ಟಿಪ್ಪು ಜಯಂತಿ ಪ್ರಶ್ನಿಸಿ ಪಿಐಎಲ್: ವಿಚಾರಣೆ ಮುಂದೂಡಿದ ನ್ಯಾಯಾಲಯ

ಸರ್ಕಾರದ ವತಿಯಿಂದ ನ.10 ರಂದು ರಾಜ್ಯದ್ಯಂತ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡುವ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅ.24 ರಂದು ಹೊರಡಿಸಿರುವ ಸುತ್ತೋಲೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಅರ್ಜಿ ವಿಚಾರಣೆಯನ್ನು ಹೈಕೋರ್ಟ್...
ಹೈ ಕೋರ್ಟ್ (ಸಂಗ್ರಹ ಚಿತ್ರ)
ಹೈ ಕೋರ್ಟ್ (ಸಂಗ್ರಹ ಚಿತ್ರ)
ಬೆಂಗಳೂರು: ಸರ್ಕಾರದ ವತಿಯಿಂದ ನ.10 ರಂದು ರಾಜ್ಯದ್ಯಂತ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡುವ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅ.24 ರಂದು ಹೊರಡಿಸಿರುವ ಸುತ್ತೋಲೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನ.7ಕ್ಕೆ ಮುಂದೂಡಿದೆ. 
ಕೊಡಗು ಮೂಲದ ಕೆ.ಪಿ. ಮಂಜುನಾಥ್ ಎಂಬುವವರು ಸಲ್ಲಿಸಿದ್ದ ಅರ್ಜಿ ನಿನ್ನೆ ಹಂಗಾಮಿ ಸಿಜೆ ಹೆಚ್.ಜಿ. ರಮೇಶ್ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ಬಂದಿತು. ಈ ವೇಳೆ ಎರಡೂ ಕಡೆ ವಾದ ಹಾಗೂ ಪ್ರತಿವಾಗಳನ್ನು ಆಲಿಸಿದ ನ್ಯಾಯಪೀಠ ಮಧ್ಯಂತರ ಆದೇಶ ನೀಡದೆ ವಿಚಾರಣೆಯನ್ನು ಮುಂದೂಡಿತು. 
ವಿಚಾರಣೆ ವೇಳೆ ಪೀಠವು, ರಾಜ್ಯ ಸರ್ಕಾರದ ಉದ್ದೇಶಿತ ಟಿಪ್ಪು ಜಯಂತಿ ಆಚರಣೆ ಕಾರ್ಯಕ್ರಮ ತಡೆಹಿಡಿಯಲು ಯಾನ ಕಾನೂನಿನಲ್ಲಿ ಅವಕಾಶವಿದೆಯೇ? ಸಾರ್ವಜನಿಕರ ಹಣವನ್ನು ಜಯಂತಿ ಕಾರ್ಯಗಳಿಗೆ ವ್ಯಯಿಸಲು ಕಾನೂನಿನಲ್ಲಿರುವ ಅವಕಾಶಗಳೇನು? ಎಂಬುದನ್ನು ವಿವರಿಸುವತೆ ರಾಜ್ಯ ಅಡ್ವೋಕೇಟ್ ಜನರಲ್ ಅವರಿಗೆ ನಿರ್ದೇಶಿಸಿದೆ. 
ಅಲ್ಲದೆ, ಜಯಂತಿ ಆಚರಣೆ ನಿರ್ಬಂಧಿಸಲು ಸುಪ್ರೀಂಕೋರ್ಟ್ ಅಥವಾ ಯಾವುದಾದರೂ ಹೈಕೋರ್ಟ್ ಆದೇಶ ಹೊರಡಿಸಿದೆಯೇ? ಪೂರ್ವ ನಿದರ್ಶನವಿಲ್ಲದಿದ್ದರೆ ಜಯಂತಿಗಳ ಆಚರಣೆಯನ್ನು ನ್ಯಾಯಾಂಗ ವಿಮರ್ಶೆಗೆ ಒಳಪಡಿಸಲಾಗದು ಎಂದು ಅಭಿಪ್ರಾಯಪಟ್ಟಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com