ಬೆಂಗಳೂರು ರೈಲ್ವೆ ನಿಲ್ದಾಣ ದೇಶದಲ್ಲೇ 10ನೇ ಸ್ವಚ್ಚ ನಿಲ್ದಾಣ

ದೇಶದ 407 ರೈಲ್ವೆ ನಿಲ್ದಾಣಗಳಲ್ಲಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣ 10ನೇ ಸ್ವಚ್ಛ ರೈಲು ನಿಲ್ದಾಣ ಎಂಬ ಸ್ಥಾನ ...
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ
ಬೆಂಗಳೂರು: ದೇಶದ 407 ರೈಲ್ವೆ ನಿಲ್ದಾಣಗಳಲ್ಲಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣ 10ನೇ ಸ್ವಚ್ಛ ರೈಲು ನಿಲ್ದಾಣ ಎಂಬ ಸ್ಥಾನ ಪಡೆದಿದೆ.
ರೈಲ್ವೆ ಸಚಿವ ಸುರೇಶ್ ಪ್ರಭು  ನವದೆಹಲಿಯಲ್ಲಿ ಬುಧವಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಬೆಂಗಳೂರು ರೈಲ್ವೆ ನಿಲ್ದಾಣ ಸ್ವಚ್ಛ ನಿಲ್ದಾಣ ಎಂಬ ಕೀರ್ತಿಗೆ ಪಾತ್ರವಾಗಿದೆ.
ನೈರುತ್ಯ ರೈಲ್ವೆ ವಲಯದ 16 ವಲಯಗಳಲ್ಲಿ ಹುಬ್ಬಳ್ಳಿ, ಮೈಸೂರು, ಬೆಂಗಳೂರು ವಿಭಾಗಗಳ 16 ವಲಯಗಳಲ್ಲಿ  6ನೇ ರ್ಯಾಂಕ್ ಪಡೆದಿದೆ.
ಹಲವು ವರ್ಗಗಳಲ್ಲಿ 10 ಸ್ಥಾನಗಳನ್ನು ಪಡೆದಿರುವ ರೈಲ್ವೆ ನಿಲ್ದಾಣಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ 75 ಎ1 ಸ್ಟೇಷನ್ ಗಳನ್ನು ಪಟ್ಟಿ ಮಾಡಿದೆ. 
ವಾರ್ಷಿಕವಾಗಿ 60 ಕೋಟಿ ರು. ಹಣ ಸಂಪಾದಿಸುವ ರೈಲ್ವೆ ನಿಲ್ದಾಣಗಳು ಎ1  ವರ್ಗಕ್ಕೆ ಸೇರುತ್ತವೆ. 8 ರಿಂದ 60 ಕೋಟಿ ರು. ವಾರ್ಷಿಕ ಹಣ ಸಂಪಾದಿಸುವ ರೈಲ್ವೆ ನಿಲ್ದಾಣಗಳು ಎ ಕ್ಯಾಟಗರಿಗೆ ಸೇರುತ್ತವೆ. ಕಳೆದ ವರ್ಷ ನಡೆ ಸಮೀಕ್ಷೆಯಲ್ಲಿ ಬೆಂಗಳೂರು 14 ನೇ ಸ್ಥಾನ ಪಡೆದಿತ್ತು.
ದೇಶಾದ್ಯಂತ ಅತಿ ಹೆಚ್ಚು ಕಾರ್ಯನಿರ್ವಹಿಸುವ 75 ರೈಲು ನಿಲ್ದಾಣಗಳ ಪೈಕಿ ವಿಶಾಖಪಟ್ಟಣ ರೈಲ್ವೆ ನಿಲ್ದಾಣ ಅತ್ಯಂತ ಸ್ವಚ್ಛ ರೈಲು ನಿಲ್ದಾಣವಾಗಿದ್ದು, ಸಿಕಂದರಾಬಾದ್ ರೈಲ್ವೆ ನಿಲ್ದಾಣ 2 ನೇ ಸ್ಥಾನ, ಜಮ್ಮು-ಕಾಶ್ಮೀರ ರೈಲು ನಿಲ್ದಾಣ 3 ನೇ ಸ್ಥಾನ ಪಡೆದಿದೆ. ಸ್ವಚ್ಛ ರೈಲು ಅಭಿಯಾನದ ಅಡಿಯಲ್ಲಿ ರೈಲ್ವೆ ಇಲಾಖೆ ದೇಶದ ಸ್ವಚ್ಛ ರೈಲು ನಿಲ್ದಾಣಗಳ ಸಮೀಕ್ಷೆ ನಡೆಸಲಾಗಿದ್ದು ರಾಷ್ಟ್ರರಾಜಧಾನಿ ನವದೆಹಲಿ ರೈಲು ನಿಲ್ದಾಣ 39 ನೇ ಶ್ರೇಣಿಯಲ್ಲಿದೆ.  ಆಂಧ್ರಪ್ರದೇಶದ ವಿಶಾಖಪಟ್ಟಣ ರೈಲು ನಿಲ್ದಾಣ ದೇಶದಲ್ಲೇ ಅತ್ಯಂತ ಸ್ವಚ್ಛ ರೈಲು ನಿಲ್ದಾಣವಾಗಿದ್ದರೆ, ಬಿಹಾರದ ದರ್ಭಂಗ ಅತ್ಯಂತ ಕೊಳಕು ರೈಲು ನಿಲ್ದಾಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com