ದಲಿತ ಯುವಕರ ಮೇಲೆ ಹಲ್ಲೆ: ನರಗುಂದದಲ್ಲಿ ಪರಿಸ್ಥಿತಿ ಉದ್ವಿಗ್ನ

ದಲಿತ ಸಮುದಾಯಕ್ಕೆ ಸೇರಿದ ನಾಲ್ವರು ಯುವಕರನ್ನು ಬೆತ್ತಲೆಗೊಳಿಸಿ, ಹಲ್ಲೆ ನಡೆಸಿರುವ ಘಟನೆಯೊಂದು ಗದಗ ಜಿಲ್ಲೆಯ ನರುಗಂದದಲ್ಲಿ ಭಾನುವಾರ ನಡೆದಿದೆ...
ದಲಿತ ಯುವಕರ ಮೇಲೆ ಹಲ್ಲೆ: ನರಗುಂದದಲ್ಲಿ ಪರಿಸ್ಥಿತಿ ಉದ್ವಿಗ್ನ
ದಲಿತ ಯುವಕರ ಮೇಲೆ ಹಲ್ಲೆ: ನರಗುಂದದಲ್ಲಿ ಪರಿಸ್ಥಿತಿ ಉದ್ವಿಗ್ನ
ಹುಬ್ಬಳ್ಳಿ: ದಲಿತ ಸಮುದಾಯಕ್ಕೆ ಸೇರಿದ ನಾಲ್ವರು ಯುವಕರನ್ನು ಬೆತ್ತಲೆಗೊಳಿಸಿ, ಹಲ್ಲೆ ನಡೆಸಿರುವ ಘಟನೆಯೊಂದು ಗದಗ ಜಿಲ್ಲೆಯ ನರುಗಂದದಲ್ಲಿ ಭಾನುವಾರ ನಡೆದಿದೆ. 
ನಾಲ್ವರು ಯುವಕರನ್ನು ಅರೆ ಬೆತ್ತಲೆಗೊಳಿಸಿರುವ ದುಷ್ಕರ್ಮಿಗಳು ರಸ್ತೆ ಮಧ್ಯೆ ಥಳಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 
ಖವಾಜಾ ಸಬ್ ಮಲ್ಲಸಮುದ್ರ (26), ಗೌಸುಸಬ್ ರಾವುತ್ (17)ಸ ಮಲ್ಲಿಕಾರ್ಜುನ ನಳಬಂದ್ (18) ಮತ್ತು ಜಾಕ್ರಿ ಮನಿಯಾರ್ ಥಳಿತಕ್ಕೊಳಗಾದ ಯುವಕರಾಗಿದ್ದು, ನಾಲ್ವರು ಯುವಕರು ನರಗುಂದದ ಟೌನ್ ನಿವಾಸಿಗಳಾಗಿದ್ದಾರೆ. 
ಜಮಲ್ ಕಮಂದರ್ ಎಂಬ ಗೆಳೆಯನೊಬ್ಬ ಈ ವಿಡಿಯೋವನ್ನು ಮಾಡಿದ್ದ. 8 ತಿಂಗಳ ಹಿಂದೆ ನಮ್ಮ ಮೇಲೆ ಹಲ್ಲೆ ನಡೆಸಲಾಗಿತ್ತು. ನಂತರ ವಿಡಿಯೋವನ್ನು ಬಿಡುಗಡೆ ಮಾಡುವುದಾಗಿ ಆತ ನಮಗೆ ಬೆದರಿಕೆ ಹಾಕುತ್ತಿದ್ದ. ಶನಿವಾರ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಸಂಘಟನೆಯೊಂದಕ್ಕೆ ಸಿಕ್ಕಿದೆ ಎಂದು ಮಲ್ಲಸಮುದ್ರ ಹೇಳಿದ್ದಾರೆ. 
ಇದೀಗ ಈ ವಿಡಿಯೋ ಭಾರೀ ವಿರೋಧಗಳು ವ್ಯಕ್ತವಾಗುತ್ತಿದ್ದು, ನಿನ್ನೆಯಷ್ಟೇ ನೂರಾರು ಸಂಖ್ಯೆಯಲ್ಲಿ ನರಗುಂದದಲ್ಲಿ ಪ್ರತಿಭಟನಾ ರ್ಯಾಲಿಯನ್ನು ನಡೆಸಲಾಗಿದೆ. ಪ್ರತಿಭಟನೆ ವೇಳೆ ಅಧಿಕಾರಿಗಳ ವಿರುದ್ಧ ಆರೋಪಗಳು ವ್ಯಕ್ತವಾಗಿದ್ದು, ನರಗುಂದ ಇನ್ಸ್ ಪೆಕ್ಟರ್ ರಾಮಾಕಾಂತ್ ಅವರು ದಲಿತ ಯುವಕರ ಮೇಲೆಯೇ ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ಹೇಳಿದ್ದಾರೆ. 
ಇನ್ನು ಈ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಎಸ್ ಸಂತೋಷ್ ಬಾಬು ಅವರು, ವೈಯಕ್ತಿಕ ದ್ವೇಷದಿಂದ ಘಟನೆ ನಡೆದಿದೆ. ಇದು ಕೋಮವಾದಿಗಳ ಘರ್ಷಣೆಯಲ್ಲ ಎಂದು ತಿಳಿಸಿದ್ದಾರೆ. 
ಇನ್ನು ಎರಡೂ ಸಮುದಾಯಗಳು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಈ ವರೆಗೂ ಮೂವರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಮತ್ತಷ್ಟು ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧನಕ್ಕೊಳಪಡಿಸುತ್ತೇವೆಂದು ಅಧಿಕಾರಿಗಳು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com