ಮೈಸೂರು ದಸರಾ: ವಿಶ್ವ ಪ್ರಸಿದ್ಧ ಜಂಬೂ ಸವಾರಿ ಮೆರವಣಿಗೆಗೆ 15 ಆನೆಗಳು ಸಿದ್ಧ

ದಸರಾ ಅಂಗವಾಗಿ ವಿಜಯದಶಮಿಯಂದು ನಡೆಯುವ ಐತಿಹಾಸಿಕ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೋಳ್ಳುವ 15 ಆನೆಗಳನ್ನು ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಮಡಿಕೇರಿ: ದಸರಾ ಅಂಗವಾಗಿ ವಿಜಯದಶಮಿಯಂದು ನಡೆಯುವ ಐತಿಹಾಸಿಕ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೋಳ್ಳುವ 15 ಆನೆಗಳನ್ನು ಅರಣ್ಯ ಇಲಾಖೆ ಆಯ್ಕೆ ಮಾಡಿದೆ.
ಮೈಸೂರು ಸಮೀಪದಲ್ಲಿರುವ ದುಬಾರೆ ಮತ್ತು ಮತ್ತಿಗೋಡು ಆನೆ ಶಿಬಿರಗಳಿಂದ 15 ಆನೆಗಳನ್ನು ಆರಿಸಲಾಗಿದೆ. ಈ ಆನೆಗಳು ಹಲವು ವರ್ಷಗಳಿಂದ ಜಂಬೂಸವಾರಿಯಲ್ಲಿ ಪಾಲ್ಗೋಳ್ಳುತ್ತಿವೆ.
ಮತ್ತಿಗೋಡು ಶಿಬಿರದಿಂದ 7 ಹಾಗೂ ದುಬಾರೆ ಯಿಂದ 6, ಕ್ಯಾತರದೇವಗುಡಿ ಮತ್ತು ಬಲ್ಲೆ ಕ್ಯಾಂಪ್ ನಿಂದ ತಲಾ ಒಂದೊಂದು ಆನೆ ಮರವಣಿಗೆಯಲ್ಲಿ ಭಾಗವಹಿಸಲಿವೆ. ಬಲ್ಲೆ ಕ್ಯಾಂಪ್ ನ ಅರ್ಜುನ (57) ಚಿನ್ನದ ಅಂಬಾರಿ ಹೊರಲಿದೆ.
ಕಳೆದ 18 ವರ್ಷಗಳಿಂದ ಕ್ಯಾತದೇವರ ಗುಡಿ ಆನೆ ಶಿಬಿರದಿಂದ ಗಜೇಂದ್ರ(62) ಜಂಬೂಸವಾರಿಯಲ್ಲಿ ಪಾಲ್ಗೋಳ್ಳುತ್ತಿದ್ದು, ಇದು ಅತಿ ಹಿರಿಯ ಆನೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com