ಬೆಂಗಳೂರು: ಮಗನ ಸಾವಿನಿಂದ ಖಿನ್ನತೆಗೊಳಗಾಗಿದ್ದ ತಂದೆ ಆತ್ಮಹತ್ಯೆ

ಮಗನ ಸಾವಿನಿಂದ ನೊಂದು ಖಿನ್ನತೆಗೊಳಗಾಗಿದ್ದ ತಂದೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ಮಗನ ಸಾವಿನಿಂದ ನೊಂದು ಖಿನ್ನತೆಗೊಳಗಾಗಿದ್ದ ತಂದೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೆಎಸ್ ಆರ್ ಟಿಸಿ ಲೇಔಟ್ ನ ಮಾರುತಿ ನಗರದಲ್ಲಿ ಫ್ಯಾನ್ಸಿ ಸ್ಟೋರ್ ನಡೆಸುತ್ತಿದ್ದ ಮಂಜುನಾಥ್(45) ಸೋಮವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ದಾವಣಗೆರೆಯಲ್ಲಿ ಪಿಯಸಿ ಓದುತ್ತಿದ್ದ ಮಂಜುನಾಥ್ ಪುತ್ರ ಶಶಿ ಎರಡು ತಿಂಗಳ ಹಿಂದೆ ಸಾವನ್ನಪ್ಪಿದ್ದ.ಸೋಮವಾರ ರಾತ್ರಿ ಮನೆಯಿಂದ ತೆರಳಿದ ಮಂಜುನಾಥ್ 1 ಗಂಟೆಯಲ್ಲಿ ವಾಪಸ್ ಬರುವುದಾಗಿ ಪತ್ನಿ ಚಂದ್ರಕಲಾಗೆ ಹೇಳಿ ಹೋಗಿದ್ದಾರೆ.
ಮಂಗಳವಾರ ರಾತ್ರಿಯಾದರೂ ಮಂಜುನಾಥ್ ವಾಪಸ್ ಬಾರದಿದ್ದಾಗ ಚಂದ್ರಕಲಾ ಪೊಲೀಸರನ್ನು ಸಂಪರ್ಕಿಸಿದ್ದಾರೆ, ಈ ವೇಳೆ ಪೊಲೀಸರು ಆಕೆಯ ಬಳಿ ಮಂಜುನಾಥ್ ಫೋಟೋ ಕೇಳಿದ್ದಾರೆ.
ಬುಧವಾರ ಬೆಳಗ್ಗೆ 9.30ರ ವೇಳೆಗೆ ಆಕೆ ಫ್ಯಾನ್ಸಿ ಸ್ಟೋರ್ ನಲ್ಲಿ ಫೋಟೋ ತೆಗೆದುಕೊಳ್ಳಲು ಹೋಗಿದ್ದಾರೆ. ಅಂಗಡಿಯ ಶಟರ್ ಒಳಗಿನಿಂದ ಲಾಕ್ ಆಗಿತ್ತು. ಜೊತೆಗೆ ಒಳಗಿನಿಂದ ವಾಸನೆ ಬರುತ್ತಿತ್ತು.
ಈ ವೇಳೆ ಸ್ಥಳಕ್ಕಾಗಮಿಸಿದ ನೆರೆಹೊರೆಯವರು, ಶಟರ್ ಒಪನ್ ಮಾಡಿದಾಗ ಮಂಜುನಾಥ್ ದೇಹ ಪತ್ತೆಯಾಗಿದೆ. ಈ ವೇಳೆ ಮಗನ ಸಾವಿನಿಂದಾಗಿ ತನ್ನ ಪತಿ ಖಿನ್ನತೆಗೊಳಗಾಗಿದ್ದರು ಎಂದು ಚಂದ್ರಕಲಾ ಪೊಲೀಸರಿಗೆ ತಿಳಿಸಿದ್ದಾರೆ. ಬೈದರಹಳ್ಳಿ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com