ಜಾನಪದ ಲೋಕದ ಮ್ಯಾನೇಜಿಂಗ್ ಟ್ರಸ್ಟಿ ಇಂದಿರಾ ಬಾಲಕೃಷ್ಣ ಇನ್ನಿಲ್ಲ

ರಾಮನಗರದ ಜಾನಪದ ಲೋಕ ಮ್ಯಾನೇಜಿಂಗ್ ಟ್ರಸ್ಟಿ, ಸಾಂಪ್ರದಾಯಿಕ ಚಿತ್ರ ಕಲಾವಿದೆ ಇಂದಿರಾ ಬಾಲಕೃಷ್ಣ ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು.
ಜಾನಪದ ಲೋಕ
ಜಾನಪದ ಲೋಕ
Updated on: 
ರಾಮನಗರ: ರಾಮನಗರದ ಜಾನಪದ ಲೋಕ ಮ್ಯಾನೇಜಿಂಗ್ ಟ್ರಸ್ಟಿ, ಸಾಂಪ್ರದಾಯಿಕ ಚಿತ್ರ ಕಲಾವಿದೆ ಇಂದಿರಾ ಬಾಲಕೃಷ್ಣ ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು. 65 ವರ್ಷದ ಇಂದಿರಾ ಕೋರಮಂಗಲದ ಮಗಳ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೃತರು ಪತಿ, ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ.
ನಾಡೋಜ ಎಚ್.ಎಲ್ ನಾಗೇಗೌಡರ ಪುತ್ರಿಯಾಗಿದ್ದ ಇಂದಿರಾ ಕಳೆದ 15 ವರ್ಷಗಳಿಂದ ಜಾನಪದ ಲೋಕದ ಮ್ಯಾನೇಜಿಂಗ್ ಟ್ರಸ್ಟಿ ಆಗಿ ಕೆಲಸ ನಿರ್ವಹಿಸುತ್ತಿದ್ದರು. 
ಇಂದು ಬೆಳಗ್ಗೆ ಬನಶಂಕರಿ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ವಿಧಿ ವಿಧಾನಗಳು ನಡೆಯಲಿದ್ದು ಇಂದಿರಾ ಅವರ ಗೌರವಾರ್ಥ ಇಂದು ಜಾನಪದ ಲೋಕಕ್ಕೆ ರಜೆ ಘೋಷಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com