ಇಂದು ಬೆಳಗ್ಗೆ ಸುಮಾರು 8.30ರ ಹೊತ್ತಿಗೆ ಅಗ್ನಿಶಾಮಕ ಮತ್ತು ಸುರಕ್ಷ ಸೇವೆ ಸಿಬ್ಬಂದಿ ಹಾಗೂ ಕೇಂದ್ರ ಸೇನಾ ಮೀಸಲು ಪಡೆಯ ಸಿಬ್ಬಂದಿ ಕೆಲವು ಅವಧಿ ಮುಗಿದ ಅಶ್ರುವಾಯು ಶೆಲ್ ಗಳನ್ನು ನಾಶಪಡಿಸುತ್ತಿದ್ದರು. ಒಂದೇ ಸಲಕ್ಕೆ 12 ಶೆಲ್ ಗಳನ್ನು ನಾಶಪಡಿಸಲಾಯಿತು. ಇದರಿಂದ ಹೊರಬರುತ್ತಿದ್ದ ಗ್ಯಾಸ್ ಮೈಸೂರು ರಸ್ತೆಯನ್ನು ಆವರಿಸಿತು. ಇದರಿಂದ ಆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ತೀವ್ರ ತೊಂದರೆಯುಂಟಾಯಿತು. ತಕ್ಷಣವೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಎಚ್ಚರಿಸಲಾಯಿತು. ಅಲ್ಲಿಗೆ ಆಗಮಿಸಿದ ಸಿಬ್ಬಂದಿ ಹತ್ತಿರದ ಫ್ಯಾಕ್ಟರಿಯಿಂದ ಸೋರಿಕೆಯಾದ ಹೊಗೆಯಾಗಿರಬಹುದು ಎಂದು ಆರಂಭದಲ್ಲಿ ಶಂಕಿಸಿದರು.