ಬೆಂಗಳೂರು: ಕನ್ನಡ ಭಾಷೆಗೆ ಅಪಮಾನ; ದೆಹಲಿ ಮೂಲದ ಹೆಚ್ ಆರ್ ಮ್ಯಾನೇಜರ್ ಸ್ವಾತಿಕ್ ಬಂಧನ

ಕನ್ನಡ ಭಾಷೆಗೆ ಅವಮಾನ ಮಾಡಿದ್ದ ಹೆಚ್ ಆರ್ ಮ್ಯಾನೇಜರ್ ದೆಹಲಿ ಮೂಲದ ಸ್ವಾತಿಕ್ ಸಚ್ಚಾರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ...
ಬೆಂಗಳೂರು: ಕನ್ನಡ ಭಾಷೆಗೆ ಅಪಮಾನ; ದೆಹಲಿ ಮೂಲದ ಹೆಚ್ ಆರ್ ಮ್ಯಾನೇಜರ್ ಸ್ವಾತಿಕ್ ಬಂಧನ
Updated on
ಬೆಂಗಳೂರು: ಕನ್ನಡ ಭಾಷೆಗೆ ಅವಮಾನ ಮಾಡಿದ್ದ ಹೆಚ್ ಆರ್ ಮ್ಯಾನೇಜರ್ ದೆಹಲಿ ಮೂಲದ ಸ್ವಾತಿಕ್ ಸಚ್ಚಾರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. 
ಜೂನ್ 18ರಂದು ಸಾತ್ವಿಕ್ ಸಚ್ಚಾರ್ ಆನ್ ಲೈನ್ ನಲ್ಲಿ ಫುಡ್ ಆರ್ಡರ್ ಮಾಡಿದ್ದು, ಸ್ವಿಗೀ ಖಾಸಗಿ ಕಂಪನಿ ಡೆಲಿವರಿ ಬಾಯ್ ಬಿಎಂ ಅನಿಲ್ ಎನ್ನುವರು ಫುಡ್ ಡೆಲಿವರಿ ಮಾಡಲು ತೆರಳಿದ್ದಾರೆ. ಈ ವೇಳೆ 5 ನಿಮಿಷ ತಡವಾಗಿದ್ದರಿಂದ ಸಾತ್ವಿಕ್ ಅನಿಲ್ ನನ್ನು ಬಾಯಿಗೆ ಬಂದಂತೆ ಬೈದಿದ್ದಾನೆ. ಇದರಿಂದ ಅನಿಲ್ ಕನ್ನಡದಲ್ಲಿ ಕ್ಷಮಿಸಿ ಎಂದು ಕೇಳಿದ್ದೆ ತಂಡ ಸ್ವಾತಿಕ್ ಕನ್ನಡಿಗರು ಸೋಮಾರಿಗಳು ಎಂದು ಇಂಗ್ಲಿಷ್ ನಲ್ಲಿ ಬೈದಿದ್ದಾನೆ. ಅಷ್ಟಕ್ಕೂ ಸುಮ್ಮನಾಗದೆ ಕನ್ನಡದ ಬಗ್ಗೆ ಕೆಟ್ಟ ಶಬ್ಧಗಳಿಂದ ನಿಂದಿಸಿದ್ದಾನೆ. ಇದರಿಂದ ನೊಂದ ಅನಿಲ್ ಜೂನ್ 21ರಂದು ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 
ಈ ದೂರಿನನ್ವಯ ಪೊಲೀಸರು ಸ್ವಾತಿಕ್ ನನ್ನು ಬಂಧಿಸಿ ಆತನ ವಿರುದ್ಧ ಐಪಿಸಿ ಸೆಕ್ಷನ್ 504(ಶಾಂತಿಯ ಉಲ್ಲಂಘನೆಯನ್ನು ಪ್ರೇರೇಪಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು 153ಎ(ದ್ವೇಷವನ್ನು ಉತ್ತೇಜಿಸುವುದು)ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಂತರ ಬೆಲ್ ಮೇಲೆ ಸ್ವಾತಿಕ್ ನನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com