ಬೆಂಗಳೂರು: ಸಲಿಂಗ ಕಾಮಿ ಉಪನ್ಯಾಸಕನನ್ನು ವಜಾ ಮಾಡಿದ ಸೇಂಟ್ ಜೋಸೆಫ್ ಕಾಲೇಜು

ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಸಲಿಂಗ ಕಾಮಿ ಉಪನ್ಯಾಸಕನೊಬ್ಬರನ್ನು ನಗರದ ಸೆಂಟ್ ಜೋಸೆಫ್ ಕಾಲೇಜು ಆಡಳಿತ ಮಂಡಳಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಸಲಿಂಗ ಕಾಮಿ ಉಪನ್ಯಾಸಕನೊಬ್ಬರನ್ನು ನಗರದ ಸೆಂಟ್ ಜೋಸೆಫ್ ಕಾಲೇಜು ಆಡಳಿತ ಮಂಡಳಿ ವಜಾಗೊಳಿಸಿದೆ.

ಉಪನ್ಯಾಸಕ ಅಶ್ಲಿ ಟೆಲಿಸ್ ತನ್ನ ಸಲಿಂಗಕಾಮದಿಂದಾಗಿ ಉದ್ಯೋಗ ಕಳೆದು ಕೊಂಡಿದ್ದಾನೆ, ಸಲಿಂಗ ಕಾಮಿ ಎಂಬ ಉದ್ದೇಶದಿಂದ ಆತನನ್ನು ವಜಾಗೊಳಿಸಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಸ್ಪಷ್ಟ ಪಡಿಸಿದೆ.

ರಿಚ್ ಮಂಡ್ ಸರ್ಕಲ್ ನಲ್ಲಿರುವ ಸೇಂಟ್ ಜೋಸೆಫ್ ಕಾಲೇಜಿನಿಂದ ನನ್ನನ್ನು ಏಕಾಏಕಿ ವಜಾಗೊಳಿಲಾಗಿದೆ. ಈ ಸಂಬಂಧ ನನಗೆ ಕಾಲೇಜಿನಿಂದ ಯಾವುದೇ ನೋಟಿಸ್ ಕೂಡ ನೀಡಿರಲಿಲ್ಲ ಎಂದು ಆರೋಪಿಸಿದ್ದಾರೆ.ದ್ವಿತೀಯ ಬಿ.ಕಾಂ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಪಾಠ ಮಾಡುತ್ತಿದ್ದ ವೇಳೆ ನನ್ನನ್ನು ಪ್ರಿನ್ಸಿಪಾಲ್ ಕರೆದರು. ನಾನು ಪ್ರಿನ್ಸಿಪಾಲ್ ಕಚೇರಿಗೆ ತೆರಳಿದೆ.ನನ್ನ ವಯಕ್ತಿಕ ಅಭಿಪ್ರಾಯಗಳಿಂದಾಗಿ ವಿದ್ಯಾರ್ಥಿಗಳು ತೊಂದರೆಗೊಳಗಾಗಿದ್ದಾರೆ.ಎಂದು ಪ್ರಾಂಶುಪಾಲರು ತಿಳಿಸಿದ್ದಾಗಿ ಅಶ್ಲಿ ಹೇಳಿದ್ದಾರೆ.

ಕಾಲೇಜು ಆಡಳಿತ ಮಂಡಳಿ ನನ್ನನ್ನು ಕೆಲಸದಿಂದ ಕೂಡಲೇ ವಜಾಗೊಳಿಸುವಂತೆ ಹೇಳಿರುವುದಾಗಿ ಪ್ರಾಂಶುಪಾಲರು ತಿಳಿಸಿದರು, ಕಾಲೇಜು ಆಡಳಿತ ಮಂಡಳಿ ಕ್ಯಾಥೋಲಿಕ್ ಆಗಿರುವ ಕಾರಣ ನನ್ನನ್ನು ವಿರೋಧಿಸುತ್ತಿದೆ. ನನ್ನ ಸಲಿಂಗಕಾಮವನ್ನು ಅವರು ಒಪ್ಪುತ್ತಿಲ್ಲ. ತರಗತಿಯಲ್ಲಿ ನಾನು ವಿದ್ಯಾರ್ಥಿಗಳ ಜೊತೆ ಲೈಂಗಿಕತೆಗೆ ಸಂಬಂಧಪಟ್ಟ ಎಲ್ಲಾ ವಿಷಯಗಳ ಬಗ್ಗೆ ಮಾತನಾಡುತ್ತಿದ್ದೆ ಎಂದು ಅಶ್ಲಿ ತಿಳಿಸಿದ್ದಾರೆ.

ಇದೇ ಕಾರಣಕ್ಕಾಗಿ ಬ್ರಿಗೇಡ್ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಕೆಲ ವರ್ಷಗಳ ಹಿಂದೆ ನನಗೆ ಉದ್ಯೋಗ ನಿರಾಕರಿಸಲಾಗಿತ್ತು ಎಂದು ಅಶ್ಲಿ ವಿವರಿಸಿದ್ದಾರೆ.

ಈ ಸಂಬಂಧ ಕಾಲೇಜಿನ ಪ್ರಾಂಶುಪಾಲ ವಿಕ್ಟರ್ ಲೋಬೋ ಅವರನ್ನು ವಿಚಾರಿಸಿದರೇ, ಆಶ್ಲಿ ಅವರು ಮಾಡುತ್ತಿರುವ ಆರಾಪ ನಿರಾಧಾರವಾದದ್ದು, ಕೆಲಸದಿಂದ ವಜಾಗೊಳಿಸಿರುವುದಕ್ಕೂ ಅವರ ಸಲಿಂಗ ಕಾಮಕ್ಕೂ ಯಾವುದೇ ಸಂಬಂಧವಿಲ್ಲ. ಆಡಳಿತ ಮಂಡಳಿಯ ನೀತಿ ನಿಯಮಗಳನ್ನು ಸಿಬ್ಬಂದಿ ಪಾಲಿಸುತ್ತಿರಲಿಲ್ಲ, ಕೆಲ ವಿದ್ಯಾರ್ಥಿಗಳು ತೊಂದರೆಗೊಳಗಾಗಿದ್ದಾಗಿ ದೂರು ನೀಡಿದ್ದರು. ಕಾನೂನು ಸಲಹೆಗಾರರನ್ನು ಸಂಪರ್ಕಿಸಿ, ಸಮಾಲೋಚಿಸಿದ ನಂತರ ಅಶ್ಲಿ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com