ರವಿ ಬೆಳಗೆರೆ, ಅನಿಲ್ ರಾಜ್ ಬಗ್ಗೆ ಉದಾರತೆ ತೋರಿ: ಸರ್ಕಾರಕ್ಕೆ 'ಹೈ' ಸಲಹೆ

ಶಾಸಕರ ವಿರುದ್ಧ ಲೇಖನ ಪ್ರಕಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಹಕ್ಕು ಬಾಧ್ಯತೆ ಸಮಿತಿಯಿಂದ ಒಂದು ವರ್ಷ ಜೈಲು....
ಅನಿಲ್ ರಾಜ್, ರವಿ ಬೆಳಗೆರೆ
ಅನಿಲ್ ರಾಜ್, ರವಿ ಬೆಳಗೆರೆ
Updated on: 
ಬೆಂಗಳೂರು: ಶಾಸಕರ ವಿರುದ್ಧ ಲೇಖನ ಪ್ರಕಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಹಕ್ಕು ಬಾಧ್ಯತೆ ಸಮಿತಿಯಿಂದ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ 'ಹಾಯ್‌ ಬೆಂಗಳೂರು' ಪತ್ರಿಕೆ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ರವಿ ಬೆಳಗೆರೆ ಹಾಗೂ ಮತ್ತೊಬ್ಬ ಪತ್ರಕರ್ತ ಹಾಗೂ ಅನಿಲ್ ರಾಜ್ ಅವರ ಬಗ್ಗೆ ಸ್ವಲ್ಪ ಉದಾರತೆ ತೋರಿಸಿ ಎಂದು ಹೈಕೋರ್ಟ್ ಗುರುವಾರ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ.
ಹಕ್ಕುಭಾದ್ಯತಾ ಸಮಿತಿಯ ಆದೇಶ ರದ್ದುಗೊಳಿಸುವಂತೆ ಕೋರಿ ರವಿ ಬೆಳಗೆರೆ ಹಾಗೂ ಅನಿಲ್ ರಾಜ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ನ್ಯಾಯಮೂರ್ತಿ ಎ.ಎಸ್‌ ಬೋಪಣ್ಣ ಅವರು, ಪ್ರಕರಣ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿರುವುದು ರಾಜ್ಯ ಸರ್ಕಾರ ಈ ಇಬ್ಬರು ಸಂಪಾದಕರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಾಗಲಿ ಅಥವಾ ಬಂಧಿಸುವುದಾಗಲಿ ಮಾಡಬೇಡಿ ಎಂದು ಮೌಖಿಕವಾಗಿ ಹೇಳಿದ್ದಾರೆ. ಅಲ್ಲದೆ ಈ ಸಂಬಂಧ ವಿಧಾನಸಭೆ ಮತ್ತು ಶಾಸಕರಿಗೆ ನೋಟಿಸ್ ನೀಡಿ ವಿಚಾರಣೆಯನ್ನು ಮುಂದಿನ ಬುಧವಾರಕ್ಕೆ ಮುಂದೂಡಿದ್ದಾರೆ.
ತಮ್ಮ ವಿರುದ್ಧದ ಆರೋಪಗಳು ಶಾಸಕರ ಹಕ್ಕು ಚ್ಯುತಿ ವ್ಯಾಪ್ತಿಗೆ ಒಳಪಡುವುದಿಲ್ಲ. ಹೈಕೋರ್ಟ್‌ ನಿರ್ದೇಶನದಂತೆ ಮತ್ತೂಮ್ಮೆ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಿದ್ದರೂ ಸಮಿತಿ ವಾದ ಮಂಡನೆಗೆ ಅವಕಾಶ ನೀಡಿಲ್ಲ. ಇದೀಗ ಬಂಧಿಸುವಂತೆ ಪೊಲೀಸರಿಗೆ ನಿರ್ದೇಶಿಸಲಾಗಿದೆ. ಹೀಗಾಗಿ ಹಕ್ಕುಭಾದ್ಯತಾ ಸಮಿತಿಯ ಆದೇಶ ರದ್ದುಗೊಳಿಸುವಂತೆ ಪತ್ರಕರ್ತರು ಕೋರ್ಟ್ ಗೆ ಮನವಿ ಮಾಡಿದ್ದರು.
ರವಿ ಬೆಳಗರೆ ಮತ್ತು ಯಲಹಂಕ ವಾಯ್ಸ್‌ ಪತ್ರಿಕೆಯ ಸಂಪಾದಕ ಅನಿಲ್‌ ರಾಜ್‌ ಅವರಿಗೆ ಹಕ್ಕು ಬಾಧ್ಯತಾ ಸಮಿತಿ ಒಂದು ವರ್ಷ ಜೈಲು ಶಿಕ್ಷೆ ಹಾಗೂ 10,000 ರುಪಾಯಿ ದಂಡ ವಿಧಿಸಿತ್ತು. ಇದನ್ನು ಮರು ಪರಿಶೀಲಿಸುವಂತೆ ಪತ್ರಕರ್ತರಿಬ್ಬರೂ ವಿಧಾನಸಭೆ ಅಧ್ಯಕ್ಷ ಕೆ.ಬಿ. ಕೋಳಿವಾಡ ಅವರಿಗೆ ಮನವಿ ಸಲ್ಲಿಸಿದ್ದರು. ಆದರೆ ಮನವಿಯನ್ನು ಕೋಳಿವಾಡ್ ಅವರು ತಿರಸ್ಕರಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com