ಬೆಂಗಳೂರು ನಗರ ಮಹಿಳೆಯರಿಗೆ ಸುರಕ್ಷಿತವಲ್ಲ: ಎನ್ ಸಿಆರ್ ಬಿ ವರದಿ

ನಗರದಲ್ಲಿ ದಿನಕ್ಕೊಂದು ಅಪರಾಧ ಪ್ರಕರಣಗಳು ನಡೆಯುತ್ತಿರುವಾಗ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ನಗರದಲ್ಲಿ ದಿನಕ್ಕೊಂದು ಅಪರಾಧ ಪ್ರಕರಣಗಳು ನಡೆಯುತ್ತಿರುವಾಗ ಬೆಂಗಳೂರು ಮಹಿಳೆಯರಿಗೆ ಮತ್ತು ಮಕ್ಕಳಿಗೆ ಅಷ್ಟೊಂದು ಸುರಕ್ಷಿತ ನಗರವಲ್ಲ ಎಂಬ ಆತಂತಕಕಾರಿ ಅಂಶ ಬೆಳಕಿಗೆ ಬಂದಿದೆ. 
ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗದ 2016ನೇ ವರದಿ ಪ್ರಕಾರ ದೇಶದ 19 ಮೆಟ್ರೊಪೊಲಿಟನ್ ನಗರಗಳಲ್ಲಿ ಅಪರಾಧ, ಹಿಂಸೆ, ಕೊಲೆ, ಲೈಂಗಿಕ ಕಿರುಕುಳ, ಅತ್ಯಾಚಾರ ಇತ್ಯಾದಿ ಘಟನೆಗಳು ನಡೆಯುವುದರಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿ ಮತ್ತು ಮಹಿಳೆಯರು ಹಾಗೂ ಮಕ್ಕಳ ಮೇಲೆ ನಡೆಯುವ ಅಪರಾಧ ಪ್ರಕರಣಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಇದರಲ್ಲಿ ಮುಂಬೈಗಿಂತಲೂ ಮುಂದುವರಿದಿದೆ.
ಆದರೆ ಬೇರೆ ದಕ್ಷಿಣ ಭಾರತದ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆ. ಬೆಂಗಳೂರಿನಲ್ಲಿ ಪ್ರತಿ ಲಕ್ಷ ಮಹಿಳೆಯರಲ್ಲಿ 84 ಮಂದಿ ಮೇಲೆ ಅಪರಾಧಗಳು ನಡೆಯುತ್ತದೆ. ದೆಹಲಿಯಲ್ಲಿ ಶೇಕಡಾ182.1ರಷ್ಟಿದ್ದು, ಲಕ್ನೋದಲ್ಲಿ ಶೇಕಡಾ 159.8 ಮತ್ತು ಜೈಪುರದಲ್ಲಿ ಶೇಕಡಾ 144.1ರಷ್ಟಿದೆ.
ಕೊಲೆ ಪ್ರಕರಣಗಳಲ್ಲಿ ಕೂಡ ಬೆಂಗಳೂರು ನಗರ ಎರಡನೇ ಸ್ಥಾನದಲ್ಲಿದೆ. ಅಪರಾಧ ಪ್ರಕರಣಗಳಲ್ಲಿ 6ನೇ ದೇಶದಲ್ಲಿ 6ನೇ ಸ್ಥಾನದಲ್ಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com