ಮಾರುತಿ ಜೆನ್ ಸ್ಯಾಂಟ್ರೋ ಆಗಿದ್ದೇಗೆ? ಹಿಟ್ ಅಂಡ್ ರನ್ ಕೇಸ್ ನಿಂದ ಬಹಿರಂಗವಾಯ್ತು ಜಾಲ

ಹಿಟ್ ಅಂಡ್ ರನ್ ಕೇಸ್ ನಲ್ಲಿ 12 ವರ್ಷದ ಬಾಲಕನ ಸಾವಿನ ಪ್ರಕರಣ ತನಿಖೆಯಿಂದಾಗಿ ನಕಲಿ ನೋಂದಣಿ ಪ್ರಮಾಣಪತ್ರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಹಿಟ್ ಅಂಡ್ ರನ್ ಕೇಸ್ ನಲ್ಲಿ 12 ವರ್ಷದ ಬಾಲಕನ ಸಾವಿನ ಪ್ರಕರಣ ತನಿಖೆಯಿಂದಾಗಿ ನಕಲಿ ನೋಂದಣಿ ಪ್ರಮಾಣಪತ್ರ ಜಾಲ ಪತ್ತೆಯಾಗಿದೆ.
ಬಾಬುಸಾಬುಪಾಳ್ಯ ಸರ್ವೀಸ್ ರಸ್ತೆಯಲ್ಲಿ  ಕೆಎ-03ಎಂಡಿ-4457 ನೋಂದಣಿ ಸಂಖ್ಯೆಯ ಮಾರುತಿ ಜೆನ್ ಕಾರು ಅಪಘಾತ ಮಾಡಿತ್ತು. ಇದರ ಬಗ್ಗೆ ತನಿಖೆ ನಡೆಸಿದಾಗ ಮಾರುತಿ ಜೆನ್ ಸ್ಯಾಂಟ್ರೋ ಕಾರ್ ಹೆಸರಲ್ಲಿ ನೋಂದಣಿಯಾಗಿತ್ತು. 
ಮೊದಲು ಕಾರು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು ನಂತರ ಇಬ್ಬರು ಪಾದಚಾರಿಗಳಿಗೆ ಡಿಕ್ಕಿ ಹೊಡೆದು ಒಬ್ಬರು ಸಾವನ್ನಪ್ಪಿದ್ದರು. ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದರು. ಪಾದಚಾರಿ ಬೋರಾನ್ ಎಂಬ 12 ವರ್ಷದ ಸಾವನ್ನಪ್ಪಿದ್ದ.
ಅಪಘಾತದ ನಂತರ ಆರೋಪಿ ಪರಾರಿಯಾಗಿದ್ದನು .ಸಂತ್ರಸ್ತರ ನೆರವನ್ನು ಪಡೆದ ಬಾಣಸವಾಡಿ ಸಂಚಾರಿ ಪೊಲೀಸರು ಕಾರನ್ನು ಸೀಜ್ ಮಾಡಿದ್ದರು. ನಂತರ ಪೊಲೀಸರು ಕೆ.ಆರ್ ಪುರಂ ರೈಲ್ವೆ ನಿಲ್ದಾಣದಲ್ಲಿ ಅದೇ ದಿನ ಸಂಜೆ 5 ಗಂಟೆಗೆ ಸುರೇಶ್ ಎಂಬಾತನನ್ನು ಬಂಧಿಸಿದ್ದರು.
ವಿಚಾರಣೆ ವೇಳೆ, ತನ್ನ ಬಳಿ ಚಾಲನಾ ಪರವಾನಗಿ ಇಲ್ಲದ್ದನ್ನುಒಪ್ಪಿಕೊಂಡಿದ್ದಾನೆ. ಜೊತೆಗೆ ಕಾರು ಲ್ಯಾಂಡ್ ಡೀಲರ್ ರಮೇಶ್ ಎಂಬಾತನಿಗೆ ಸೇರಿದ್ದು ಎಂಬುದನ್ನು ಒಪ್ಪಿಕೊಂಡಿದ್ದಾನೆ. ಲೈಸೆನ್ಸ್ ಇಲ್ಲದ ಸುರೇಶ್ ಗೆ ಕಾರು ನೀಡಿದ್ದಕ್ಕಾಗಿ ಬಾಬುಸಾಬು ಪಾಳ್ಯದ ರಮೇಶ್ ನನ್ನು ಆರೋಪಿಯನ್ನಾಗಿಸಲಾಯಿತು.
ನಂತರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ  ವಾಹನದ ದಾಖಲಾತಿ ಪರಿಶೀಲನೆ ನಡೆಸಿದಾಗ 2004 ರಲ್ಲಿ ಮಾರುತಿ ಜೆನ್ ಬದಲು ಸ್ಯಾಂಟ್ರೋ ಕಾರು ನೋಂದಣಿಯಾಗಿದೆ ಎಂಬ ಮಾಹಿತಿ ತಿಳಿದು ಬಂತು.  
ವಾಹನದ ಎಂಜಿನ್ ಮತ್ತು ಚಾಸೀ ಸಂಖ್ಯೆಯನ್ನು ಪರಿಶೀಲಿಸಿದಾಗ ಆ ನಂಬರ್ ನ ಯಾವುದೇ ವಾಹನ ನೋಂದಣಿಯಾಗಿರಲಿಲ್ಲ, ಅದರಿಂದ ರಮೇಶ್ ನಕಲಿ ನೋಂದಣಿ ಪ್ರಮಾಣ ಪತ್ರ ಜಾಲ ಬಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ರಮೇಶ್ ವಿರುದ್ಧ ಬಾಣಸವಾಡಿ ಸಂಚಾರಿ ಪೊಲೀಸರು  ವಂಚನೆ ಪ್ರಕರಣ ದಾಖಲಿಸಿದ್ದಾರೆ. ರಮೇಶ್ ಗೆ ಹೇಗೆ ನಕಲಿ ಪ್ರಮಾಣ ಪತ್ರ ಪಡೆದ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com