ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ ಕುರಿತು ಸಮಗ್ರ ತನಿಖೆ: ರಮೇಶ್ ಕುಮಾರ್

ಜನತೆಯಲ್ಲಿ ಆತಂಕ ಸೃಷ್ಟಿಸಿರುವ ಪ್ಲಾಸ್ಟಿಕ್ ಅಕ್ಕಿ ಮತ್ತು ಪ್ಲಾಸ್ಟಿಕ್ ಮೊಟ್ಟೆ ಕಲಬೆರಕೆ ವಿಷಯವಾಗಿ ಸಮಗ್ರ ತನಿಖೆಗೆ ಆದೇಶಸಲಾಗಿದೆ ಎಂದು ಆರೋಗ್ಯ ಸಚಿವ...
ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ
ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ
ಬೆಂಗಳೂರು: ಜನತೆಯಲ್ಲಿ ಆತಂಕ ಸೃಷ್ಟಿಸಿರುವ ಪ್ಲಾಸ್ಟಿಕ್ ಅಕ್ಕಿ ಮತ್ತು ಪ್ಲಾಸ್ಟಿಕ್ ಮೊಟ್ಟೆ ಕಲಬೆರಕೆ ವಿಷಯವಾಗಿ ಸಮಗ್ರ ತನಿಖೆಗೆ ಆದೇಶಸಲಾಗಿದೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಹೇಳಿದ್ದಾರೆ. 
ವಿಧಾನಸಭೆಯಲ್ಲಿ ಜಗದೀಶ್ ಶೆಟ್ಟರ್ ಅವರು ಕಲಬೆರಕೆ ವಿಷಯವಾಗಿ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿರುವ ರಮೇಶ್ ಕುಮಾರ್ ಅವರು ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ ಮತ್ತು ಸಕ್ಕರೆ ಸುದ್ದಿ ಜನರಲ್ಲಿ ಗಾಬರಿ ಮೂಡಿಸಿದ್ದು ಈ ಬಗ್ಗೆ ಪರೀಕ್ಷಿಸಬೇಕಿದೆ. ಆಯುಕ್ತರಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಪ್ಲಾಸ್ಟಿಕ್ ಅಕ್ಕಿ ತಯಾರಿಕೆ ಸಾಧ್ಯವೇ ಎಂಬುದನ್ನೂ ತಿಳಿದುಕೊಳ್ಳಬೇಕಿದ್ದು ಇದರ ಸಮಗ್ರ ವರದಿಯನ್ನು ಸೋಮವಾರ ಸದನದ ಮುಂದಿಡಲಾಗುವುದು ಎಂದು ಹೇಳಿದರು. 
ನ್ಯಾಯಬೆಲೆ ಅಂಗಡಿಯಲ್ಲಿ ವಿತರಿಸಿದ ಅಕ್ಕಿಯಲ್ಲೂ ಪ್ಲಾಸ್ಟಿಕ್ ಅಕ್ಕಿ ಕಲಬೆರಕೆ ಆಗಿರುವುದು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ಅನ್ನಭಾಗ್ಯದ ಹೆಸರಿನಲ್ಲಿ ಸರ್ಕಾರವೇ ಪ್ಲಾಸ್ಟಿಕ್ ಅಕ್ಕಿ ವಿತರಿಸುತ್ತಿದೆಯೇ ಎಂಬ ಸಂದೇಹ ಬರುತ್ತದೆ ಎಂದು ಬಿಜೆಪಿಯ ಸಿಟಿ ರವಿ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಸಚಿವ ಯುಟಿ ಖಾದರ್ ಪ್ಲಾಸ್ಟಿಕ್ ಅಕ್ಕಿ ಕಲಬೆರಕೆ ಸಾಧ್ಯವೇ ಇಲ್ಲ. ಅನ್ನಭಾಗ್ಯ ಯೋಜನೆಗೆ ಅಕ್ಕಿ ಪೂರೈಕೆಯಾಗುವುದು ಕೇಂದ್ರ ಸರ್ಕಾರದಿಂದ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com