ಸತ್ತ ಹುಲಿ ದೇಹವನ್ನು ಪರಿಶೀಲಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ
ರಾಜ್ಯ
ಭದ್ರಾ ಮೀಸಲು ಅರಣ್ಯದಲ್ಲಿ ಮತ್ತೊಂದು ಹುಲಿ ಸಾವು: 15 ತಿಂಗಳಲ್ಲಿ 5 ಹುಲಿಗಳ ದುರ್ಮರಣ
ಭದ್ರಾ ಅಭಯಾರಣ್ಯದ ಹೆಬ್ಬೆ ವಲಯ ವ್ಯಾಪ್ತಿಯಲ್ಲಿ ಹುಲಿಯೊಂದು ಸಾವನಪ್ಪಿರುವ ಘಟನೆ ನಡೆದಿದೆ...
ಬೆಂಗಳೂರು/ ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದ ಹೆಬ್ಬೆ ವಲಯ ವ್ಯಾಪ್ತಿಯಲ್ಲಿ ಹುಲಿಯೊಂದು ಸಾವನಪ್ಪಿರುವ ಘಟನೆ ನಡೆದಿದೆ.
ಮತ್ತೊಂದು ಹುಲಿಯೊಂದಿಗಿನ ಕಾದಾಟದಿಂದ ಗಂಭೀರವಾಗಿ ಗಾಯಗೊಂಡಿದ್ದ ಇದು, ಗಾಯದಿಂದ ನರಳಿ ಸಾವನಪ್ಪಿದೆ ಎನ್ನಲಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಹುಲಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಸುಟ್ಟು ಹಾಕಿದ್ದಾರೆ.
ಸತ್ತ ಹುಲಿ 8ರಿಂದ 9 ವರ್ಷದ ಹೆಣ್ಣು ಹುಲಿಯಾಗಿದ್ದು, ಅದರ ಬಲಗಾಲು ಮುರಿದಿದ್ದು, ಹೊಟ್ಟೆ ಮತ್ತು ಕುತ್ತಿಗೆ ಭಾಗಗಳಲ್ಲಿ ಗಾಯಗಳಾಗಿದ್ದವು. ಹೀಗಾಗಿ ಅದು ಬೇರೊಂದು ಹುಲಿಯ ಜೊತೆಗಿನ ಕಾದಾಟದಲ್ಲಿ ಗಾಯಗೊಂಡು ಸಾವನ್ನಪ್ಪಿದೆ. ಇದೇ ಜಾಗದಲ್ಲಿ ಕಳೆದ ಹತ್ತು ದಿನಗಳ ಹಿಂದೆ ಅಂದರೆ ಮೇ-19 ರಂದು ಹುಲಿವೊಂದು ಸಾವನಪ್ಪಿತ್ತು.


