ದೇಶದ ಪ್ರಪ್ರಥಮ ಸ್ಟಾರ್ಟ್ ಅಪ್ ನಗರದ ಖ್ಯಾತಿಗೆ ಪಾತ್ರವಾಗಲಿದೆ ಮಂಗಳೂರು

ಅಧಿಕಾರಿಗಳು ಸರಿಯಾದ ವೇಳೆಗೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದರೇ ಕಡಲ ನಗರಿ ಮಂಗಳೂರು ದೇಶದಲ್ಲೇ ಮೊದಲ ಸ್ಟಾರ್ಟ್ ಅಪ್ ಜಿಲ್ಲೆ ಎಂಬ ಖ್ಯಾತಿಗೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಅಧಿಕಾರಿಗಳು ಸರಿಯಾದ ವೇಳೆಗೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದರೇ ಕಡಲ ನಗರಿ ಮಂಗಳೂರು ದೇಶದಲ್ಲೇ ಮೊದಲ ಸ್ಟಾರ್ಟ್ ಅಪ್ ಜಿಲ್ಲೆ ಎಂಬ ಖ್ಯಾತಿಗೆ ಪಾತ್ರವಾಗಲಿದೆ.

ಕೇಂದ್ರದ ವಾಣಿಜ್ಯ ಇಲಾಖೆ ಅಧಿಕಾರಿಗಳು ತಮ್ಮನ್ನು ಸಂಪರ್ಕಿಸಿ  ಮಂಗಳೂರು ದೇಶದ ಮೊದಲ ಸ್ಟಾರ್ಟ್ ಅಪ್ ನಗರವಾಗಲಿರುವುದಾಗಿ ತಿಳಿಸಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ಜಿ ಜಗದೀಶ್ ಹೇಳಿದ್ದಾರೆ.

ಕೇಂದ್ರ ವಾಣಿಜ್ಯ ಇಲಾಖೆ ಅಧಿಕಾರಿಗಳ ಜೊತೆಗಿನ ಚರ್ಚೆ ನಂತರ ಜಿಲ್ಲಾಡಳಿತ  ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಸಮೀಪವಿರುವ ಆದ್ಯಾರ್ ಮತ್ತು ಸುರತ್ಕಲ್ ಪ್ರದೇಶಗಳನ್ನು ಪರಿಶೀಲಿಸಿದೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಅವರ ನಮ್ಮನ್ನು ಭೇಟಿಯಾಗಿ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಸಚಿವರ ಆದೇಶದಂತೆ ವಾಣಿಜ್ಯ ಇಲಾಖೆ ಅಧಿಕಾರಿಗಳು ನಮ್ಮೊಂದಿಗೆ ಚರ್ಚಿಸಿದ್ದಾರೆ, ಆದರೆ ಇದುವರೆಗೂ ಯಾವುದೇ ಲಿಖಿತ ಆದೇಶ ಬಂದಿಲ್ಲ ಎಂದು ವಿವರಿಸಿದ್ದಾರೆ.

ಐಟಿ ಬಿಟಿ ವೃತ್ತಿಪರರರಿಗಾಗಿ ಸೋಶಿಯಲ್ ಇಕೋ ಸಿಸ್ಟಮ್ ಗಾಗಿ ನಗರದ ಮಧ್ಯಭಾಗದಲ್ಲಿ 20 ಸಾವಿರ ಚದರ ಅಡಿ ಜಾಗಕ್ಕಾಗಿ ಪರಿಶೀಲನೆ ನಡೆಸಿದ್ದೇವೆ, ಜನರಿಂದ ದೂರವಿರುವ ಪ್ರತ್ಯೇಕ ಸ್ಥಳಗಳಲ್ಲಿ ಸ್ಟಾರ್ಟ್ ಅಪ್ ನಿರ್ಮಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com