55 ಸಾವಿರ ಜನರಿಂದ ಯೋಗಾಸನ: ಸಾಕಷ್ಟು ತಿರುವುಗಳ ಬಳಿಕ ಕೊನೆಗೂ ಗಿನ್ನಿಸ್ ದಾಖಲೆ ಸೇರಿದ ಮೈಸೂರು

ಸಾಕಷ್ಟು ತಿರುವುಗಳ ಬಳಿಕ ಕೊನೆಗೂ ಯೋಗ ನಗರಿ ಮೈಸೂರು ಬೃಹತ್ ಯೋಗ ಪ್ರದರ್ಶನ ನೀಡುವ ಮೂಲಕ ಗಿನ್ನಿಸ್ ಪುಸ್ಕತಕದಲ್ಲಿ ದಾಖಲೆ ಬರೆದಿದೆ...
55 ಸಾವಿರ ಜನರಿಂದ ಯೋಗಾಸನ
55 ಸಾವಿರ ಜನರಿಂದ ಯೋಗಾಸನ
ಮೈಸೂರು: ಸಾಕಷ್ಟು ತಿರುವುಗಳ ಬಳಿಕ ಕೊನೆಗೂ ಯೋಗ ನಗರಿ ಮೈಸೂರು ಬೃಹತ್ ಯೋಗ ಪ್ರದರ್ಶನ ನೀಡುವ ಮೂಲಕ ಗಿನ್ನಿಸ್ ಪುಸ್ಕತಕದಲ್ಲಿ ದಾಖಲೆ ಬರೆದಿದೆ. 
ಒಂದೆಡೆ ಅತ್ಯಧಿಕ ಯೋಗಪಟುಗಳನ್ನು ಸೇರಿಸಿ ಯೋಗ ಪ್ರದರ್ಶನ ನೀಡಿದ ದಾಖಲೆಗೆ ಸಾಂಸ್ಕೃತಿಕ ನಗರಿ ಮೈಸೂರು ಪಾತ್ರವಾಗಿದೆ. ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಇಲ್ಲಿನ ರೇಸ್ ಕೋರ್ಸ್ ಆವರಣದಲ್ಲಿ ಜೂನ್.21ರಂದು ಜಿಲ್ಲಾಡಳಿತ ಆಯೋಜಿಸಿದ್ದ ಸಾಮೂಹಿಕ ಯೋಗ ಪ್ರದರ್ಶನದಲ್ಲಿ 55,506 ಮಂದಿ ಪಾಲ್ಗೊಂಡಿದ್ದರು.
ವಿಶ್ವದಾದ್ಯಂತ ಕಳೆದ ಜೂನ್.21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು. ವಿಶ್ವವನ್ನೇ ಮೈಸೂರಿನೆಡೆಗೆ ಸೆಳೆಯುವ ನಿಟ್ಟಿನಲ್ಲಿ, ರೇಸ್ ಕೋರ್ಸ್ ಆವರಣದಲ್ಲಿ ಬೃಹತ್ ಯೋಗವನ್ನು ಪ್ರದರ್ಶಿಲಾಯಿತು. ಗಿನ್ನಿಸ್ ದಾಖಲೆ ನಿಯಾಮಾವಳಿಯಂತೆಯೇ ಯೋಗಾಭ್ಯಾಸ ನಡೆಯಿತು. ಈ ಸಂದರ್ಭದಲ್ಲಿ ನೀಡಲಾಗಿದ್ದ ದಾಖಲೆಗಳ ಪ್ರಕಾರ ಮೈಸೂರಿನಲ್ಲಿ ನಡೆದ ಯೋಗ ಪ್ರದರ್ಶದನಲ್ಲಿ 54,101 ಮಂದಿ ಭಾಗವಹಿಸಿದ್ದರು. ಆದರೆ, ಇದೇ ವೇಳೆ ಗುಜರಾತ್ ನಲ್ಲಿ ಬಾಬಾ ರಾಮ್ ದೇವ್ ನೇತೃತ್ವದಲ್ಲಿ ನಡೆದ ಬೃಹತ್ ಯೋಗ ಪ್ರದರ್ಶನದಲ್ಲಿ 54,522 ಮಂದಿಯ ಯೋಗ ಪ್ರದರ್ಶಿಸಿದ್ದರು. ಹಾಗಾಗಿ ಕೆಲವೇ ಅಂತರದಲ್ಲಿ ಮೈಸೂರು ವಿಶ್ವ ದಾಖಲೆಯಿಂದ ದೂರ ಉಳಿಯುವಂತಾಗಿತ್ತು. 
ದಾಖಲೆಗಳನ್ನು ನೀಡುವ ಸಂದರ್ಭಡಲ್ಲಿ ಜಿಲ್ಲಾಡಳಿತ ಸಣ್ಣ ದಾಖಲೆಯೊಂದನ್ನು ನೀಡಲು ಮರೆತಿತ್ತು. ಯೋಗ ಪ್ರದರ್ಶನಕ್ಕೆ ಆಗಮಿಸುವ ಯೋಗಪಟುಗಳನ್ನು ಅಧಿಕೃತವಾಗಿ ಎಣಿಸುವ ಮುನ್ನವೇ, ಸಾವಿರಾರು ಸಂಖ್ಯೆಯ ಯೋಗ ಪಟುಗಳು ರೇಸ್ ಕ್ಲಬ್ ಅಂಗಳವನ್ನು ಪ್ರವೇಶಿಸಿದ್ದರು, ಗಿನ್ನಿಸ್ ದಾಖಲೆಗೆ ಸಲ್ಲಿಸಿದ ಲೆಕ್ಕದಲ್ಲಿ ಇವರ ಹೆಸರು ಇರಲಿಲ್ಲ. ಇದನ್ನು ಖಾತ್ರಿ ಪಡಿಸಿಕೊಂಡ ಅಧಿಕಾರಿಗಳು ಮತ್ತೆ ಸೂಕ್ತ ದಾಖಲೆ ಸಮೇತ ಗಿನ್ನಿಸ್ ಬುಕ್ ಆಫ್ ವರ್ಡ್ ರೆಕಾರ್ಡ್ ಸಂಸ್ಶೆಗೆ ಸಲ್ಲಿಸಿ, ಮತ್ತೊಮ್ಮೆ ಪರಿಶೀಲಿಸಲು ಮನವಿ ಮಾಡಿದರು,
ಈ ದಾಖಲೆಗಳನ್ನು ಪರಿಶೀಲಿಸಿದ ಗಿನ್ನಿಸ್ ಬುಕ್ ಆಫ್ ವರ್ಡ್ ರೆಕಾರ್ಡ್ ಸಂಸ್ಥೆಯು ಕರಾರುವಕ್ಕಾಗಿ 5 ತಿಂಗಳ ನಂತರ ಯೋಗ ನಗರಿ ಮೈಸೂರಿ ಜಿಲ್ಲೆಯೇ ಬೃಹತ್ ಯೋಗದಲ್ಲಿ ವಿಶ್ವ ದಾಖಲೆ ನರ್ಮಿಸಿದೆ ಎಂದು ಘೋಷಣೆ ಮಾಡಿದೆ. 2ನೇ ಹಂತದ ಪರಿಶೀಲನೆ ವೇಳೆ 55,506 ಜನರು ಮೈಸೂರಿನ ಬೃಹತ್ ಯೋಗ ಪ್ರದರ್ಶನದಲ್ಲಿ ಭಾಗಿಯಾಗಿರುವುದಾಗಿ ತಿಳಿಸಿದೆ. 
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿ, ಮೈಸೂರು ಜನತೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com