ಬೆಂಗಳೂರು: ಮುಸ್ಲಿಂ ಬಾಂಧವ ಹಬ್ಬ ಈದ್ ಮಿಲಾದ್ ಪ್ರಯುಕ್ತ ಈ ಹಿಂದೆ ಘೋಷಣೆಯಾಗಿದ್ದ ರಜೆಯನ್ನು ಡಿಸೆಂಬರ್ 2ಕ್ಕೆ ಮುಂದೂಡಲಾಗಿದೆ ಎಂದು ಸರ್ಕಾರ ಘೋಷಣೆ ಮಾಡಿದೆ.
ಈದ್ ಮಿಲಾದ್ ಪ್ರಯುಕ್ತ ಡಿಸೆಂಬರ್ 1 ರಂದು ನೀಡಿದ್ದ ಸಾರ್ವತ್ರಿಕ ರಜೆಯನ್ನು ರಾಜ್ಯ ಸರ್ಕಾರ ರದ್ಗುಗೊಳಿಸಿ ಡಿಸೆಂಬರ್ 2ಕ್ಕೆ ಸಾರ್ವತ್ರಿಕ ರಜೆ ಘೋಷಣೆ ಮಾಡಿದೆ. ಕಳೆದ ವರ್ಷ ಹೊರಡಿಸಿದ್ದ 2017ನೇ ಸಾಲಿನ ರಜಾ ದಿನಗಳ ಆದೇಶದಲ್ಲಿ ಡಿಸೆಂಬರ್ 1ರಂದು ಈದ್ ಮಿಲಾದ್ ರಜೆ ಘೋಷಣೆ ಮಾಡಲಾಗಿತ್ತು.
ಆದರೆ ಸೆಂಟ್ರಲ್ ಮೂನ್ ಕಮಿಟಿ ಸಭೆ ನಡೆಸಿ ಈ ಬಗ್ಗೆ ತೀರ್ಮಾನ ಕೈಗೊಂಡಿದ್ದು, ಡಿಸೆಂಬರ್ 1ರ ಬದಲಿಗೆ ಡಿಸೆಂಬರ್ 2ರಂದು ರಜೆ ಘೋಷಣೆ ಮಾಡುವ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಅಂದೇ ರಜೆ ಘೋಷಣೆ ಮಾಡಿದೆ.