ರಾಮನಗರ: ಕೆರೆಯಲ್ಲಿ ಬಟ್ಟೆ ತೊಳೆಯಲು ತೆರಳಿದ್ದ ಮೂವರು ಬಾಲಕಿಯರು ಹಾಗೂ ಓರ್ವ ಮಹಿಳೆ ನೀರು ಪಾಲಾದ ದಾರುಣ ಘಟನೆ ಶನಿವಾರ ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲೂಕನಿ ವಿರುಪಾಕ್ಷಿಪುರ ಗ್ರಾಮದಲ್ಲಿ ನಡೆದಿದೆ.
ಇಂದು ಬೆಳಗ್ಗೆ ಬಟ್ಟೆ ತೊಳೆಯುತ್ತಿದ್ದ ವೇಳೆ ನಾಲ್ವರೂ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ ಎನ್ನಲಾಗಿದ್ದು, ಮೃತರು ವಿರುಪಾಕ್ಷಿ ಪುರದ ಮಾಲತಿ( 35 ) ಮಗಳಾದ ಪೂರ್ಣಿಮಾ( 15), ಪಕ್ಕದ ಮನೆಯ ಅನುಶ್ರಿ(10) ಹಾಗೂನಮೃತಾ(8) ಎಂದು ಗುರುತಿಸಲಾಗಿದೆ.
ನಾಲ್ವರ ಶವಗಳನ್ನು ಪೊಲೀಸರ ಸಮ್ಮುಖದಲ್ಲಿ ಮೇಲಕ್ಕೆತ್ತಲಾಗಿದ್ದು, ಈ ಸಂಬಂಧ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.