ಶವ ಸಾಗಿಸುವಾಗ ಆಂಬುಲೆನ್ಸ್ ದುರ್ಬಳಕೆ: ಬೆಂಗಳೂರು ಪೊಲೀಸರಿಂದ ಚಾಲಕನ ಬಂಧನ

ಆಂಬುಲೆನ್ಸ್‌ನಲ್ಲಿ ಶವ ಸಾಗಿಸುವಾಗ ಸೈರನ್ ಬಳಸಿದ ಆರೋಪದ ಮೇಲೆ ಚಾಲಕ ದೇವರಾಜ್ ಎಂಬುವರನ್ನು ಬಂಧಿಸಿದ ಹಲಸೂರು ಗೇಟ್ ಸಂಚಾರ ಪೊಲೀಸರು, ..
ಬಂಧಿತ ಚಾಲಕ ದೇವರಾಜ್ ಬಂಧನ
ಬಂಧಿತ ಚಾಲಕ ದೇವರಾಜ್ ಬಂಧನ
ಬೆಂಗಳೂರು: ಆಂಬುಲೆನ್ಸ್‌ನಲ್ಲಿ ಶವ ಸಾಗಿಸುವಾಗ ಸೈರನ್ ಬಳಸಿದ ಆರೋಪದ ಮೇಲೆ ಚಾಲಕ ದೇವರಾಜ್ ಎಂಬುವರನ್ನು ಬಂಧಿಸಿದ ಹಲಸೂರು ಗೇಟ್ ಸಂಚಾರ ಪೊಲೀಸರು, ನಂತರ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾತ್ರ ಸೈರನ್ ಬಳಸಬೇಕು ಎಂದು ಮೋಟಾರು ವಾಹನ ಕಾಯ್ದೆ ಹೇಳುತ್ತದೆ. ಆದರೆ, ದೇವರಾಜ್  ಶವ ಸಾಗಿಸುವಾಗ ಸೈರನ್ ಹಾಕಿಕೊಂಡು ವೇಗವಾಗಿ ವಾಹನ ಚಲಾಯಿಸಿದ್ದಾರೆ. ಹೀಗಾಗಿ, ಅಜಾಗರೂಕ ಚಾಲನೆಯಿಂದ ಸಾರ್ವಜನಿಕರ ಜೀವಕ್ಕೆ ಕುತ್ತು ತಂದ (ಐಪಿಸಿ 279) ಆರೋಪದಡಿ ಬಂಧಿಸಲಾಗಿತ್ತು. ಕೆಎ05-ಎಸಿ6633 ಸಂಖ್ಯೆಯ ವಾಹನದಲ್ಲಿ ಶವವನ್ನು ಸಾಗಿಸುಲಾಗುತ್ತಿತ್ತು. 
ಆ್ಯಂುಬುಲೆನ್ಸ್‌ಗಳು ಇರುವುದು ರೋಗಿಗಳ ಜೀವ ರಕ್ಷಣೆಗಾಗಿ. ಆದರೆ, ಕೆಲ ಚಾಲಕರು ತಮ್ಮ ವೈಯಕ್ತಿಕ ಕೆಲಸಗಳಿಗೂ ಅವುಗಳನ್ನು ಬಳಸುತ್ತಿದ್ದಾರೆ. ಅದೂ ಸೈರನ್ ಹಾಕಿಕೊಂಡು ಹೋಗುತ್ತಿದ್ದಾರೆ. ಒಳಗೆ ರೋಗಿ ಇರಬಹುದೆಂದು ನಾವೂ ತಪಾಸಣೆ ಮಾಡುವ ಗೋಜಿಗೆ ಹೋಗುವುದಿಲ್ಲ. ಈ ಪರಿಸ್ಥಿತಿಯ ದುರ್ಲಾಭ ಮಾಡಿಕೊಳ್ಳದೆ, ಚಾಲಕರೇ ಆಂಬುಲೆನ್ಸ್‌ನ ಮಹತ್ವ ಅರಿಯಬೇಕು ಸಂಚಾರಿ ಪೊಲೀಸ್ ವಿಭಾಗದ ಡಿಸಿಪಿ ಆರ್ ಹಿತೇಂದ್ರ ತಿಳಿಸಿದ್ದಾರೆ.
ಇನ್ನೂ ಚಾಲಕರಿಗೆ ಸೈರನ್ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಅರಿವು ಮೂಡಿಸಬೇಕು, ಅನಾವಶ್ಯಕವಾಗಿ ಸೈರನ್ ಬಳಸದಂತೆ ತಿಳಿ ಹೇಳಬೇಕು ಎಂದು ಅವರು ವಿವರಿಸಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com