ಬೆಂಗಳೂರು ವೈದ್ಯರ ಮನೆ, ಆಸ್ಪತ್ರೆ, ಫಾರ್ಮಾಗಳು ಸೇರಿ 29 ಕಡೆ ಐಟಿ ದಾಳಿ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಸಿಲಿಕಾನ್ ಸಿಟಿಯ ವೈದ್ಯಕೀಯ ಕ್ಷೇತ್ರವನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದು,....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಸಿಲಿಕಾನ್ ಸಿಟಿಯ ವೈದ್ಯಕೀಯ ಕ್ಷೇತ್ರವನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದು, ಡಾ. ಕಾಮಿನಿ ರಾವ್ ಹಾಗೂ ಇತರೆ ಏಳು ವೈದ್ಯರ ಮನೆ, ಆಸ್ಪತ್ರೆ ಹಾಗೂ ಇತರೆ ಆಸ್ತಿ ಪಾಸ್ತಿಗಳು ಸೇರಿದಂತೆ 29 ಕಡೆ ಏಕಕಾಲದಲ್ಲಿ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇಂದು ಬೆಳಗ್ಗೆ ಸ್ತ್ರೀ ರೋಗ ತಜ್ಞೆ ಡಾ. ಕಾಮಿನಿ ರಾವ್ ಅವರ ಮಿಲನ್ ಆಸ್ಪತ್ರೆ ಹಾಗೂ ಮನೆ ಸೇರಿದಂತೆ ಸುಮಾರು 29 ವಿವಿಧ ಸ್ಥಳಗಳಲ್ಲಿ ನೂರಕ್ಕು ಹೆಚ್ಚು ಅಧಿಕಾರಿಗಳು ದಾಳಿ  ನಡೆಸಿದ್ದು, ಇತರೆ ಏಳು ವೈದ್ಯರ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಖ್ಯವಾಗಿ ಶಿವಾನಂದ ವೃತ್ತದಲ್ಲಿರುವ ಕಾಮಿನಿ ರಾವ್‌ ಅವರ ಮಿಲನ್‌ ಆಸ್ಪತ್ರೆ, ಐಪಿಎಫ್ ಕ್ಲಿನಿಕ್ ಗಳು, ಡೈಗ್ನೊಸ್ಟಿಕ್ ಕೇಂದ್ರಗಳು ಮತ್ತು ಚಿಕ್ಕಪೇಟೆ, ಕಾಟನ್‌ ಪೇಟೆಗಳಲ್ಲಿರುವ ಮೆಡಿಸಿನ್‌ ಡಿಸ್ಟ್ರಿಬ್ಯೂಟರ್ಸ್‌ ಕಂಪೆನಿಗಳ ಮೇಲೆ ಅಧಿಕಾರಿಗಳು ತಂಡೋಪತಂಡವಾಗಿ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.
ದಾಖಲೆಗಳ ಪರಿಶೀಲನೆ ಮುಂದುವರಿದಿದ್ದು ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com