ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿರುವ ರಾಜ್ಯ ಅರಣ್ಯ ಇಲಾಖೆ : ಸಿಎಜಿ ವರದಿ

ವಾಸೋದ್ಯಮ ಇಲಾಖೆ ಆದಾಯ ಹೆಚ್ಚಿಸಲು ರಾಜ್ಯ ಅರಣ್ಯ ಇಲಾಖೆ ಹಲವಾರು ನಿಯಮಗಳನ್ನು ಗಾಳಿಗೆ ತೂರಿದೆ ಎಂದು...
ಸಾಂದರ್ಬಿಕ ಚಿತ್ರ
ಸಾಂದರ್ಬಿಕ ಚಿತ್ರ
ಬೆಂಗಳೂರು: ಪ್ರವಾಸೋದ್ಯಮ ಇಲಾಖೆ ಆದಾಯ ಹೆಚ್ಚಿಸಲು ರಾಜ್ಯ ಅರಣ್ಯ ಇಲಾಖೆ ಹಲವಾರು ನಿಯಮಗಳನ್ನು ಗಾಳಿಗೆ ತೂರಿದೆ ಎಂದು ಸಿಎಜಿ ವರದಿ ನೀಡಿದೆ.
ನ್ಯಾಷನಲ್ ಪಾರ್ಕ್ ಮತ್ತು ವನ್ಯಜೀವಿ ಅರಣ್ಯಧಾಮಗಳಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಎಲ್ಲಾ ಕೆಲಸಗಳನ್ನು ನೋಡುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.
ಮೀಸಲು ಪ್ರದೇಶಗಳಲ್ಲಿ ಪ್ರವಾಸಿ ವಾಹನಗಳ ಸಂಚಾರ, ಅತಿಕ್ರಮಣ ಮಾಡಿರುವ ಅರಣ್ಯ ಪ್ರದೇಶಕ್ಕೆ ಬರುವ ಪ್ರವಾಸಿಗರನ್ನು ರಕ್ಷಣೆ ಮಾಡುವುದು, ಅರಣ್ಯದ ಅವನತಿಗೆ ಕಾರಣವಾಗುತ್ತಿದೆ. ಇದಕ್ಕೆಲ್ಲಾ ಅಧಿಕಾರಿಗಳೇ ಕಾರಣರಾಗುತ್ತಿದ್ದಾರೆ.
ಇಂಥಹ ಸಮಯದಲ್ಲಿ ಇಂತಿಷ್ಟೇ ಪ್ರವಾಸಿಗರನ್ನು ಕರೆದೊಯ್ಯಬೇಕೆಂಬ ನಿಯಮವಿದೆ.ಆದರೆ ಹಲವು ವನ್ಯ ಜೀವಿ ಧಾಮಗಳಲ್ಲಿ ಇದರ ಬಗ್ಗೆ ಯಾವುದೇ ಯೋಜನೆ ರೂಪಿಸಿಲ್ಲ. ಬದಲಾಗಿ ಎಲ್ಲೆಡೆ ಅಧಿಕವಾಗಿ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತಿದೆ. ಇದರಿಂದ ಸೂಕ್ಷ್ಮ ಪರಿಸರ ವಲಯ ಹಾಳಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ,
ಬಂಡಿಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ದಿನಕ್ಕೆ 20-22 ಟ್ರಿಪ್ ಮಾಡಬೇಕು, ತಿಂಗಳಿಗೆ 660 ಟ್ರಿಪ್ ಆಗುತ್ತದೆ. ಆದರೆ ಆಡಿಟ್ ವರದಿ ಪ್ರಕಾರ, 2015ರ ಮೇ ನಲ್ಲಿ, 1,004, ಆಗಸ್ಟ್ ನಲ್ಲಿ  683, ಮತ್ತು ಅಕ್ಟೋಬರ್ ನಲ್ಲಿ 853 ಸಫಾರಿಗಳು ನಡೆದಿವೆ. ಹೀಗಾಗಿ ರಾಷ್ಟ್ರೀಯ ಉದ್ಯಾನವನಗಳು, ಮತ್ತು ವನ್ಯಜೀವಿ ಅರಣ್ಯ ಧಾಮಗಳ ಆಡಳಿತ ಕಠಿಣ ಕ್ರಮ ಕೈಗೊಂಡು ಪ್ರವಾಸಿಗರ ಸಂಖ್ಯೆಯನ್ನು ನಿಯಂತ್ರಿಸಬೇಕು ಎಂದು ಹೇಳಿದೆ.
ಸಂರಕ್ಷಿತ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿ  51 ರೆಸಾರ್ಟ್ ಗಳಿದ್ದು, ಅದರಲ್ಲಿ 44 ರೆಸಾರ್ಟ್ ಗಳು ಯಾವುದೇ ಅನುಮತಿ ಪಡೆಯದೇ ನಿರ್ಮಾಣವಾಗಿವೆ ಎಂದು ಸಿಎಜಿ ವರದಿಯಲ್ಲಿ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com