ಪ್ರೀತಿಸಿದ ಯುವತಿಯ ವರಿಸಲು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಯುವಕ!

ಹಿಂದೂ ಯುವತಿಯನ್ನು ಪ್ರೀತಿಸಿದ್ದ ಮುಸ್ಲಿಂ ಯುವಕನೋರ್ವ ಆಕೆಯನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಅಪರೂಪದ ಪ್ರಕರಣ ಯಲ್ಲಾಪುರದಲ್ಲಿ ನಡೆದಿದೆ.
ನೂತನ ವಧು-ವರರು (ಚಿತ್ರ ಕೃಪೆ: ಸುವರ್ಣ ನ್ಯೂಸ್)
ನೂತನ ವಧು-ವರರು (ಚಿತ್ರ ಕೃಪೆ: ಸುವರ್ಣ ನ್ಯೂಸ್)
Updated on

ಯಲ್ಲಾಪುರ: ಹಿಂದೂ ಯುವತಿಯನ್ನು ಪ್ರೀತಿಸಿದ್ದ ಮುಸ್ಲಿಂ ಯುವಕನೋರ್ವ ಆಕೆಯನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಅಪರೂಪದ ಪ್ರಕರಣ ಯಲ್ಲಾಪುರದಲ್ಲಿ ನಡೆದಿದೆ.

ಮಾಧ್ಯಮವೊಂದು ವರದಿ ಮಾಡಿರುವಂತೆ ಯಲ್ಲಾಪುರ ಪಟ್ಟಣದ ನೂತನ್ ನಗರದ ನಿವಾಸಿ ಹಸನ್ ರಹಿಂ ಖಾನ್ ಎಂಬ ಯುವಕ ಕಾಳಮ್ಮನಗರದ ಯಶೋದಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಇವರಿಬ್ಬರು ನಾಲ್ಕು  ವರ್ಷಗಳಿಂದ ಪ್ರೀತಿಸುತ್ತಿದ್ದು, ಪ್ರೀತಿಸಿದ ಯುವತಿಯನ್ನು ಕೈ ಹಿಡಿಯಲೇಬೇಕು ಎಂದು ನಿರ್ಧರಿಸಿದ ಯುವಕ ಪೋಷಕರ ವಿರೋಧದ ನಡುವೆಯೇ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಸಾರ್ವಜನಿಕರ ಸಮುಖದಲ್ಲಿ  ವಿವಾಹವಾಗಿದ್ದಾನೆ.

ಅಲ್ಲದೆ ತನ್ನ ಹೆಸರನ್ನೂ ಕೂಡ ಆರ್ಯ ಎಂದು ಬದಲಾಯಿಸಿಕೊಂಡಿದ್ದು, ಹಿಂದೂ ಧಾರ್ಮಿಕ ಪದ್ಧತಿಯಂತೆ ಹಿಂದೂ ಸಂಘಟನೆ ಮುಖಂಡರ ಸಮ್ಮುಖದಲ್ಲಿ ಇಲ್ಲಿನ ಈಶ್ವರ ದೇವಸ್ಥಾನದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಇಬ್ಬರೂ  ಸಪ್ತಪದಿ ತುಳಿದಿದ್ದಾರೆ.  ವಿಶೇಷವೆಂದರೆ ಈ ಅಪರೂಪದ ವಿವಾಹಕ್ಕೆ ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಸಾಕ್ಷಿಯಾಗಿದ್ದು, ಮದುವೆಗೆ ಆಗಮಿಸಿ ನೂತನ ವಧು-ವರರನ್ನು ಆಶೀರ್ವದಿಸಿದರು. ಬಳಿಕ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿವಾಹ ‘ಲವ್ ಜಿಹಾದ್’ಗೆ ತಕ್ಕ ಉತ್ತರ. ಇಲ್ಲಿನ ಮುಸ್ಲಿಮರ ಪೂರ್ವಜರು ಹಿಂದೂಗಳೇ ಆಗಿದ್ದು, ಒತ್ತಾಯ ಪೂರ್ವಕವಾಗಿ ಮತಾಂತರವಾಗಿದ್ದಾರೆ. ಪುನಃ ಅವರನ್ನು ಹಿಂದೂ  ಧರ್ಮಕ್ಕೆ ಕರೆತರಬೇಕೆಂಬುದು ನಮ್ಮ ಆಶಯ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com