ಟ್ರಾಫಿಕ್ ಪೊಲೀಸ್ ಇಲಾಖೆಯಿಂದ ಎನ್ಓಸಿ ಪಡೆಯಲು ಶಾಪಿಂಗ್ ಮಾಲ್ ಮಾಲೀಕರ ನಿರಾಸಕ್ತಿ

ಬೃಹತ್ ಮಾಲ್ ಗಳ ಹೊರಗೆ ಸಂಚಾರ ದಟ್ಟಣೆ ಸಮಸ್ಯೆ ಸಾರ್ವ ಜನಿಕರ ಓಡಾಟ, ವಾಹನ ಸಂಚಾರಕ್ಕೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ಬೃಹತ್ ಮಾಲ್ ಗಳ ಹೊರಗೆ ಸಂಚಾರ ದಟ್ಟಣೆ ಸಮಸ್ಯೆ ಸಾರ್ವ ಜನಿಕರ ಓಡಾಟ, ವಾಹನ ಸಂಚಾರಕ್ಕೆ ತೀವ್ರ ತೊಂದರೆಯನ್ನುಂಟುಮಾಡುತ್ತಿದ್ದರೆ, ಸಂಚಾರ ಪೊಲೀಸ್ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಮಾಲ್ ಗಳನ್ನು ಏರಿಸಲಾಗುತ್ತಿದೆ.
ಮೆಟ್ರೊ ನಗರಗಳಲ್ಲಿ ಯಾವುದೇ ಶಾಪಿಂಗ್ ಮಾಲ್ ಗಳನ್ನು ನಿರ್ಮಿಸಬೇಕೆಂದರೆ ನಗರ ಪಾಲಿಕೆಯಿಂದ ಅನುಮತಿ ಪಡೆದುಕೊಂಡು ಟ್ರಾಫಿಕ್ ಪೊಲೀಸ್ ಇಲಾಖೆಯಿಂದ ಆಕ್ಷೇಪಣೆರಹಿತ ಪ್ರಮಾಣ ಪತ್ರ(ಎನ್ಒಸಿ) ಪಡೆಯಬೇಕು. ಆದರೆ ಬೆಂಗಳೂರು ನಗರದಲ್ಲಿ ಇಲ್ಲಿಯವರೆಗೆ ಕಟ್ಟಡಗಳ ನಿರ್ಮಾಣಕ್ಕೆ ಯಾವುದೇ ಎನ್ಒಸಿಗೆ ಸಹಿ ಹಾಕಿಲ್ಲ ಎಂದು ಟ್ರಾಫಿಕ್ ಪೊಲೀಸ್ ಇಲಾಖೆ ಹೇಳುತ್ತದೆ.
ಮಾಲ್ ಡೆವೆಲಪರ್ಸ್ ಟ್ರಾಫಿಕ್ ಮ್ಯಾನೇಜ್ ಮೆಂಟ್ ಯೋಜನೆಯನ್ನು ಟ್ರಾಫಿಕ್ ಪೊಲೀಸರಿಗೆ ಸಲ್ಲಿಸಿ ಎನ್ಒಸಿ ಪಡೆದುಕೊಳ್ಳಬೇಕು. ಆದರೆ ಇದು ಕಡ್ಡಾಯವಲ್ಲದ್ದರಿಂದ ಯಾರೂ ಅಷ್ಟೊಂದಾಗಿ ನಿಯಮವನ್ನು ಅನುಸರಿಸುವುದಿಲ್ಲ.
ಈ ಲೋಪದೋಷವನ್ನು ಸರಿಪಡಿಸಲು ಕಟ್ಟಡಗಳ ಮೂಲಭೂತ ಸೌಕರ್ಯಗಳಿಗೆ ಮಾಲ್ ಡೆವಲಪರ್ಸ್ ಗಳು ಕೊಡುಗೆ ನೀಡುವುದು ಮಾತ್ರವಲ್ಲದೆ ಅಸ್ತಿತ್ವದಲ್ಲಿರುವ ಕಾನೂನಿನ ತಿದ್ದುಪಡಿಯನ್ನು ಮಾಡಲು ಬಿಬಿಎಂಪಿ ಅಧಿಕಾರಿಗಳು ಯೋಚಿಸುತ್ತಿದ್ದಾರೆ. 
ಬೆಂಗಳೂರಿನಂತಹ ನಗರಗಳಲ್ಲಿ ಸಂಚಾರ ದಟ್ಟಣೆಗೆ ಶಾಪಿಂಗ್ ಮಾಲ್ ಗಳು ಕೂಡ ಕಾರಣ ಎಂದು ಅಧಿಕಾರಿಗಳ ಅಭಿಪ್ರಾಯ.
ನಗರ ಪಾಲಿಕೆಗಳು ಕಟ್ಟಡ ಕಟ್ಟಲು ಅನುಮತಿ ಪಡೆಯುವಾಗ ಇದುವರೆಗೆ ಯಾವುದೇ ಎನ್ಒಸಿಗಳಿಗೆ ಸಹಿ ಮಾಡಿಲ್ಲ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ಹೇಳಿದ್ದಾರೆ.
ಸುತ್ತಲ ಪ್ರದೇಶ ಮತ್ತು ರಸ್ತೆಯಲ್ಲಿ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚು ಜನರು ಶಾಪಿಂಗ್ ಮಾಲ್ ಬಳಿ ಸೇರುತ್ತಾರೆ. ಹೆಚ್ಚು ಸಂಚಾರ ದಟ್ಟಣೆಯನ್ನು ನಿಭಾಯಿಸಲು ರಸ್ತೆಗೆ ಸಾಮರ್ಥ್ಯವಿದೆಯೇ ಎಂದು ಟ್ರಾಫಿಕ್ ಪೊಲೀಸರು ನಿರ್ಧರಿಸಬೇಕು. ಕೆಲವು ಮಾಲ್ ಗಳಲ್ಲಿ ಪಾರ್ಕಿಂಗ್ ಸ್ಥಳದ ಬಹುತೇಕ ಭಾಗಗಳನ್ನು ಬೇರೆ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.
ಇದರಿಂದ ವಾಹನ ಸಂಚಾರರಿಗೆ ರಸ್ತೆಗಳಲ್ಲಿ ಸಹಜವಾಗಿ ಸಂಚಾರ ದಟ್ಟಣೆಯುಂಟಾಗುತ್ತದೆ.
20,000 ಚದರಡಿ ಮತ್ತು ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ವಾಣಿಜ್ಯ ಕಟ್ಟಡಗಳಿಗೆ ರಾಜ್ಯಮಟ್ಟದ ಪರಿಸರ ಪ್ರಭಾವದ ಮೌಲ್ಯಮಾಪನ ಪ್ರಾಧಿಕಾರ ಅನುಮತಿ ನೀಡುತ್ತದೆ. ಆದರೆ 20,000 ಚದರಡಿಗಿಂತ ಕಡಿಮೆ ವಿಸ್ತೀರ್ಣದ ಶಾಪಿಂಗ್ ಮಾಲ್ ಗಳು  ಸಂಚಾರ ನಿಯಂತ್ರಣ ಪೊಲೀಸ್ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿಲ್ಲ ಎಂದು ಟ್ರಾಫಿಕ್ ತಜ್ಞ ಎಂ.ಎನ್.ಶ್ರೀಹರಿ ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com