ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ

ರೈತರ ಅಲ್ಪಾವಧಿ ಸಾಲ ಕೂಡ ರಾಜ್ಯ ಸರ್ಕಾರ ಮನ್ನಾ ಮಾಡಬೇಕು: ಹೆಚ್'ಡಿಕೆ

ರಾಜ್ಯ ಸರ್ಕಾರ ಮಾಡಿರುವ ಸಾಲ ಮನ್ನಾ ಮೊತ್ತ ರೈತರಿಗೆ ಏನೇನೂ ಸಾಕಾಗುವುದಿಲ್ಲ. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿರುವ ರೈತರ ಸಾಲಮನ್ನಾ ಹೊಣೆಯನ್ನೂ ರಾಜ್ಯ ಸರ್ಕಾರವೇ ಹೊತ್ತುಕೊಳ್ಳಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿಯವರು...
ಬೆಂಗಳೂರು: ರಾಜ್ಯ ಸರ್ಕಾರ ಮಾಡಿರುವ ಸಾಲ ಮನ್ನಾ ಮೊತ್ತ ರೈತರಿಗೆ ಏನೇನೂ ಸಾಕಾಗುವುದಿಲ್ಲ. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿರುವ ರೈತರ ಸಾಲಮನ್ನಾ ಹೊಣೆಯನ್ನೂ ರಾಜ್ಯ ಸರ್ಕಾರವೇ ಹೊತ್ತುಕೊಳ್ಳಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿಯವರು ಶುಕ್ರವಾರ ಹೇಳಿದ್ದಾರೆ. 
ರೈತರ ಸಾಲ ಮನ್ನಾ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಹಲವಾರು ರೈತರು ನನಗೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಪ್ರಸ್ತುತ ರೈತರಿಗೆ ಹೊಸದಾಗಿ ಸಾಲಗಳು ದೊರಕುತ್ತಿಲ್ಲ. ಪಡೆದಿರುವ ಹಣವನ್ನು ಹಿಂತಿರುಗಿಸುವಂತಾಗಿದೆ. ಸರ್ಕಾರ ನೀಡುತ್ತಿರುವ ಸಾಲ ಮನ್ನಾದ ಮೊತ್ತ ರೈತರಿಗೆ ಯಾವುದಕ್ಕೂ ಸಾಕಾಗುವುದಿಲ್ಲ. ರೈತರ ಅಲ್ಪಾವಧಿ ಸಾಲವನ್ನೂ ಕೂಡ ಸರ್ಕಾರ ಮನ್ನಾ ಮಾಡಬೇಕೆಂದು ಹೇಳಿದ್ದಾರೆ. 
ನಮ್ಮ ಹೋರಾಟಕ್ಕೆ ಮಣಿದು ಸರ್ಕಾರ ಸಾಲ ಮನ್ನಾ ಮಾಡಿದೆ ಎಂದು ಬೀಗುತ್ತಿರುವ ಬಿಜೆಪಿ ನಾಯಕರ ವಿರುದ್ದ ಇದೇ ವೇಳೆ ಕಿಡಿಕಾರಿರುವ ಹೆಚ್'ಡಿಕೆ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಎಲ್ಲಿಯೂ ರೈತರ ಬಗ್ಗೆಯಾಗಲಿ, ಸಾಲ ಮನ್ನಾ ಬಗ್ಗೆಯಾಗಲಿ ಮಾತನಾಡಬಾರದು. ಕೇಂದ್ರ ಸರ್ಕಾರದಿಂದ ರೈತರ ಸಾಲ ಮನ್ನಾ ಮಾಡಿಸದ ಬಿಜೆಪಿಗೆ ರೈತರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ತಿಳಿಸಿದ್ದಾರೆ. 
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಮಾತನ್ನಷ್ಟೇ ಕೇಳುತ್ತಾರೆ. ಅವರಿಂದ ನಿರ್ದೇಶನ ಬಂದಾಗ ಮಾತ್ರವೇ ಅವರು ಆದೇಶ ಹೊರಡಿಸುತ್ತಾರೆ. ಸಾಲ ಮನ್ನಾ ಬಗ್ಗೆ ಮಾತನಾಡುವ ಯಾವುದೇ ರೀತಿಯ ಹಕ್ಕು ಬಿ.ಎಸ್. ಯಡಿಯೂರಪ್ಪ ಅವರಿಗಿಲ್ಲ. ಹಾಗೆಯೇ ರೈತರ ಬಗ್ಗೆ ಹಗುರವಾಗಿ ಮಾತನಾಡಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರನ್ನು ಸಮರ್ಥಿಸಿ ಕೊಳ್ಳುವ ಹಕ್ಕು ಕೂಡ ಅವರಿಗಿಲ್ಲ ಎಂದಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com