ಬೆಂಗಳೂರು: ಖಾಸಗಿ ಔಷಧ ಮಳಿಗೆಗಳಲ್ಲಿ ಔಷಧಗಳನ್ನು ನಗರದ ಸರ್ಕಾರಿ ವೈದ್ಯರು ಸೂಚಿಸುವಂತಿಲ್ಲ

ಖಾಸಗಿ ಔಷಧಾಲಯಗಳಿಂದ ಔಷಧಗಳನ್ನು ಬೆಂಗಳೂರು ನಗರದ ಸರ್ಕಾರಿ ವೈದ್ಯರು ಶಿಫಾರಸು ಮಾಡಬಾರದು ಎಂದು ನಗರದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಖಾಸಗಿ ಔಷಧಾಲಯಗಳಿಂದ ಔಷಧಗಳನ್ನು ಬೆಂಗಳೂರು ನಗರದ ಸರ್ಕಾರಿ ವೈದ್ಯರು ಶಿಫಾರಸು ಮಾಡಬಾರದು ಎಂದು ನಗರದ ಶೇಕಡಾ 80ರಿಂದ 90ರಷ್ಟು ವೈದ್ಯರು ಬರೆದು ಕೊಟ್ಟಿದ್ದಾರೆ.
ಜುಲೈ 6ರಂದು ಪ್ರಧಾನ ಆರೋಗ್ಯ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿ, ಸರ್ಕಾರಿ ವೈದ್ಯರು ಖಾಸಗಿ ಔಷಧಾಲಯಗಳಿಂದ ಔಷಧಗಳನ್ನು ರೋಗಿಗಳಿಗೆ ಶಿಫಾರಸು ಮಾಡುವುದಿಲ್ಲ ಎಂದು ಬರೆದುಕೊಡದಿದ್ದರೆ ಅವರ ಜುಲೈ ತಿಂಗಳ ವೇತನವನ್ನು ತಡೆಹಿಡಿಯಲಾಗುವುದು ಎಂದು ಹೇಳಿದ್ದರು.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಬೆಂಗಳೂರು ನಗರ ಜಿಲ್ಲಾ ಸರ್ಜನ್ ಡಾ.ಅನ್ಸರ್ ಅಹ್ಮದ್, ನಮಗೆ ಸರಿಯಾದ ಮಾಹಿತಿ ಇದೇ 5ನೇ ತಾರೀಖಿನಂದು ಸಿಗಲಿದೆ. ಅಂದು ನಮ್ಮ ವೇತನ ಸಿಗುವ ದಿನವಾಗಿದೆ. ನನಗೆ ಜಯನಗರ ಜನರಲ್ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ, ಕೆ.ಆರ್.ಪುರಂ ಜನರಲ್ ಆಸ್ಪತ್ರೆ, ಯಲಹಂಕ ಜನರಲ್ ಆಸ್ಪತ್ರೆ, ಸಿ.ವಿ.ರಾಮನ್ ಜನರಲ್ ಆಸ್ಪತ್ರೆ ಮತ್ತು ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಿಂದ ಸಿಕ್ಕಿರುವ ಖಚಿತ ಮಾಹಿತಿ ಪ್ರಕಾರ, ಅವರು ಖಾಸಗಿ ಔಷಧಾಲಯಗಳಿಂದ ರೋಗಿಗಳಿಗೆ ಔಷಧ ಬರೆದುಕೊಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ ಎಂದರು.
ಜನಷಧಿ ಮಳಿಗೆಗಳಲ್ಲಿ ಸಿಗದಿರುವ ಔಷಧಗಳನ್ನು ಸರ್ಕಾರದ ಆರೋಗ್ಯ ರಕ್ಷಾ ಸಮಿತಿ ನಿಧಿಯ ಮೂಲಕ ಔಷಧಗಳನ್ನು ಖರೀದಿಸಲು ಬಳಸುವಂತೆ ಸರ್ಕಾರಿ ವೈದ್ಯರಿಗೆ ಸೂಚಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com