ಬೆಂಗಳೂರು: 13 ಮಂದಿ ಜೀತ ಕಾರ್ಮಿಕರನ್ನು ರಕ್ಷಿಸಿದ ಮಹದೇವಪುರ ಪೊಲೀಸರು

ಹದಿಮೂರು ಮಂದಿ ಜೀತದಾಳುಗಳನ್ನು ಹಸುವಿನ ಕೊಟ್ಟಿಗೆಯಿಂದ ಸಂಘಟನೆಯೊಂದರ ಸಿಬ್ಬಂದಿಗಳು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಹದಿಮೂರು ಮಂದಿ ಜೀತದಾಳುಗಳನ್ನು ಹಸುವಿನ ಕೊಟ್ಟಿಗೆಯಿಂದ ಸಂಘಟನೆಯೊಂದರ ಸಿಬ್ಬಂದಿಗಳು ಮತ್ತು ಮಹದೇವಪುರ ಠಾಣೆ ಪೊಲೀಸರು ರಕ್ಷಿಸಿದ ಘಟನೆ ಎರಡು ದಿನಗಳ ಹಿಂದೆ ನಡೆದಿದೆ.
ಬೆಂಗಳೂರು ನಗರ ಜಿಲ್ಲಾಡಳಿತ ಮತ್ತು ಸ್ಥಳೀಯ ಪೊಲೀಸರು 13 ಮಂದಿಯನ್ನು ರಕ್ಷಿಸಿವೆ. ಎಂಟು ಮಂದಿ ಜೀತ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅವರಲ್ಲಿ ಇಬ್ಬರು 13ರಿಂದ 17 ವರ್ಷದೊಳಗಿನ ಬಾಲ ಕಾರ್ಮಿಕರಾಗಿದ್ದಾರೆ.
ಜೀತ ಕಾರ್ಮಿಕರಾಗಿ ದುಡಿಯುತ್ತಿದ್ದ ಐವರ ಮಕ್ಕಳು ಒಂದರಿಂದ 12 ವರ್ಷದೊಳಗಿನವರಾದಿದ್ದು ಅವರನ್ನು ಕೆಲಸಕ್ಕೆ ಒಡ್ಡದಿದ್ದರೂ ಕೊಟ್ಟಿಗೆಯಲ್ಲಿ ಕೂಡಿ ಹಾಕಲಾಗಿತ್ತು. ಕಳೆದ ಒಂದು ವರ್ಷದಿಂದ ಮೂರು ಕುಟುಂಬಗಳ 13 ಮಂದಿ ಇಲ್ಲಿ ಜೀತದಾಳುಗಳಾಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.
ಕಳೆದ ಶುಕ್ರವಾರ ಮಹದೇವಪುರ ಪೊಲೀಸರು ಕೊಟ್ಟಿಗೆ ಮಾಲಿಕ ಕಿಶನ್ ಲಾಲ್ ಕೊಠಾರಿ ಅವರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com