ಉಕ್ಕಿನ ಸೇತುವೆ ಕೈ ಬಿಟ್ಟ ಸರ್ಕಾರ: ತೀವ್ರ ಬೇಸರ ವ್ಯಕ್ತಪಡಿಸಿದ ಬೆಂಗಳೂರು ಉತ್ತರ

ತೀವ್ರ ವಿವಾದಿತ ಉಕ್ಕನ ಸೇತುವೆ ಯೋಜನೆಯನ್ನು ಸರ್ಕಾರ ಕೈಬಿಟ್ಟಿರುವ ಹಿನ್ನಲೆಯಲ್ಲಿ ಬೆಂಗಳೂರಿನ ಉತ್ತರ ಭಾಗದ ಜನತೆ ತೀವ್ರ ಬೇಸರವನ್ನು ವ್ಯಕ್ತಪಡಿಸುತ್ತಿದೆ...
ಉಕ್ಕಿನ ಸೇತುವೆ ಯೋಜನೆ
ಉಕ್ಕಿನ ಸೇತುವೆ ಯೋಜನೆ
ಬೆಂಗಳೂರು: ತೀವ್ರ ವಿವಾದಿತ ಉಕ್ಕನ ಸೇತುವೆ ಯೋಜನೆಯನ್ನು ಸರ್ಕಾರ ಕೈಬಿಟ್ಟಿರುವ ಹಿನ್ನಲೆಯಲ್ಲಿ ಬೆಂಗಳೂರಿನ ಉತ್ತರ ಭಾಗದ ಜನತೆ ತೀವ್ರ ಬೇಸರವನ್ನು ವ್ಯಕ್ತಪಡಿಸುತ್ತಿದೆ. 
ಭವಿಷ್ಯದ ಬೆಂಗಳೂರು ಇರುವುದು ಉತ್ತರ ಬೆಂಗಳೂರಿನಲ್ಲಿ. ಹೀಗಾಗಿ ಉಕ್ಕಿನ ಸೇತುವೆ ಯೋಜನೆ ಕೈಬಿಟ್ಟಿರುವ ರಾಜ್ಯ ಸರ್ಕಾರ, ಈ ಭಾಗದ ಸುಗಮ ಸಾರಿಗೆಗೆ ಏನು ಮಾಡುತ್ತದೆ ಎಂಬ ಪ್ರಶ್ನೆ ಇದೀಗ ಎದುರಾಗಿದೆ. 
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾದ ನಂತರ ಉತ್ತರ ಭಾಗದಲ್ಲಿ ಸಾರ್ವಜನಿಕರು ತೀವ್ರ ಸಂಚಾರ ದಟ್ಟಣೆಯಿಂದ ತೊಂದರೆ ಅನುಭವಿಸುವಂತಾಗಿದೆ. ಬಳ್ಳಾರಿ ರಸ್ತೆಯ ಮೂಲಕ ನಿತ್ಯ ಲಕ್ಷಾಂತರ ವಾಹನಗಳು ವಿಮಾನ ನಿಲ್ದಾಣಕ್ಕೆ ಹೋಗುವುದರಿಂದ ದಿನವೆಲ್ಲ ಸವಾರರು ದಟ್ಟಣೆ ಅನುಭವಿಸಬೇಕಿದೆ. 
ಹೀಗಾಗಿ ರಾಜ್ಯ ಸರ್ಕಾರ ಈ ಭಾಗದಲ್ಲಿ ಉಕ್ಕಿನ ಸೇತವೆ ನಿರ್ಮಾಣ ಮಾಡಲು ಮುಂದಾಗಿತ್ತು. ಉತ್ತರ ಭಾಗದಲ್ಲಿನ ಸಂಚಾರ ದಟ್ಟಣೆ ನಿವಾರಣೆ ಮಾಡುವ ಉದ್ದೇಶದಿಂದ 2010ರಲ್ಲಿಯೇ ಖಾಸಗಿ ಸಂಸ್ಥೆಯೊಂದಕ್ಕೆ ಡಿಪಿಆರ್ ಸಿದ್ಧಪಡಿಸಲು ಟೆಂಡರ್ ನೀಡಲಾಗಿತ್ತು. ಅದರಂತೆ ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ ಉಕ್ಕಿನ ಸೇತುವೆ ಸ್ಥಾಪಿಸಲು ಯೋಜನೆ ರೂಪಿಸಲಾಗಿತ್ತು. ನಂತರ ಎಸ್ಟೀಂ ಮಾಲ್ ವರೆಗೆ ವಿಸ್ತರಿಸಲು ಮುಂದಾಗಿದ್ದರು. ಅದರ ಹಿನ್ನಲೆಯಲ್ಲಿ ಕಾಮಗಾರಿ ವೆಚ್ಚವೂ ಸಹ ಹೆಚ್ಚಳವಾಗಿದ್ದು, 2014ರ ಬಜೆಟ್ ನಲ್ಲಿ ಇದನ್ನು ಘೋಷಣೆ ಮಾಡಲಾಗಿತ್ತು. 
ಇದೀಗ ಸರ್ಕಾರ ಬಹು ನಿರೀಕ್ಷಿತ ಉಕ್ಕಿನ ಸೇತುವೆ ಯೋಜನೆಯನ್ನು ಕೈಬಿಟ್ಟಿರುವುದಕ್ಕೆ ಉತ್ತರ ಬೆಂಗಳೂರಿನ ನಿವಾಸಿಗಳು ತೀವ್ರ ಬೇಸರವನ್ನು ವ್ಯಕ್ತಪಡಿಸಿದ್ದಾರೆ. 
ಕರ್ನಾಕ ಅಭಿವೃದ್ಧಿ ಮತ್ತು ಅನುಷ್ಠಾನ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಿವರಾಮ ಶೆಟ್ಟಿ ಮಾತನಾಡಿ, ಉತ್ತಮ ರಸ್ತೆ ಹಾಗೂ ಸೇತವೆ ಕೇಳುವುದು ತೆರಿಗೆ ಪಾವತಿ ಮಾಡುವ ಲಕ್ಷಾಂತರ ನಾಗರೀಕರ ಹಕ್ಕಾಗಿದೆ. ಏನೇ ಆದರೂ ನಮಗೆ ಉಕ್ಕಿನ ಸೇತುವೆ ಬೇಕು. ಸರ್ಕಾರ ತನ್ನ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳದಿದ್ದರೆ, ನಾನು ಪ್ರತಿಭಟನೆ ನಡೆಸುತ್ತೇವೆ. ಬೆಂಗಳೂರಿನ ಅಭಿವೃದ್ಧಿ ವಿರುದ್ಧ ಇರುವ ಜನರನ್ನು ನಾವು ಖಂಡಿಸುತ್ತೇವೆಂದು ಹೇಳಿದ್ದಾರೆ. 
ಹೆಬ್ಬಾಳ ಸೇತುವೆ, ಮೇಖ್ರಿ ವೃತ್ತ, ಕಾವೇರಿ ಜಂಕ್ಷನ್ ದಾಟುವಷ್ಟರಲ್ಲಿ ಸಾಕಾಗಿ ಹೋಗುತ್ತದೆ. ಹೆಬ್ಬಾಳದಲ್ಲಿರುವ ಜನರಂತೂ ಪ್ರತೀನಿತ್ಯ ನರಕವನ್ನು ಅನುಭವಿಸುತ್ತಿದ್ದಾರೆ. ನಮ್ಮ ಮೆಟ್ರೋ ಇದೀಗ ನಮ್ಮದಲ್ಲದ ಮೆಟ್ರೋ ಆಗಿ ಪರಿವರ್ತನೆ ಗೊಂಡಿದೆ. ಉಕ್ಕಿನ ಸೇತುವೆ ಯೋಜನೆಯಿಂದಾಗಿ ಕೊಂಚ ನಿರಾಳ ದೊರೆತಂದಾಗಿತ್ತು. ಆದರೀಗ ಅದೂ ಕೂಡ ಇಲ್ಲದಂತಾಗಿದೆ. ಮೆಟ್ರೋ ಸಂಚಾರ ಕೆಲ ಪ್ರದೇಶಗಳನ್ನು ಮಾತ್ರ ಸಂಚಾರ ಮಾಡುತ್ತಿದ್ದು, ಮೆಟ್ರೋದಿಂದ ಪ್ರಯೋಜನವಾಗಿಲ್ಲ. ಉಕ್ಕಿನ ಸೇತುವೆ ವಿರುದ್ದ ಪ್ರತಿಭಟನೆ ನಡೆಸಿದ್ದವರು ಇದೀಗ ನಮಗೆ ಪರ್ಯಾಯ ಪರಿಹಾರವನ್ನು ನೀಡುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com