ರೈತರ ಸಾಲ ಮನ್ನಾ ಸುತ್ತೊಲೆಯ ಪ್ರಮುಖ ಷರತ್ತುಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ರೈತರ ಸಹಕಾರಿ ಬ್ಯಾಂಕ್ ಗಳಲ್ಲಿನ 50 ಸಾವಿರ ರುಪಾಯಿ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ರೈತರ ಸಹಕಾರಿ ಬ್ಯಾಂಕ್ ಗಳಲ್ಲಿನ 50 ಸಾವಿರ ರುಪಾಯಿ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ಶನಿವಾರ ಅಧಿಕೃತ ಆದೇಶ ಹೊರಡಿಸಿದ್ದು, ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ಒಟ್ಟು 14 ಷರತ್ತುಗಳನ್ನು ವಿಧಿಸಿದ್ದಾರೆ.
ರೈತರ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಇಂದು ಹೊರಡಿಸಿರುವ ಸುತ್ತೊಲೆಯಲ್ಲಿ, ಪಶುಭಾಗ್ಯ ಸಾಲ, ಕೃಷಿಯೇತರ ಸಾಲಗಳು, ಮಧ್ಯಮಾವಧಿ, ದೀರ್ಘಾವಧಿ ಸಾಲ ಪಡೆದಿರುವವರ ಸಾಲ ಮನ್ನಾ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಸುತ್ತೊಲೆಯ ಪ್ರಮುಖ ಷರತ್ತುಗಳು
  • ೫೦ಸಾವಿರಕ್ಕಿಂತ ಹೆಚ್ಚು ಅಲ್ಪಾವಧಿ ಸಾಲ ಪಡೆದವರು ೨೦೧೮, ಜೂನ್ ಒಳಗೆ ಅಸಲು ಪಾವತಿಸಿದ್ರೇ ಮಾತ್ರ ೫೦ ಸಾವಿರ ಸಾಲ ಮನ್ನಾ
  • ಅಲ್ಪಾವಧಿಯ ಸಾಲದಲ್ಲಿ ಸುಸ್ತಿ ಬಾಕಿ ಹೊಂದಿರುವ ರೈತರು ಡಿಸೆಂಬರ್ ೩೧, ೨೦೧೭ರೊಳಗಾಗಿ ಮರುಪಾವತಿ ಮಾಡಿದ್ರೆ ಮಾತ್ರ ೫೦ ಸಾಲ ಮನ್ನಾ, ಅಸಲು ಮತ್ತು ಬಡ್ಡಿ ಸೇರಿ ಸಾಲ ಮನ್ನಾ
  • ಸಾಲಮನ್ನಾ ದಿನಾಂಕದ ಗಡುವಿನ ಬಳಿಕವಷ್ಟೇ ಸಾಲಮನ್ನಾ ಸೌಲಭ್ಯ ಪಡೆದವರಿಗೆ ಮತ್ತೆ ಸಾಲ ಕೊಡುವುದು
  • ರೈತನೊಬ್ಬ ಒಂದಕ್ಕಿಂತ ಹೆಚ್ಚು ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ರೆ ಒಂದೇ ಬ್ಯಾಂಕಿನಲ್ಲಿ ಮಾತ್ರ ಸಾಲ ಮನ್ನಾ ಸೌಲಭ್ಯ
  • ಸಾಲ ಪಡೆದ ರೈತ ಮೃತಪಟ್ಟಿದ್ದಲ್ಲಿ ಸಂಬಂಧಪಟ್ಟ ವಾರಸುದಾರರು ಸಾಲ ಕಟ್ಟಿದ್ರೆ ಮಾತ್ರ ಸಾಲ ಮನ್ನಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com