ಶಾಯರಿಗಳ ಜನಕ ಪ್ರೊ. ಇಟಗಿ ಈರಣ್ಣ ವಿಧಿವಶ

ಖ್ಯಾತ ಕವಿ ಹಾಗೂ ಶಾಯರಿಗಳ ಜನಕ ಎಂದೇ ಪ್ರಸಿದ್ಧರಾಗಿದ್ದ ಇಟಗಿ ಈರಣ್ಣ (66) ಹೃದಯಾಘಾತದಿಂದ ನಿಧನರಾಗಿದ್ದಾರೆ....
ಇಟಗಿ ಈರಣ್ಣ
ಇಟಗಿ ಈರಣ್ಣ
Updated on: 

ಶಿವಮೊಗ್ಗ: ಖ್ಯಾತ ಕವಿ ಹಾಗೂ ಶಾಯರಿಗಳ ಜನಕ ಎಂದೇ ಪ್ರಸಿದ್ಧರಾಗಿದ್ದ ಇಟಗಿ ಈರಣ್ಣ (66) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಹೊಸಪೇಟೆ, ಬಳ್ಳಾರಿ, ಹೂವಿನಹಡಗಲಿ ಸೇರಿದಂತೆ ಹಲವು ಕಾಲೇಜುಗಳಲ್ಲಿ ಉಪನ್ಯಾಸಕರಾಗಿದ್ದ ಈರಣ್ಣ ನಿವೃತ್ತಿಯ ನಂತರ ಶಿವಮೊಗ್ಗದಲ್ಲಿ ನೆಲೆಸಿದ್ದರು. ಕನ್ನಡದ ಶಾಯರಿಗಳು ಅವರ ಜನಪ್ರಿಯ ಪುಸ್ತಕ. ಹದಿನೈದಕ್ಕೂ ಹೆಚ್ಚು ಮುದ್ರಣ ಕಂಡಿರುವುದು ಅವರ ಜನಪ್ರಿಯತೆಗೆ ಸಾಕ್ಷಿ.

ತಾಯಿ ಕೊಟ್ಟ ತಾಳಿ ಅವರ ಸಾಹಿತ್ಯ ಬಳಕೆ ಆದ ಮೊದಲ ಚಿತ್ರ. ಸ್ಪರ್ಶ ಸಿನಿಮಾಕ್ಕಾಗಿ ಅವರು ಬರೆದ ಶಾಯರಿ `ಚಂದಕಿಂತ ಚಂದ ನೀನೇ ಸುಂದರ’ ಎಲ್ಲರ ಮನಗೆದ್ದ ಗೀತೆ.

ಮಾರ್ಚ್ 8 ರಂದು ಈರಣ್ಣ ಅವರು ತಮ್ಮ ತಾಯಿಯನ್ನು ಕಳೆದು ಕೊಂಡಿದ್ದರು. ತಾಯಿ ಸತ್ತ ನಾಲ್ಕು ದಿನಗಳಲ್ಲಿಯೇ ಈರಣ್ಣ ಕೂಡ ವಿಧಿವಶರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com