ವಾಮಾಚಾರಕ್ಕೆ ಬಾಲಕಿ ಬಲಿ: ಹೊಸಹಳ್ಳಿ ಕಾಲುವೆಯಲ್ಲಿ ಶವ ಪತ್ತೆ

ಮಾಟ, ವಾಮಾಚಾರಕ್ಕೆ 10 ವರ್ಷದ ಬಾಲಕಿಯೊಬ್ಬಳು ಬಲಿಯಾಗಿದ್ದು, ಹೊಸಹಳ್ಳಿ ಕಾಲುವೆಯೊಂದರಲ್ಲಿ ಶುಕ್ರವಾರ ಬಾಲಕಿಯ ಶವ ಪತ್ತೆಯಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಮಾಟ, ವಾಮಾಚಾರಕ್ಕೆ 10 ವರ್ಷದ ಬಾಲಕಿಯೊಬ್ಬಳು ಬಲಿಯಾಗಿದ್ದು, ಹೊಸಹಳ್ಳಿ ಕಾಲುವೆಯೊಂದರಲ್ಲಿ ಶುಕ್ರವಾರ ಬಾಲಕಿಯ ಶವ ಪತ್ತೆಯಾಗಿದೆ. 
ಆಯಿಶಾ. ಬಿ ಮೃತ ಬಾಲಕಿಯಾಗಿದ್ದಾಳೆ. ಬಾಲಕಿ ಮಾಗಡಿ ತಾಲೂಕಿನ ಸುನಕಲ್ ಗ್ರಾಮದ ನಿವಾಸಿದ್ದಳು. ಬಾಲಕಿ ನಾಲ್ಕನೇ ತರಗತಿ ಓದುತ್ತಿದ್ದಳು. ಮಾರ್ಚ್ 1 ರಿಂದ ಬಾಲಕಿ ಕಾಣೆಯಾಗಿದ್ದಳು. ಬಾಲಕಿಯ ಕಣ್ಮರೆಯಿಂದಾಗಿ ಕಂಗಾಲಾಗಿದ್ದ ಪೋಷಕರು ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. 
ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ಬಾಲಕಿಯ ಕತ್ತನ್ನು ಕೊಯ್ಯಲಾಗಿದ್ದು, ಆಕೆಯ ಕಾಲಿಗೆ ನಿಂಬೆಹಣ್ಣನ್ನು ಕಟ್ಟಲಲಾಗಿತ್ತು. ಕಾಲುವೆಯಲ್ಲಿ ಮೃತ ದೇಹ ತೇಲುತ್ತಿತ್ತು ಎಂದು ಹೇಳಿದ್ದಾರೆ. 
ಆಯಿಶಾ ಮನೆಯ ಹೊರಗೆ ಆಡುತ್ತಿದ್ದ ವೇಳೆ ರಾತ್ರಿ 8 ಗಂಟೆ ಸುಮಾರಿಗೆ ಕಾಣೆಯಾಗಿದ್ದರು. ರಾತ್ರಿಯಿಡೀ ಬಾಲಕಿಯನ್ನು ಹುಡುಕಾಡಿದ್ದ ಪೋಷಕರು ನಂತರ ಪೊಲೀಸರಿಗೆ ದೂರು ನೀಡಿದ್ದರು. ಹೊಸಹಳ್ಳಿ ರಸ್ತೆಯ ಕಾಲುವೆಯಲ್ಲಿ ಮೃತದೇಹವೊಂದು ತೇಲುತ್ತಿರುವುದನ್ನು ಸ್ಥಳೀಯರು ನೋಡಿದ್ದಾರೆ. ಈ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಬಾಲಕಿಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ವಾಮಾಚಾರಕ್ಕೆ ಬಾಲಕಿಯನ್ನು ಬಳಸಿಕೊಂಡು ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. 
ಪ್ರಕರಣ ಸಂಬಂಧ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದು, ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com