ಇಂದಿರಾ ಕ್ಯಾಂಟೀನ್ ಗೆ ಸಮಸ್ಯೆಯಾಗಿರುವ ಆಹಾರದ ಪ್ರಮಾಣ, ಶುಚಿ ಮತ್ತು ರುಚಿ

ಭಾರೀ ಪ್ರಚಾರ ಮತ್ತು ಭರವಸೆಗಳ ಮೂಲಕ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜಾರಿಗೆ ತಂದ ...
ಇಂದಿರಾ ಕ್ಯಾಂಟೀನ್
ಇಂದಿರಾ ಕ್ಯಾಂಟೀನ್
ಬೆಂಗಳೂರು: ಭಾರೀ ಪ್ರಚಾರ ಮತ್ತು ಭರವಸೆಗಳ ಮೂಲಕ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜಾರಿಗೆ ತಂದ ಇಂದಿರಾ ಕ್ಯಾಂಟೀನ್ ಆರಂಭಗೊಂಡು ಎರಡೂವರೆ ತಿಂಗಳುಗಳು ಕಳೆದರೂ ಕೂಡ ಸಮಸ್ಯೆಗಳು ಮಾತ್ರ ಇನ್ನೂ ಕಡಿಮೆಯಾಗಿಲ್ಲ.
ನಾಗರಿಕರಿಂದ ಹಲವು ದೂರುಗಳು ಬರುತ್ತಲೇ ಇದೆ. ಕ್ಯಾಂಟೀನ್ ನಲ್ಲಿ ಆಹಾರದ ಕೊರತೆ ಮತ್ತು ಅಸಮರ್ಪಕ ಪೂರೈಕೆ ಮುಂದುವರಿದಿದೆ. ಪ್ರತಿದಿನ ಕಡಿಮೆ ಬೆಲೆಯ ಆಹಾರಕ್ಕೆ ಸರದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿಯಿದ್ದು, ಅಷ್ಟು ಹೊತ್ತು ನಿಂತರೂ ಕೂಡ ಹೊಟ್ಟೆ ತುಂಬುವಷ್ಟು ಊಟ-ತಿಂಡಿ ಸಿಗುವುದಿಲ್ಲ ಎಂದು ಬೈದುಕೊಂಡು ಜನರು ವಾಪಸಾಗುತ್ತಾರೆ.
ಬೆಂಗಳೂರು ನಗರದಲ್ಲಿರುವ 134 ಇಂದಿರಾ ಕ್ಯಾಂಟೀನ್ ಗಳಲ್ಲಿ ಊಟ, ತಿಂಡಿ ಪೂರೈಸಲು 12 ಅಡುಗೆಮನೆಗಳಿವೆ. ಉಳಿತ 64 ಅಡುಗೆ ಮನೆಗಳು ಈ ತಿಂಗಳು ಆರಂಭವಾಗುವ ನಿರೀಕ್ಷೆಯಿದೆ. 27 ಅಡುಗೆ ಮನೆ ಮತ್ತು 198 ಕ್ಯಾಂಟೀನ್ ಗಳನ್ನು ಹೊಂದುವುದು ಮಹಾನಗರ ಪಾಲಿಕೆಯ ಗುರಿಯಾಗಿದೆ. ತಿಂಡಿ ಪ್ರತಿದಿನ ಬದಲಾಗುತ್ತದೆ. ಆದರೆ ಬೆಲೆ ಮಾತ್ರ ಒಂದೆಯಾಗಿದೆ. ಉಪಾಹಾರಕ್ಕೆ 5 ರೂಪಾಯಿ ಮತ್ತು ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ 10 ರೂಪಾಯಿಯಾಗಿದೆ. ಒಂದು ಪ್ಲೇಟು ಇಡ್ಲಿ, ರವ ಕಿಚಿಡಿ ಮತ್ತು ಪುಳಿಯೋಗರೆ, ಖಾರಾಬಾತ್ ಗೆ ಬೆಳಗಿನ ಹೊತ್ತು ಉದ್ದ ಸಾಲಿನಲ್ಲಿ ನಿಲ್ಲಬೇಕು. ಇನ್ನು ಮಧ್ಯಾಹ್ನ ಪುಲಾವ್, ಅನ್ನ-ಸಾಂಬಾರಕ್ ಅಥವಾ ಬಿಸಿ ಬೇಳೆ ಬಾತ್ , ಮೊಸರನ್ನಕ್ಕೆ ಸಹ ಉದ್ದದ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ.
ಕೇಂದ್ರ ಅಡುಗೆ ಮನೆಯಿಂದ ಇಂದಿರಾ ಕ್ಯಾಂಟೀನ್ ಗೆ ಆಹಾರ ಬಂದು ಒಂದು ಗಂಟೆಯೊಳಗೆ ಹೆಚ್ಚಿನ ಕ್ಯಾಂಟೀನ್ ಗಳಲ್ಲಿ ಖಾಲಿಯಾಗುತ್ತದೆ. ಕೆಲವು ಕ್ಯಾಂಟೀನ್ ಗಳ ಸುತ್ತಮುತ್ತ ಶುಚಿಯಾಗಿದ್ದರೆ, ಕೆಲವು ಅಶುಚಿಯಾಗಿರುತ್ತದೆ. ಕ್ಯಾಂಟೀನ್ ಗೆ ಬರುವವರಲ್ಲಿ ಹೆಚ್ಚಿನವರು ಕೂಲಿ ಕಾರ್ಮಿಕರು ಮತ್ತು ನಿರ್ಮಾಣ ಕಾಮಗಾರಿಯಲ್ಲಿ ತೊಡಗಿರುವವರು. ಆಹಾರದ ಕೊರತೆ, ಗುಣಮಟ್ಟ ಅಷ್ಟು ಉತ್ತಮವಾಗಿಲ್ಲ ಮತ್ತು ಕಡಿಮೆ ಪೂರೈಕೆ ಮಾಡುತ್ತಾರೆ ಎಂದು ಬಹಳ ಮಂದಿ ದೂರುತ್ತಾರೆ.
10 ರೂಪಾಯಿಗೆ ಊಟ ಸಿಗುವುದರಿಂದ ಬಡವರಿಗೆ ಖಂಡಿತಾ ಅನುಕೂಲವಾಗುತ್ತದೆ. ಆದರೆ ಊಟ ಅಷ್ಟು ರುಚಿಯಾಗಿರುವುಗದಿಲ್ಲ ಎನ್ನುತ್ತಾರೆ ಹೆಚ್ಚಿನ ಸಂದರ್ಭಗಳಲ್ಲಿ ಇಂದಿರಾ ಕ್ಯಾಂಟೀನ್ ನಲ್ಲಿ ತಿನ್ನುವ ಸುರೇಶ್. 
ಇಂದಿರಾ ಕ್ಯಾಂಟೀನ್ ನಲ್ಲಿ ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ 300 ಗ್ರಾಂ ಅನ್ನ, 150 ಗ್ರಾಂ ಸಾಂಬಾರು ಮತ್ತು 100 ಗ್ರಾಂ ಮೊಸರನ್ನ ನೀಡಬೇಕು. ಆದರೆ ಎಲ್ಲಾ ಕ್ಯಾಂಟೀನ್ ನಲ್ಲಿ ಇಷ್ಟೆ ನೀಡುವುದಿಲ್ಲ. ಕೆಲವೊಮ್ಮೆ ಕಡಿಮೆ ಕೊಡುತ್ತಾರೆ ಎನ್ನುತ್ತಾರೆ ನಾಗರಿಕರು.
ಪುಲಕೇಶಿನಗರದ ಮೂರೆ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಚೆನ್ನಾಗಿ ಆಹಾರ ನೀಡುತ್ತಾರೆ. ಸ್ಥಳ ಕೂಡ ಸ್ವಚ್ಛವಾಗಿದೆ ಎಂದು ಜನರು ಹೇಳಿದರೆ ಇತ್ತ ರಾಜಾಜಿನಗರದ ಒರಿಯಾನ್ ಮಾಲ್ ಹತ್ತಿರವಿರುವ ಕ್ಯಾಂಟೀನ್ ನಲ್ಲಿ ಜನರು ಸಮಸ್ಯೆಗಳನ್ನು ಹೇಳುತ್ತಾರೆ. ಆರಂಭದಲ್ಲಿ ಇಲ್ಲಿ ದಿನನಿತ್ಯ 200ರಿಂದ 300 ಜನ ಬಂದು ಊಟ ತಿಂದುಕೊಂಡು ಹೋಗುತ್ತಿದ್ದರೆ. ಆದರೆ ಈಗ ಬೆರಳೆಣಿಕೆಯಷ್ಟು ಜನ ಮಾತ್ರ ಬರುತ್ತಾರೆ ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com