ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಪರಿಪೂರ್ಣವಾಗಿಲ್ಲ: ರಾಮಚಂದ್ರ ಗುಹಾ

ನರೇಂದ್ರ ಮೋದಿ ಸರ್ಕಾರ ಬುದ್ದಿ ಜೀವಿಗಳ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಇತಿಹಾಸಕಾರ ರಾಮಚಂದ್ರಗುಹಾ..
ರಾಮಚಂದ್ರ ಗುಹಾ
ರಾಮಚಂದ್ರ ಗುಹಾ
ಮೈಸೂರು: ನರೇಂದ್ರ ಮೋದಿ ಸರ್ಕಾರ ಬುದ್ದಿ ಜೀವಿಗಳ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಇತಿಹಾಸಕಾರ ರಾಮಚಂದ್ರಗುಹಾ ಟೀಕಿಸಿದ್ದಾರೆ.
ಮೈಸೂರಿನ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಅವರು, ವಾಜಪೇಯಿ ಸರ್ಕಾರದ ಜೊತೆಗೆ ಈಗಿನ ಸರ್ಕಾರವನ್ನು ಹೋಲಿಸಿ ನೋಡಿದರೇ, ಈಗಿನ ಸರ್ಕಾರ ಬುದ್ದಿಜೀವಿಗಳ ವಿರೋಧಿ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು. 
ವಾಜಪೇಯಿ, ಆಡ್ವಾಣಿ, ಅರುಣ್ ಶೌರಿ, ಜಸ್ವಂತ್ ಸಿಂಗ್, ಜಾರ್ಜಾ ಫರ್ನಾಂಡೀಸ್, ಯಶವಂತ್ ಸಿನ್ಹಾ ಅವರು ಸಾಕಷ್ಚು ಪುಸ್ತಕಗಳನ್ನು ಓದಿದ್ದು ಮಾತ್ರವಲ್ಲ ಕೃತಿಗಳನ್ನು ರಚಿಸಿದ್ದಾರೆ. ಈಗಿನ ಸರ್ಕಾರಗಳಲ್ಲಿ ಅಂತಹ ಬುದ್ದಿಜೀವಿಗಳು ಇಲ್ಲ ಎಂದು ದೂರಿದ್ದಾರೆ
ಭಾರತದಲ್ಲಿ ವಾಕ್ ಸ್ವಾತಂತ್ರ್ಯ ಯಾವತ್ತೂ ಪರಿಪೂರ್ಣವಾಗಿರಲಿಲ್ಲ, ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಅಪೂರ್ಣವಾಗಿತ್ತು ಎಂದು ಹೇಳಿದ್ದಾರೆ. ಒಬ್ಬನಿಗೆ ದೇಶಭಕ್ತ ಎನಿಸಿಕೊಳ್ಳಲುಹಿಂದೂ ಆಗಬೇಕಿಲ್ಲ, ಹಿಂದಿಯನ್ನೇ ಮಾತನಾಡಬೇಕಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕೇಂದ್ರ ಸರ್ಕಾರ ರವಿ ಶಂಕರ್ ಗುರೂಜಿಗೆ  ಪದ್ಮ ವಿಭೂಷಣ ನೀಡಿ ಗೌರವಿಸಿದೆ, ಭೈರಪ್ಪ ಅವರಂಥ ಸಾಹಿತಿಗೆ ಪದ್ಮಶ್ರೀ ನೀಡಿದೆ. ಸರ್ಕಾರವು ಸಾಹಿತ್ಯ ಮತ್ತು ಧರ್ಮ ಯಾವುದಕ್ಕೆ ಮಹತ್ವ ಕೊಡುತ್ತದೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com