ಸಿಇಟಿ ಫಲಿತಾಂಶವನ್ನು ಮೇ 27ಕ್ಕೆ ಪ್ರಕಟಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಹಿಂದೆ ಪ್ರಕಟಿಸಿತ್ತು. ಇದೀಗ ಮೇ 30ಕ್ಕೆ ನಿಗದಿಯಾಗಿದೆ. ಸಿಬಿಎಸ್ ಇ ಮತ್ತು ಐಸಿಎಸ್ಇ ಫಲಿತಾಂಶಕ್ಕೆ ಮುನ್ನ ಸಿಇಟಿ ಫಲಿತಾಂಶ ಪ್ರಕಟಗೊಂಡರೆ ಇದರಿಂದ ವಿದ್ಯಾರ್ಥಿಗಳಿಗೆ ಅನನುಕೂಲವಾಗುವುದಲ್ಲದೆ ನಮ್ಮ ಕೆಲಸ ಕೂಡ ಜಾಸ್ತಿಯಾಗುತ್ತದೆ. ಇದನ್ನು ಪರಿಗಣಿಸಿ ಮೂರು ದಿನಗಳ ಕಾಲ ಕಾಯಲು ನಿರ್ಧರಿಸಿದ್ದೇವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.