ಉಲ್ಲಾಳ ಬೀಚ್
ರಾಜ್ಯ
ಮಂಗಳೂರು: ಉಳ್ಳಾಲ ಬೀಚ್ ನಲ್ಲಿ ಇಬ್ಬರು ಯುವಕರು ನೀರು ಪಾಲು
ಪ್ರವಾಸಕ್ಕೆ ಆಗಮಿಸಿದ್ದ ತುಮಕೂರು ಜಿಲ್ಲೆಯ ಇಬ್ಬರು ಯುವಕರು ಸಮುದ್ರಪಾಲಾದ ಘಟನೆ ಬುಧವಾರ ಉಳ್ಳಾಲದ....
ಮಂಗಳೂರು: ಪ್ರವಾಸಕ್ಕೆ ಆಗಮಿಸಿದ್ದ ತುಮಕೂರು ಜಿಲ್ಲೆಯ ಇಬ್ಬರು ಯುವಕರು ಸಮುದ್ರಪಾಲಾದ ಘಟನೆ ಬುಧವಾರ ಉಳ್ಳಾಲದ ಮೊಗವೀರಪಟ್ಟಣ ಸಮೀಪದ ಬೀಚ್ ನಲ್ಲಿ ನಡೆದಿದೆ.
ನೀರು ಪಾಲಾದ ಯುವಕರು ತುಮಕೂರು ಜಿಲ್ಲೆ ಶಿರಾ ತಾಲೂಕಿನ ಶಾರೂಖ್ (19) ಮತ್ತ ಹಝಾಝ್ ಯಾನೆ ಚೋಟು (19) ಎಂದು ಗುರುತಿಸಲಾಗಿದೆ.
ತುಮಕೂರಿನಿಂದ ಉಳ್ಳಾಲ ದರ್ಗಾಕ್ಕೆ ಆಗಮಿಸಿದ್ದ ಇವರು ಸ್ನಾನಕ್ಕೆಂದು ಸಮುದ್ರಕ್ಕಿಳಿದ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರಪಾಲಾಗಿದ್ದಾರೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಯುವಕರು ಹತ್ತು ಮಂದಿ ಸಂಬಂಧಿಕರೊಂದಿಗೆ ಇಂದು ಐತಿಹಾಸ ಉಳ್ಳಾಲ ದರ್ಗಾ ನೋಡಲು ತುಮಕೂರಿನಿಂದ ಬಂದಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ