ಉಡುಪಿ ಜಿಲ್ಲೆಯ ಕಾರ್ಕಳದ ಗ್ರಾಮವೊಂದರಲ್ಲಿ ಕಂಡುಬಂದ ಬಂಡೆಕಲ್ಲಿನ ಗುಹೆ

ಬೃಹತ್ ಶಿಲೆಯ ಬಂಡೆಕಲ್ಲಿನ ಗುಹೆ ಉಡುಪಿ ಜಿಲ್ಲೆಯ ಸೂಡ ದ ಹತ್ತಿರ ಸುಬ್ರಹ್ಮಣ್ಯ ....
ಬೃಹತ್ ಶಿಲೆಯ ಬಂಡೆಕಲ್ಲಿನ ಗುಹೆ
ಬೃಹತ್ ಶಿಲೆಯ ಬಂಡೆಕಲ್ಲಿನ ಗುಹೆ
Updated on: 
ಉಡುಪಿ: ಬೃಹತ್ ಶಿಲೆಯ ಬಂಡೆಕಲ್ಲಿನ ಗುಹೆ ಉಡುಪಿ ಜಿಲ್ಲೆಯ ಸೂಡ ದ ಹತ್ತಿರ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಂಡುಬಂದಿದೆ. ಉದು ಕಾರ್ಕಳ ತಾಲ್ಲೂಕಿನಲ್ಲಿದೆ ಎಂದು ಶಿರ್ವದ ಎಂಎಸ್ ಆರ್ ಎಸ್ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು, ಗೋಲಾಕಾರದ ಗುಹೆಯು ಮಣ್ಣಿನಲ್ಲಿ 2 ಅಡಿ ವ್ಯಾಸ ಮತ್ತು 1 ಮೀಟರ್ ತೆರೆಯುವಿಕೆಯ ಆಕಾರದಲ್ಲಿದೆ. ಇದು ಗ್ರಾನೈಟ್ ಚಪ್ಪಡಿಯಿಂದ ಮುಚ್ಚಲ್ಪಟ್ಟಿದೆ ಮತ್ತು ಕೊಳೆತ ಮಣ್ಣಿನಿಂದ ತುಂಬಿದ ಕಾರಣದಿಂದಾಗಿ ಪುರಾತನ ಶಾಸ್ತ್ರದ ಕಲಾಕೃತಿಗಳನ್ನು ಗುಹೆಯಿಂದ ಸಂಗ್ರಹಿಸಲಾಗಿಲ್ಲ. ಮೂರು ವರ್ಷಗಳ ಹಿಂದೆ ಸಂತೂರ್ ನಲ್ಲಿ ಈ ಮಾದರಿಯ ಗುಹೆ ಕಾಣಿಸಿಕೊಂಡಿತ್ತು. ಸೂಡದ ಹತ್ತಿರ ಪಲ್ಮನೆಯಲ್ಲಿ ಮತ್ತೊಂದು ಬೃಹತ್ ಬಂಡೆಯ ಕಲ್ಲಿನ ಗುಹೆ ಕಾಣಿಸಿಕೊಂಡಿದ್ದು ಅದರೊಳಗೆ ಕೆಂಪು ಕುಂಬಾರಿಕೆಯ ಚೂರುಗಳಿದ್ದವು ಎಂದು ಮುರುಗೇಶಿ ತಿಳಿಸಿದ್ದಾರೆ.
ಸೂಡ ಗುಹೆಯ ಮಹತ್ವ: ಉಡುಪಿ ಜಿಲ್ಲೆಯಲ್ಲಿ ಇಂತಹ ಬೃಹತ್ ಶಿಲೆಯ ಬಂಡೆಕಲ್ಲಿನ ಗುಹೆಗಳು ಕಂಡುಬಂದಿದ್ದು, ಅವು ಕ್ರಿಸ್ತ ಪೂರ್ವ 800ರಿಂದ ಕ್ರಿಸ್ತಶಕ 200ರ ನಡುವಿನ ಅವಧಿಯದ್ದಾಗಿವೆ. ಸೂಡ ಬೃಹತ್ ಶಿಲೆಯ ಬಂಡೆಕಲ್ಲಿನ ಗುಹೆ ಕ್ರಿಸ್ತಪೂರ್ವ 500 ರ ಶತಮಾನಕ್ಕೆ ಸೇರಿದ್ದಾಗಿರಬಹುದು ಎಂದು ನಂಬಲಾಗಿದೆ.
ಸೂಡ ಬೃಹತ್ ಶಿಲೆಯ ಬಂಡೆಕಲ್ಲಿನ ಗುಹೆ ಸುಮಾರು 2,500 ವರ್ಷಗಳಷ್ಟು ಹಳೆಯದ್ದು. ಸಾಮಾನ್ಯವಾಗಿ ದೇವಸ್ಥಾನಗಳ ಹತ್ತಿರ ಬೃಹತ್ ಶಿಲೆಯ ಸಮಾಧಿಗಳು ಕಂಡುಬರುತ್ತವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com