ಗ್ರೀನ್ ಲೈನ್ (ನಾಗಸಂದ್ರ-ಯೆಲಚೇನಹಳ್ಳಿ) ಮಾರ್ಗದಲ್ಲಿ ಮೆಟ್ರೋ ಪ್ರಾರಂಭವಾಗುತ್ತಿದ್ದಂತೆಯೇ ನಮ್ಮ ಮೆಟ್ರೋದಲ್ಲಿ ಪ್ರತಿದಿನ 3 ಲಕ್ಷ ಜನರು ಸಂಚರಿಸುತ್ತಿದ್ದಾರೆ. ಈ ಪೈಕಿ ಪ್ರತಿ ದಿನ ನಮ್ಮ ಮೆಟ್ರೋದಲ್ಲಿ ಸಂಚರಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆಗಾಗಿ ಸಮೀಕ್ಷೆ ನಡೆಯುತ್ತಿದ್ದು, 3 ಲಕ್ಷ ಜನರ ಪೈಕಿ ಶೇ.40 ರಷ್ಟು ಮಂದಿ ಮಹಿಳೆಯರಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ ನಿಖರ ಅಂಕಿ-ಅಂಶಗಳು ಇನ್ನಷ್ಟೇ ಸಿಗಬೇಕಿದೆ.