ಎಲ್ ಪಿಜಿ ಪೂರೈಕೆ ಸಂಬಂಧ ರಾಜ್ಯದೊಂದಿಗೆ ಘರ್ಷಣೆಯಿಲ್ಲ: ಧರ್ಮೇಂದ್ರ ಪ್ರಧಾನ್

ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆ ರಾಜ್ಯದಲ್ಲಿ ಶೀಘ್ರವೇ ಜಾರಿಯಾಗಲಿದ್ದು, ಈ ಸಂಬಂಧ ಕರ್ನಾಟಕ ಸರ್ಕಾರದ ಜೊತೆ ಯಾವುದೇ ಘರ್ಷಣೆ...
ಧರ್ಮೇಂದ್ರ ಪ್ರಧಾನ್
ಧರ್ಮೇಂದ್ರ ಪ್ರಧಾನ್
ಹುಬ್ಬಳ್ಳಿ:  ಮುಖ್ಯಮಂತ್ರಿ ಅನಿಲಭಾಗ್ಯ  ಯೋಜನೆ ರಾಜ್ಯದಲ್ಲಿ ಶೀಘ್ರವೇ ಜಾರಿಯಾಗಲಿದ್ದು, ಈ ಸಂಬಂಧ ಕರ್ನಾಟಕ ಸರ್ಕಾರದ ಜೊತೆ ಯಾವುದೇ ಘರ್ಷಣೆ, ವಿವಾದಗಳಿಲ್ಲ ಎಂದು ರಾಜ್ಯ ಪೆಟ್ರೋಲ್ ಮತ್ತು ಪ್ರಾಕೃತಿಕ ಅನಿಲ ಇಲಾಖೆಯ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಅನಿಲ ಪೂರೈಕೆ ಸಂಬಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಘರ್ಷಣೆ ಹೇಳಿಕೆಗಳು ಕೇವಲ ವದಂತಿಗಳಷ್ಟೇ ಎಂದು ಸ್ಪಷ್ಟ ಪಡಿಸಿದ್ದಾರೆ.

2011 ರಲ್ಲಿ ನಡೆದ ಸಾಮಾಜಿಕ-ಆರ್ಥಿಕ ಜಾತಿ ಗಣತಿ ಪಟ್ಟಿಯಿಂದ ಹೆಸರು ಬಿಟ್ಟು ಹೋಗಿರುವವರಿಗೆ ರಾಜ್ಯ ಸರ್ಕಾರ ಉಚಿತ ಅನಿಲ ಪೂರೈಕೆ ಮಾಡುತ್ತದೆ. 
ಎಸ್ಇಸಿಸಿ ಯೋಜನೆಯಡಿ ಕರ್ನಾಟಕದಲ್ಲಿ 36 ಲಕ್ಷ ಫಲಾನುಭವಿಗಳಿದ್ದಾರೆ. ಈಗಾಗಲೇ 6 ಲಕ್ಷ ಮಂದಿ  ಅನಿಲ ಸಂಪರ್ಕ ಪಡೆದುಕೊಂಡಿದ್ದಾರೆ,ಉಳಿದ 30 ಲಕ್ಷ ಫಲಾನುಭವಿಗಳಿಗೆ ಶೀಘ್ರವೇ ಗ್ಯಾಸ್ ಸಂಪರ್ಕ ಸಿಗಲಿದೆ. ಇದಕ್ಕಾಗಿ ಸರ್ಕಾರ 200 ಕೋಟಿ ರು ಹಣ ಮೀಸಲಿರಿಸಿದೆ ಎಂದು ಹೇಳಿದ್ದಾರೆ.

ಉಚಿತವಾಗಿ ಎಲ್ ಪಿಜಿ ಸ್ಟವ್, ರೆಗ್ಯುಲೇಟರ್, ರಬ್ಬರ್ ಟ್ಯೂಬ್ ಗಾಗಿ ರಾಜ್ಯ ಸರ್ಕಾರ  ಪ್ರತಿ ಫಲಾನುಭವಿಗೆ 2,940 ರು ಖರ್ಚು ಮಾಡುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com