ಕೆಪಿಎಂಇ ತಿದ್ದುಪಡಿ ಮಸೂದೆಗೆ ವಿಧಾನಸಭೆ ಅಂಗೀಕಾರ

ರಾಜ್ಯದ್ಯಂತ ತೀವ್ರ ವಿವಾದ ಹಾಗೂ ಚರ್ಚೆಗೆ ಗ್ರಾಸವಾಗಿದ್ದ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ (ಕೆಪಿಎಂಇ)-2017ಕ್ಕೆ ಬುಧವಾರ ವಿಧಾನಸಭೆಯಲ್ಲಿ ಆಂಗೀಕಾರ ದೊರೆತಿದೆ...
ವಿಧಾನಸಭೆ ಅಧಿವೇಶನ ಹಿನ್ನಲೆಯಲ್ಲಿ ಸುವರ್ಣ ವಿಧಾನಸೌಧಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
ವಿಧಾನಸಭೆ ಅಧಿವೇಶನ ಹಿನ್ನಲೆಯಲ್ಲಿ ಸುವರ್ಣ ವಿಧಾನಸೌಧಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಳಗಾವಿ: ರಾಜ್ಯದ್ಯಂತ ತೀವ್ರ ವಿವಾದ ಹಾಗೂ ಚರ್ಚೆಗೆ ಗ್ರಾಸವಾಗಿದ್ದ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ (ಕೆಪಿಎಂಇ)-2017ಕ್ಕೆ ಬುಧವಾರ ವಿಧಾನಸಭೆಯಲ್ಲಿ ಆಂಗೀಕಾರ ದೊರೆತಿದೆ. 
ಕೆಪಿಎಂಇ ತಿದ್ದುಪಡಿ ಕಾಯ್ದೆಗೆ ಅಂಗೀಕಾರ ದೊರೆತಿರುವ ಹಿನ್ನಲೆಯಲ್ಲಿ ಶೀಘ್ರದಲ್ಲಿಯೇ ಸರ್ಕಾರ ನಿಯಮಾವಳಿಗಳನ್ನು ರೂಪಿಸಿ ಅಧಿಸೂಚನೆ ಹೊರಡಿಸಲಿದೆ. ಸರ್ಕಾರ ಅಧಿಸೂಚನೆ ಹೊರಡಿಸಿದ ಬಳಿಕ ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ ಹಾಗೂ ಹಣ ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಸಂಬಂಧಿಕರಿಗೆ ಶವ ಹಸ್ತಾಂತರ ಮಾಡದೆ ಇರುವಂತಿಲ್ಲ. 
ಕಾಯ್ದೆಗೆ ಅಂಗೀಕಾರ ನೀಡುವ ಮೂಲಕ ಇಂತಹ ವಿಧೇಯತ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ರಾಜ್ಯ ಪಾತ್ರವಾಗಲಿದೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಪ್ರತಿಪಕ್ಷಗಳ ಆಕ್ಷೇಪಕ್ಕೆ ಉತ್ತರ ನೀಡಿದ್ದಾರೆ.
ವಿಧೇಯಕ ಕುರಿತ ಚರ್ಚೆಯಲ್ಲಿ ಭಾಗಿಯಾದ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸೇರಿದಂತೆ ವಿರೋಧ ಪಕ್ಷಗಳ ಹಲವು ನಾಯಕರು ಸರ್ಕಾರದ ವಿರುದ್ಧ ಕಿಡಿಕಾರಿದರು. 
ವಿಧೇಯಕದಲ್ಲಿ ಹವು ಲೋಪಗಳು ಈಗಲೂ ಇವೆ. ವಿಧೇಯಕದ ಪ್ರಕಾರ ಯಾರಿಗೂ ಚಿಕಿತ್ಸೆ ನಿರಾಕರಿಸುವಂತಿಲ್ಲ ಹಾಗೂ ಹಣ ನೀಡದಿದ್ದರೂ ಶವ ಹಸ್ತಾಂತರಿಸಬೇಕೆಂದು ಹೇಳಲಾಗಿದೆ. ಇದರಿಂದ ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳು ಬಡವರಿಗೆ ಚಿಕಿತ್ಸೆಯನ್ನೇ ನೀಡದೆ ಬೇರೆ ಆಸ್ಪತ್ರೆಗೆ ಒಯ್ಯುವಂತೆ ಕಳುಹಿಸುತ್ತವೆ. ಯಾವುದೇ ತುರ್ತು ಅನಾರೋಗ್ಯ ಸ್ಥಿತಿಯಲ್ಲಿ ರೋಗಿಯ ಜೀವ ಉಳಿಸುವ ಸಮಯವಾದ ಗೋಲ್ಡನ್ ಅವರ್ ನಲ್ಲಿ ಚಿಕಿತ್ಸೆ ದೊರೆಯದಿದ್ದರೆ ಬಡವರು ಪ್ರಾಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹರಿಹಾಯ್ದರು. 
ಪ್ರತಿಪಕ್ಷಗಳ ಈ ಟೀಕೆಗಳಿಗೆ ಉತ್ತರಿಸಿತ ಸಚಿವರು, ಸದದಲ್ಲಿಯೇ ಸರ್ಕಾರ ಯೂನಿವರ್ಸಲ್ ಹೆಲ್ತ್ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತದೆ. ಪ್ರತಿಯೊಬ್ಬ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ದಾರರಿಗೂ ಆಧಾರ್ ಕಾರ್ಡ್ ಲಿಂಕ್ ಮಾಡಿದ್ದೇವೆ. ಒಬ್ಬ ಬಿಪಿಎಲ್ ಕಾರ್ಡುದಾರನಾದ ರೋಗಿ ಖಾಸಗಿ ಆಸ್ಪತ್ರೆಗೆ ಯಾವುದೇ ಕಾಯಿಲೆಯಿಂದ ದಾಖಲಾಗಿದ್ದರೂ ಸರ್ಕಾರವೇ ವೈದ್ಯಕೀಯ ವೆಚ್ಚ ಭರಿಸುತ್ತದೆ ಎಂದು ಹೇಳಿದರು. 
ಒಂದಕ್ಕಿಂತ ಹೆಚ್ಚು ಕಾಯಿಲೆಗಳಿದ್ದರೂ ಅನುಸೂಚಿತ ದರದ ಪ್ರಕಾರ ಎಲ್ಲಾ ಹಣವನ್ನೂ ಸರ್ಕಾರವೇ ನೀಡುತ್ತದೆ ಹೀಗಾಗಿ ಯಾವುದೇ ಕಾರಣಕ್ಕೂ ಚಿಕಿತ್ಸೆ ನಿರಾಕರಿಸುವಂತಿಲ್ಲ. ಜೊತೆಗೆ ಚಿಕಿತ್ಸೆ ವಿಫಲವಾಗಿದ್ದರೆ ಹಣ ನೀಡಿಲ್ಲ ಎಂಬ ಕಾರಣಕ್ಕೆ ಶವ ಹಸ್ತಾಂತರಿಸಲು ನಿರಾಕರಿಸುವಂತಿಲ್ಲ. ಶೇ.90 ರಷ್ಟು ಬಿಪಿಎಲ್ ಕಾರ್ಡ್ ದಾರರಿದ್ದು, ಇವರ ಸಂಪೂರ್ಣ ಹಣವನ್ನು ಸರ್ಕಾರ ಭರಿಸುತ್ತದೆ. ಶೇ.10 ಎಪಿಎಲ್ ಕಾರ್ಡ್ ದಾರರಿಗೂ ಚಿಕಿತ್ಸೆ ಹಾಗೂ ಶವ ಹಸ್ತಾಂತರ ನಿರಾಕರಿಸುವಂತಿಲ್ಲ. ದೇಶದಲ್ಲಿಯೇ ಇಂತಹ ನಿಯ ಮೊದಲ ಬಾರಿಗೆ ತರುತ್ತಿದ್ದೇವೆಂದು ಹೇಳಿದರು. 
ಖಾಸಗಿ ವೈದ್ಯರಿಗೂ ಕಡಿವಾಣ
ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆ ಮಾದರಿಯಲ್ಲಿ ಸರ್ಕಾರಿ ವೈದ್ಯರ ನಿಯಂತ್ರಣ ಹಾಗೂ ಸರ್ಕಾರಿ ಆಸ್ಪತ್ರೆ ಕುಂದು-ಕೊರತೆ ಆಲಿಸಲು ಸ್ವತಂತ್ರ ಆಯೋಗ ಸಚನೆ ಮಾಡಲು ಮುಂದಿನ ಅಧಿವೇಶನದಲ್ಲಿ ಪ್ರತ್ಯೇಕ ಮಸೂದೆ ಮಂಡಿಸಲಾಗುತ್ತದೆ ಎಂದು ಸಚವ ರಮೇಶ್ ಕುಮಾರ್ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com