ಉಡಾನ್ ಯೋಜನೆಯಡಿ ಬೆಂಗಳೂರು, ಚೆನ್ನೈಯಿಂದ ಮೈಸೂರಿಗೆ ವಿಮಾನ ಸಂಪರ್ಕ ಶೀಘ್ರ

ಪರಂಪರೆ ನಗರ ಮೈಸೂರು ಸೆಪ್ಟೆಂಬರ್ ಹೊತ್ತಿಗೆ ವಾಯುಮಾರ್ಗ ನಕ್ಷೆಯಲ್ಲಿ ಮತ್ತೆ ಸ್ಥಾನ ಪಡೆದುಕೊಳ್ಳಲಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮೈಸೂರು: ಪರಂಪರೆ ನಗರ ಮೈಸೂರು ಸೆಪ್ಟೆಂಬರ್ ಹೊತ್ತಿಗೆ ವಾಯುಮಾರ್ಗ ನಕ್ಷೆಯಲ್ಲಿ ಮತ್ತೆ ಸ್ಥಾನ ಪಡೆದುಕೊಳ್ಳಲಿದೆ. ಕೇಂದ್ರ ಸರ್ಕಾರದ  ಸ್ಥಳೀಯ ವಿಮಾನಯಾನ ಸಂಪರ್ಕಿಸುವ ಉದಾನ್ ಯೋಜನೆಯಡಿ ಬೆಂಗಳೂರು ಮತ್ತು ಚೆನ್ನೈಗೆ ಮೈಸೂರಿನಿಂದ ಎರಡು ವಿಮಾನಗಳ ಹಾರಾಟ ಆರಂಭವಾಗಲಿದೆ.
ಈ ಸುದ್ದಿಯನ್ನು ಭಾರತೀಯ ವಿಮಾನಯಾನ ಪ್ರಾಧಿಕಾರಕ್ಕೆ ಖಚಿತಪಡಿಸಿದ ಏರ್ ಒಡಿಶಾ ಮೈಸೂರಿನಿಂದ ಬೆಂಗಳೂರಿಗೆ 19 ಸೀಟುಗಳ ವಿಮಾನವನ್ನು ಕಾರ್ಯಾರಂಭ ಮಾಡಲಿದ್ದು ವಿಮಾನ ಬೆಂಗಳೂರಿನಿಂದ ಮೈಸೂರಿಗೆ ರಾತ್ರಿ 8.45ಕ್ಕೆ ತಲುಪಲಿದೆ ಮತ್ತು ಅದೇ ರಾತ್ರಿ 9 ಗಂಟೆಗೆ ಹೊರಡಲಿದೆ.
ಮೈಸೂರು ನಗರಕ್ಕೆ ರಾತ್ರಿ ಹೊತ್ತುಬೇಗನೆ ತಲುಪಲು ಇಚ್ಛಿಸುವವರಿಗೆ ಈ ವಿಮಾನ ಸೇವೆ ಅನುಕೂಲವಾಗಿದೆ. 
ಟರ್ಬೊ ಮೇಘಾ ಏರ್ವೇಸ್ 72 ಸೀಟುಗಳನ್ನು ಹೊಂದಿದ್ದು ಮೈಸೂರು-ಬೆಂಗಳೂರು-ಚೆನ್ನೈ ಮಧ್ಯೆ ಸಂಚಾರ ನಡೆಸಲಿದೆ. ವಿಮಾನಯಾನ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದು ಸೇವೆಯ ಆರಂಭದ ದಿನಾಂಕವನ್ನು ನಿಗದಿಪಡಿಸಬೇಕಾಗಿದೆ. ಆದರೂ ಸೆಪ್ಟೆಂಬರ್ ನಿಂದ ನಂತರ ದಸರಾಕ್ಕೆ ಮೊದಲು ಯಾವಾಗ ಬೇಕಾದರೂ ಸೇವೆ ಆರಂಭವಾಗಬಹುದಾಗಿದ್ದು ಲಕ್ಷಾಂತರ ದೇಶಿ ಮತ್ತು ವಿದೇಶಿ ಪ್ರವಾಸಿಗರನ್ನು ಸೆಳೆಯಲಿದೆ.
ಮೈಸೂರಿನಿಂದ ಉಡಾನ್ ಯೋಜನೆಯಡಿ ಎರಡು ವಿಮಾನ ಸೇವೆಗಳು ಆರಂಭವಾಗುವ ಬಗ್ಗೆ ಮೈಸೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಮನೋಜ್ ಕುಮಾರ್ ಸಿಂಗ್ ಖಚಿತಪಡಿಸಿದ್ದಾರೆ. ವಿಮಾನಸೇವೆ ಆರಂಭವಾಗುವ ಬಗ್ಗೆ ಅನೇಕ ಪ್ರವಾಸಿಗರು ಮತ್ತು ಟ್ರಾವೆಲ್ ಏಜೆಂಟ್ಸ್ ವಿಚಾರಣೆ ನಡೆಸಿದ್ದಾರೆ. 
ಉಡಾನ್ ಯೋಜನೆಯಡಿ ವಿಮಾನ ದರದಲ್ಲಿ ರಿಯಾಯಿತಿಯಿದೆ. 500 ಕಿಲೋ ಮೀಟರ್ ಗಿಂತ ಕಡಿಮೆ ಒಂದು ಗಂಟೆಗೂ ಕಡಿಮೆ ಅವಧಿಯ ವಿಮಾನ ಸಂಚಾರಕ್ಕೆ 2,500 ರೂಪಾಯಿ ಟಿಕೆಟ್ ದರವಿರುತ್ತದೆ. ವೈಮಾನಿಕ ಪ್ರಯಾಣವನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.
ರಾತ್ರಿ ತಂಗುವ ಸೌಲಭ್ಯವನ್ನು ಹೊಂದಿರುವ ಮೈಸೂರು ವಿಮಾನ ನಿಲ್ದಾಣ  ಇಂಧನ ತುಂಬುವ ಸೌಲಭ್ಯವನ್ನು ಕೂಡ ಹೊಂದಿದೆ. ಹೀಗಾಗಿ ವಿಮಾನಗಳು ಎರಡೂ ವಲಯಗಳಿಗೆ ಬೇಕಾಗುವ ಇಂಧನವನ್ನು ಹೊತ್ತೊಯ್ಯುವ ಅಗತ್ಯ ಉಂಟಾಗುವುದಿಲ್ಲ. ಈ ಉದ್ದೇಶಕ್ಕಾಗಿ ಭಾರತ್ ಪೆಟ್ರೋಲಿಯಂಗೆ ಭೂಮಿ ನೀಡಲಾಗಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಬ್ಯಾಗೇಜ್ ಸ್ಕಾನರ್ ಗಳನ್ನು 30 ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಿದೆ. ಘಟಕ ಮೈಸೂರಿಗೆ ತಲುಪಿದ್ದು ನಿರ್ಗಮನದ ಕೋಣೆಯ ಹತ್ತಿರ ಸ್ಥಾಪಿಸಲಾಗಿದೆ. ಪ್ರಯಾಣಿಕರಿಗೆ ಸೀಟು ಸೌಲಭ್ಯವನ್ನು ಕೂಡ ವಿಮಾನ ನಿಲ್ದಾಣ  ಪ್ರಾಧಿಕಾರದ ಒಳಗೆ ಹೆಚ್ಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com