಾಡುತ್ತಿದ್ದರು. ಹೀಗೆ ಇಬ್ಬರ ಆತ್ಮೀಯ ಸ್ನೇಹ ಬೆಳದಿತ್ತು. ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹೆಚ್ಚಾಗಿ ತಿಳಿದಿರುವುದರಿಂದಾಗಿ ಮಲ್ಲಿಕಾರ್ಜುನ್ ಅವರು ಶಶಿಕಲಾ ಅವರನ್ನು ಭೇಟಿ ಮಾಡಲು ಸಹಾಯ ಮಾಡುವಂತೆ ಕೇಳಿದ್ದ ಎಂದು ಹೇಳಿಕೊಂಡಿದ್ದ.
ನಗರ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಅವ್ಯವಹಾರಗಳನ್ನು ಪೊಲೀಸ್ ಅಧಿಕಾರಿ ಡಿ. ರೂಪಾ ಅವರು ಬಯಲಿಗೆ ಎಳೆದಿದ್ದರು. ಜೈಲಿನಲ್ಲಿ ಕೈದಿಯಾಗಿರುವ ಶಶಿಕಲಾ ನಟರಾಜನ್ ಗೆ ಆತಿಥ್ಯ ನೀಡಲಾಗುತ್ತಿರುವುದನ್ನು ರೂಪಾ ಅವರು ಸರ್ಕಾರದ ಗಮನಕ್ಕೆ ತಂದಿದ್ದರು. ಪ್ರಕರಣ ಸಂಬಂಧ ಡಿಜಿಪಿ ಸತ್ಯನಾರಾಯಣ ಹಾಗೂ ಡಿಐಜಿ ರೂಪಾ ನಡುವೆ ವಾಕ್ಸಮರ ಆರಂಭವಾಗಿತ್ತು. ಈ ಎಲ್ಲಾ ಬೆಳವಣಿಗೆಗಳ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೂಪಾ ಅವರನ್ನು ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಡಿಐಜಿಯಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com