ಮುರಿದು ಬಿದ್ದ ಮದುವೆ: ಬೆಂಗಳೂರಿನಲ್ಲಿ ಯುವತಿ ಆತ್ಮಹತ್ಯೆ

ನಿಶ್ಚಿತಾರ್ಥ ನಂತರ ಯುವಕ ಮದುವೆಗೆ ನಿರಾಕರಿದ ಹಿನ್ನೆಲೆಯಲ್ಲಿ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜರಾಜೇಶ್ವರಿ ...
ನಾಗಲಕ್ಷ್ಮಿ
ನಾಗಲಕ್ಷ್ಮಿ

ಬೆಂಗಳೂರು: ನಿಶ್ಚಿತಾರ್ಥ ನಂತರ ಯುವಕ ಮದುವೆಗೆ ನಿರಾಕರಿದ ಹಿನ್ನೆಲೆಯಲ್ಲಿ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.

ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ ನಿವಾಸಿ ಗಳಾದ ದೇವಾನಂದ್ ಮತ್ತು ವಿಮಲಾ ಅವರ ಪುತ್ರಿ ನಾಗಲಕ್ಷ್ಮಿ (30)ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಎಂಬಿಎ ಪದವೀಧರೆಯಾಗಿದ್ದ ನಾಗಲಕ್ಷ್ಮಿ  ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಹೈದರಾಬಾದ್ ನ ಕಾರ್ತಿಕ್ ಎಂಬ ಯುವಕನ ಜೊತೆ ನಿಶ್ಚಿತಾರ್ಥವಾಗಿತ್ತು. ಮಂಗಳವಾರ ತನ್ನ ಪೋಷಕರು ಹೊರಗೆ ಹೋಗಿದ್ದಾಗ ನಾಗಲಕ್ಷ್ಮಿ ಸೀಲಿಂಗ್ ಫ್ಯಾನ್ ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೇ 22 ರಂದು ನಾಗಲಕ್ಷ್ಮಿ ಮತ್ತು ಕಾರ್ತಿಕ್ ವಿವಾಹ ನಿಶ್ಚಯಗೊಂಡಿತ್ತು. ಒಂದು ವರ್ಷದ ಹಿಂದೆಯೇ ಇಬ್ಬರಿಗೂ ನಿಶ್ಚಿತಾರ್ಥವಾಗಿತ್ತು, ಇತ್ತೀಚೆಗೆ ಕಾರ್ತಿಕ್ ತಂದೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ನಂತರ ಕಾರ್ತಿಕ್ ಜ್ಯೋತಿಷಿಯನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಆ ಹುಡುಗಿ  ಅದೃಷ್ಟ ಸರಿಯಿಲ್ಲ ಎಂದು  ಜ್ಯೋತಿಷಿ ಹೇಳಿದ್ದಾರೆ. ಇದನ್ನು ಕಾರ್ತಿಕ್ ನಾಗಲಕ್ಷ್ಮಿಗೆ ತಿಳಿಸಿದ್ದಾನೆ, ಇದರಿಂದ ಬೇಸತ್ತು ನಾಗಲಕ್ಷ್ಮಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com