ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಕಬಳಿಸಲು ಸಂಚು: ಮಹಿಳೆ ಹಾಗೂ ಬಿಡಿಎ ಮಾಜಿ ನೌಕರ ಅರೆಸ್ಟ್

ನಕಲಿ ದಾಖಲೆ ಸೃಷ್ಟಿಸಿ ಬಿಡಿಎ ನಿವೇಶನ ಕಬಳಿಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಮಹಿಳೆ ಮತ್ತು ಒಬ್ಬ ಬಿಡಿಎ ಮಾಜಿ ಸಿಬ್ಬಂದಿಯನ್ನು ಪೊಲೀಸರು ..
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಬಿಡಿಎ ನಿವೇಶನ ಕಬಳಿಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಮಹಿಳೆ ಮತ್ತು ಒಬ್ಬ ಬಿಡಿಎ ಮಾಜಿ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಲಕ್ಷ್ಮಿ ಇಂಡಸ್ಚ್ರೀಸ್ ಮಾಲೀಕರಾದ ಸತ್ಯಪ್ರೇಮ ಕುಮಾರಿ, ಆಕೆಯ ಪತಿ ದಿನಕರ ಮತ್ತು ಆತನ ಸಹೋದರಿ ಕುಮುದಾ ಎಂಬುವರಿಗೆ ಸೇರಿದ ಯಶವಂತಪುರ ಕೈಗಾರಿಕಾ ಪ್ರದೇಶದಲ್ಲಿದ್ದ 8 ಸಾವಿರ ಚದರ ಅಡಿ ಭೂಮಿಯನ್ನು ನಕಲಿ ದಾಖಲೆ ಸೃಷ್ಠಿಸಿ ತನ್ನ ಹೆಸರಿಗೆ ಮಹಿಳೆ ವರ್ಗಾಯಿಸಿಕೊಂಡಿದ್ದಳು.
ನಿವೇಶನ ಮಾಲೀಕರಿಗೆ ಪರಿಚಿತಳಾಗಿದ್ದ ಮಹಿಳೆ ಬಿಡಿಎಯಲ್ಲಿ ತಾತ್ಕಾಲಿಕ ವಾಗಿ ಕೆಲಸ ಮಾಡುತ್ತಿದ್ದ ವಿನೋದ್ ಕುಮಾರ್ ಸ್ನೇಹಿತೆಯಾಗಿದ್ದಳು. ಈತ ಬಿಡಿಎ ರೆಕಾರ್ಡ್ ಸೆಕ್ಷನ್ ನಲ್ಲಿ ಕೆಲಸ ಮಾಡುತ್ತಿದ್ದ. ರೆಕಾರ್ಡ್ ರೂಂ ನಿಂದ ಮೂಲ ದಾಖಲಾತಿಗಳನ್ನು ಕದ್ದು, ಅದೇ ಸ್ಥಳಕ್ಕೆ ಮಹಿಳೆ ನೀಡಿದ್ದ ಫೋಟೋ ಕಾಪಿ ಇಟ್ಟಿದ್ದ. ಹಣಕ್ಕಾಗಿ ತಾನು ಈ ಕೆಲಸ ಮಾಡಿದ್ದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ,
ವಹಿಲೇಶ್ವರ ಎಂಬಾತನ ಬಳಿ ಮಹಿಳೆ ಹೊಸ ದಾಖಲಾತಿಗಳನ್ನು ಸೃಷ್ಟಿಸಿದ್ದಾಳೆ, ಅದರಲ್ಲಿ ಮೂಲ ದಾಖಲಾತಿಗಳಲ್ಲಿದ್ದ ಎಲ್ಲಾ ಮಾಹಿತಿಗಳಂತೆ ಮತ್ತೊಂದು ದಾಖಲಾತಿ ಸೃಷ್ಟಿಸಿ ಅದರಲ್ಲಿ ತನ್ನ ಹೆಸರಿಗೆ ನಿವೇಶನ ನೋಂದಣಿಯಾಗಿರುವಂತೆ ಮಾಡಿದ್ದಾಳೆ.
ಆ ನಿವೇಶನವನ್ನು ಯಶವಂತಪುರ ನಿವಾಸಿಯೊಬ್ಬರಿಗೆ 1.6 ಕೋಟಿ ರು. ಗೆ ಮಾರಾಟ ಮಾಡಿ ಅವರಿಂದ 25 ಲಕ್ಷ ರು ಹಣ ಕೂಡ ಪಡೆದಿದ್ದಾಳೆ. ಆಸ್ತಿ ಸಂಬಂಧ ಖರೀದಿದಾರರು ದಾಖಲಾತಿಗಳನ್ನು ಪರಿಶೀಲಿಸಿದ್ದಾರೆ, ಈ ವೇಳೆ ಆಸ್ತಿ ಮಾರಾಟ ವಿಷಯ ಕೇಳಿದ ಸಂತೋಷ್ ಶೆಟ್ಟಿ ಎಂಬಾತ ಬಿಡಿಎ ಆಯುಕ್ತರು ಮತ್ತು ಟಾಸ್ಕ್ ಫೋರ್ಸ್ ಗೆ ಮನವಿ ಮಾಡಿದರು. ಆಸ್ತಿಯ ಮೂಲ ದಾಖಲಾತಿ ತಮ್ಮ ಸಂಬಂಧಿಗಳ ಬಳಿಯಿದೆ ಎಂದು ತಿಳಿಸಿದ್ದರು. ಈ ಸಂಬಂಧ ಸಂತೋಷ್ ಶೆಟ್ಟಿ ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಟಾಸ್ಕ್ ಪೋರ್ಸ್ ತನಿಖೆಯಿಂದಾಗಿ ಪ್ರಕರಣ ಬೆಳಕಿಗೆ ಬಂದಿದೆ ಎಂದು ಟಾಸ್ಕ್ ಪೋರ್ಸ್ ಎಸ್ ಪಿ ಜಗದೀಶ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com