ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಹಿರಿಯ ಜಿರಾಫೆ ಸಾವು

ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಹಿರಿಯ ಜಿರಾಫೆಯೊಂದು ಸಾವನ್ನಪ್ಪಿದೆ...
ಜಿರಾಫೆ
ಜಿರಾಫೆ
Updated on
ಮೈಸೂರು: ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಹಿರಿಯ ಜಿರಾಫೆಯೊಂದು ಸಾವನ್ನಪ್ಪಿದೆ. 
21 ವರ್ಷದ ಕೃಷ್ಣರಾಜ ಹೆಸರಿನ ಜಿರಾಫೆ ವಯೋಸಹಜದಿಂದ ಸಾವನ್ನಪ್ಪಿದೆ. ಇಂದು ಬೆಳಗ್ಗೆ ಜಿರಾಫೆ ಮೃತಪಟ್ಟಿದ್ದು ಹಲವು ದಿನಗಳಿಂದ ಸರಿಯಾಗಿ ಆಹಾರ ಸೇವಿಸದೆ ನಿತ್ರಾಣಗೊಂಡಿತ್ತು. 
ಕಳೆದ 21 ವರ್ಷಗಳಿಂದ ಮೃಗಾಲಯದ ಪ್ರಮುಖ ಆರಕ್ಷಣೆಯಾಗಿದ್ದ ಕೃಷ್ಣರಾಜ ಪ್ರವಾಸಿಗರಿಗೆ ಮನರಂಜನೆ ನೀಡುತ್ತಿತ್ತು. 
1988ರ ಮಾರ್ಚ್ 7ರಂದು ಜರ್ಮನಿಯಿಂದ ಹೆನ್ರಿ ಗಂಡು ಮತ್ತು ಹನಿ ಹೆಣ್ಣು ಜಿರಾಫೆಗಳನ್ನು ತರಿಸಿಕೊಳ್ಳಲಾಗಿತ್ತು. ಈ ಜೋಡಿ 1996ರ ಜೂನ್ 10ರಂದು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಈ ನಾಲ್ಕರ ಪೈಕಿ ಕೊನೆಯದಾಗಿ ಹುಟ್ಟಿದ್ದ ಮರಿಗೆ ಕೃಷ್ಣರಾಜ ಎಂದು ನಾಮಕರಣ ಮಾಡಲಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com