ಯುಗಾದಿ ಉಡುಗೊರೆ: ಕಾರ್ಮಿಕರ ನಿವೃತ್ತಿ ವಯಸ್ಸು 60ಕ್ಕೆ ಏರಿಕೆ

ರಾಜ್ಯದ ವಿವಿಧ ಖಾಸಗಿ ವಲಯದ ಕಾರ್ಖಾನೆಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಅಂಗಡಿಗಳಲ್ಲಿ ಕೆಲಸ ಮಾಡುತ್ತಿರುವ 21 ಲಕ್ಷ ಕಾರ್ಮಿಕರ ಸೇವಾ ನಿವೃತ್ತಿಯ ಅವಧಿಯವನ್ನು 58ರಿಂದ 60ವರ್ಷಕ್ಕೆ ಹೆಚ್ಚಳ ಮಾಡುವ ಮೂಲಕ ರಾಜ್ಯ ಸರ್ಕಾರ ಯುಗಾದಿ ಹಬ್ಬಕ್ಕೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯದ ವಿವಿಧ ಖಾಸಗಿ ವಲಯದ ಕಾರ್ಖಾನೆಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಅಂಗಡಿಗಳಲ್ಲಿ ಕೆಲಸ ಮಾಡುತ್ತಿರುವ 21 ಲಕ್ಷ ಕಾರ್ಮಿಕರ ಸೇವಾ ನಿವೃತ್ತಿಯ ಅವಧಿಯವನ್ನು 58ರಿಂದ 60ವರ್ಷಕ್ಕೆ ಹೆಚ್ಚಳ ಮಾಡುವ ಮೂಲಕ ರಾಜ್ಯ ಸರ್ಕಾರ ಯುಗಾದಿ ಹಬ್ಬಕ್ಕೆ ಉಡುಗೊರೆಯನ್ನು ನೀಡಿದೆ. 
ಕಾರ್ಮಿಕರ ಸೇವಾ ನಿವೃತ್ತಿ ಅವಧಿಯನನ್ನು 68 ವರ್ಷದಿಂದ 60 ವರ್ಷ ಹೆಚ್ಚಳಕ್ಕೆ ಕರ್ನಾಟಕ ಔದ್ಯೋಗಿಕ ಉದ್ಯೋಗಗಳ ನಿಯಮಾವಳಿಗೆ ತಿದ್ದುಪಡಿ ಮಾಡಲು ರಾಜ್ಯ ಸಚಿವ ಸಂಪುಟ ಸಭೆ ಶನಿವಾರ ಒಪ್ಪಿಗೆ ನೀಡಿದೆ. 
ರಾಜ್ಯದ 432 ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ 14 ಲಕ್ಷ ಕಾರ್ಮಿಕರು ಮತ್ತು 6,900 ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ 7 ಲಕ್ಷ ಕಾರ್ಮಿಕರು ಸೇರಿದಂತೆ ಒಟ್ಟು 21 ಲಕ್ಷ ಕಾರ್ಮಿಕರ ವಯೋಮಿತಿ 58 ರಿಂದ 60ಕ್ಕೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದ್ದು, ಈ ಕುರಿತು ರಾಜ್ಯ ಸರ್ಕಾರ ಶೀಘ್ರದಲ್ಲಿಯೇ ಆದೇಶವನ್ನು ಹೊರಡಿಸಲಿದೆ ಎಂದು ತಿಳಿದುಬಂದಿದೆ. 
ಈಗಾಗಲೇ ಕೇಂದ್ರ ಸರ್ಕಾರ ತನ್ನ ವ್ಯಾಪ್ತಿಯ ಖಾಸಗಿ ವಲಯದ ನೌಕರರ ನಿವೃತ್ತಿ ವಯೋಮಿತಿಯನ್ನು 58 ರಿಂದ 60ಕ್ಕೆ ಹೆಚ್ಚಿಸಿದೆ. ಅದಕ್ಕೆ ಪೂರಕವಾಗಿ ರಾಜ್ಯದಲ್ಲೂ ಈ ಬದಲಾವಣೆ ಮಾಡಲಾಗಿದೆ. ಈಗಾಗಲೇ ಅನೇಕ ಕೈಗಾರಿಕಾ ಸಂಸ್ಥೆಗಳು ವಯೋನಿವೃತ್ತಿಯ ಮಿತಿಯನ್ನು 60ಕ್ಕೆ ಹೆಚ್ಚಿಸಿವೆ. ಸಹಕಾರ ವಲಯದಲ್ಲೂ ಈಗಾಗಲೇ ಈ ತಿದ್ದುಪಡಿ ಮಾಡಿರುವುದರಿಂದ ಖಾಸಗಿ ವಲಯದ ಕಾರ್ಮಿಕರಿಗೂ ಈ ಬದಲಾವಣೆ ತರಲು ಸರ್ಕಾರ ಮುಂದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com